ಧರಣಿ ಕುಳಿತ ಶ್ರೀರಾಮುಲು ಪೊಲೀಸರ ವಶಕ್ಕೆ 

Ravi Talawar
ಧರಣಿ ಕುಳಿತ ಶ್ರೀರಾಮುಲು ಪೊಲೀಸರ ವಶಕ್ಕೆ 
WhatsApp Group Join Now
Telegram Group Join Now
ಬಳ್ಳಾರಿ: ಜೂ 29  ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಳ್ಳಾರಿ ನಗರದಲ್ಲಿ ಅನಿರ್ಧಿಷ್ಟಾವಧಿ ಧರಣಿ ಕೈಗೊಂಡಿದ್ದ ಬಿಜೆಪಿ ನಾಯಕರನ್ನು ಶನಿವಾರ ಪೊಲೀಸರು ವಶಕ್ಕೆ ಪಡೆದರು.
ಧರಣಿ ನಡೆಯುತ್ತಿದ್ದ ಜಿಲ್ಲಾಧಿಕಾರಿ ಕಚೇರಿ ಬಳಿಗೆ ಬಂದ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕುಮಾರ್. ಡಿಎಸ್‌ಪಿ ಚಂದ್ರಕಾಂತ ನಂದ ರೆಡ್ಡಿ ಮತ್ತು ಸಿಬ್ಬಂದಿ ಮಾಜಿ ಸಚಿವ ಶ್ರೀರಾಮುಲು ಅವರನ್ನು ವಶಕ್ಕೆ ಪಡೆದರು. ಕಾರ್ಯಕರ್ತರನ್ನೂ ಬಸ್‌ನಲ್ಲಿ ಕರೆದೊಯ್ಯಲಾಯಿತು. ಈ ವೇಳೆ ಕಾಂಗ್ರೆಸ್ ಪಕ್ಷ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ದಿಕ್ಕಾರ ಕೂಗಲಾಯಿತು. ಇದರೊಂದಿಗೆ ಎರಡು ದಿನಗಳಿಂದ ನಡೆಯುತ್ತಿದ್ದ ಬಿಜೆಪಿ ಹೋರಾಟ ಅಂತ್ಯವಾಯಿತು. ‘ವಾಲ್ಮೀಕಿ ನಿಗಮದಲ್ಲಿ
ಸರ್ಕಾರದ ಪಾತ್ರ ಇರುವುದರಿಂದ ಸಿಎಂ ರಾಜೀನಾಮೆ ನೀಡಬೇಕು. ಶಾಸಕ ಬಿ.ನಾಗೇಂದ್ರ ಅವರನ್ನು ಕೂಡಲೇ ಬಂಧಿಸಬೇಕು. ಹಗರಣದ ಪ್ರತಿ ಪೈಸೆಯನ್ನೂ ವಸೂಲಿ ಮಾಡಬೇಕು. ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು’ ಎಂದು ಬಿಜೆಪಿ ಆಗ್ರಹಿಸಿದೆ.
WhatsApp Group Join Now
Telegram Group Join Now
Share This Article