ದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ರನ್ನು ನ್ಯಾಯಾಲಯವು ಸಿಬಿಐಗೆ ಒಪ್ಪಿಸಿದೆ. ಕೇಜ್ರಿವಾಲ್ ಅವರನ್ನು ಬುಧವಾರ (ಜೂನ್ 26) ಸಿಬಿಐ ಬಂಧಿಸಿದೆ. ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಕೇಜ್ರಿವಾಲ್ ಅವರನ್ನು ಬಂಧಿಸಲಾಗಿದೆ.
ದೆಹಲಿಯ ರೂಸ್ ಅವೆನ್ಯೂ ಕೋರ್ಟ್ಗೆ ಸಿಬಿಐ ಕೇಜ್ರಿವಾಲ್ ಅವರನ್ನು ಹಾಜರುಪಡಿಸಿತ್ತು, ಅಲ್ಲಿ ತನಿಖಾ ಸಂಸ್ಥೆ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥರನ್ನು ವಿಚಾರಣೆಗೆ ಕಸ್ಟಡಿಗೆ ಕೋರಿತ್ತು. ಮಂಗಳವಾರ (ಜೂನ್ 25) ಸಂಜೆ ತಿಹಾರ್ ಜೈಲಿನಲ್ಲಿ ಸಿಬಿಐ ಅಧಿಕಾರಿಗಳು ಕೇಜ್ರಿವಾಲ್ ಅವರನ್ನು ವಿಚಾರಣೆ ನಡೆಸಿದ್ದರು.
ಕೇಜ್ರಿವಾಲ್ ಅವರ ಅರ್ಜಿಯೊಂದು ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಅವರ ಬಂಧನವಾಗಿದೆ. ಈ ಅರ್ಜಿಯ ಮೂಲಕ ದೆಹಲಿ ಸಿಎಂ ದೆಹಲಿ ಹೈಕೋರ್ಟ್ನ ಜಾಮೀನು ಆದೇಶಕ್ಕೆ ತಡೆಯನ್ನು ಪ್ರಶ್ನಿಸಿದ್ದರು.
ವಾಸ್ತವವಾಗಿ, ದೆಹಲಿಯ ಕೆಳ ನ್ಯಾಯಾಲಯವು ಜೂನ್ 20 ರಂದು ಕೇಜ್ರಿವಾಲ್ಗೆ ಜಾಮೀನು ನೀಡಿತ್ತು, ಅದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಸಿಬಿಐ ಅಧಿಕೃತವಾಗಿ ಅವರನ್ನು ಬಂಧಿಸಿ ಕಸ್ಟಡಿಗೆ ತೆಗೆದುಕೊಂಡಿದೆ.
ತನಿಖಾ ಸಂಸ್ಥೆ ಅವರನ್ನು ತಿಹಾರ್ ಜೈಲಿನಲ್ಲಿ ವಿಚಾರಣೆಗೆ ಒಳಪಡಿಸಿತು ಮತ್ತು ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಹೇಳಿಕೆಯನ್ನು ದಾಖಲಿಸಿತ್ತು.