ಕಲುಷಿತ ನೀರು ಸೇವಿ 90ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Ravi Talawar
ಕಲುಷಿತ ನೀರು ಸೇವಿ 90ಕ್ಕೂ ಹೆಚ್ಚು ಮಂದಿ ಅಸ್ವಸ್ಥ
WhatsApp Group Join Now
Telegram Group Join Now

ಛತ್ರಪತಿ ಸಂಭಾಜಿನಗರ: ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಗ್ರಾಮವೊಂದರಲ್ಲಿ ಕಲುಷಿತ ನೀರು ಸೇವಿ 90ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿರುವ ಘಟನೆ ಸೋಮವಾರ ನಡೆದಿದೆ.

ಘಟನೆ ನಡೆದ ಮುಗಾಂವ ತಾಂಡಾ ಗ್ರಾಮದಲ್ಲಿ 107 ಮನೆಗಳಿದ್ದು, 440 ಜನಸಂಖ್ಯೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 93 ಜನರು ಕಿಬ್ಬೊಟ್ಟೆ ನೋವು ಮತ್ತು ಅತಿಸಾರ ಸಮಸ್ಯೆಯೊಂದಿಗೆ ಜೂನ್ 26 ಮತ್ತು 27 ರಂದು ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ್ದಾರೆಂದು ಜಿಲ್ಲಾ ಆರೋಗ್ಯ ಅಧಿಕಾರಿ ಬಾಲಾಜಿ ಶಿಂಧೆ ಮಾಹಿತಿ ನೀಡಿದ್ದಾರೆ.

ಮುಗಾಂವ್ ತಾಂಡಾ ಗ್ರಾಮದಲ್ಲಿ 56 ರೋಗಿಗಳು ಚಿಕಿತ್ಸೆ ಪಡೆದರೆ, 37 ಮಂದಿಯನ್ನು ಪಕ್ಕದ ಮಂಜರಂ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ, ಚಿಕಿತ್ಸೆ ನಂತರ ಬಿಡುಗಡೆಗೊಂಡಿದ್ದಾರೆಂದು ಹೇಳಿದ್ದಾರೆ.

ಇದರ ಬೆನ್ನಲ್ಲೇ ಮುಗಾಂವ್ ತಾಂಡಾ ಗ್ರಾಮಕ್ಕೆ ವೈದ್ಯರ ತಂಡ ಭೇಟಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಾವು ಸಮೀಕ್ಷೆಯನ್ನು ನಡೆಸಿದ್ದೇವೆ. ಸೋಂಕಿನ ಸಂಭವನೀಯ ಮೂಲವು ಗ್ರಾಮಸ್ಥರಿಗೆ ನೀರು ಕುಡಿದ ಬಾಯಿಯಾಗಿದೆ. ಇದೀಗ ಬಾವಿಗೆ ಸೀಲ್ ಮಾಡಲಾಗಿದ್ದು, ಸಮೀಪದ ಫಿಲ್ಟರ್ ಪ್ಲಾಂಟ್‌ನಿಂದ ಗ್ರಾಮಸ್ಥರಿಗೆ ನೀರು ಲಭ್ಯವಾಗುವಂತೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

WhatsApp Group Join Now
Telegram Group Join Now
Share This Article