ವಿಜಯಪುರ – ಮಕ್ಕಳಲ್ಲಿ ರಾಷ್ಟ್ರಾಭಿಮನ, ಶಿಸ್ತು ಸಮಯಪ್ರಜ್ಞೆ, ಸೇವಾಮನೋಭವನೆ ಮೂಡಬೇಕಾದರೆ ಪ್ರತಿ ಶಾಲೆಗಳಲ್ಲೂ ಭಾರತ ಸೇವಾದಳ
ಕಾರ್ಯಚಟುವಟಿಕೆಗಳನ್ನು ಅಳವಡಿಸಿಕೊಳ್ಳಲು, ಹಾಗೂ ಶಾಲೆಗಳಲ್ಲಿ ಸೇವಾದಳ ಘಟಕಗಳನ್ನು ಪ್ರಾರಂಭಿಸಬೇಕೆಂದು ನಗರ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್ ಜೆ ಬಿರಾದಾರ ಹೇಳಿದರು.
ಭಾರತ ಸೇವಾದಳ ಜಿಲ್ಲಾ ಸಮಿತಿ ವಿಜಯಪುರ, ಶಾಲಾ ಶಿಕ್ಷಣ ಇಲಾಖೆ, ಹಾಗೂ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ನಂ, ೨೪ ವಿಜಯಪುರ
ಇವರುಗಳ ಸಹಯೋಗದಲ್ಲಿ ಆಯೋಜಿಸಲಾದ ಭಾರತ ಸೇವಾದಳ ಶಿಕ್ಷಕರ ಪುನಃಶ್ಚೇತನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತ ಸೇವಾದಳದ ವಲಯ ಸಂಘಟಕ ನಾಗೇಶ ಡೋಣೂರ ಅವರು ನಡೆಸಿಕೊಡುವ ರಾಷ್ಟ್ರೀಯ ಭಾವೈಕ್ಯತೆ, ರಾಷ್ಟ್ರಧ್ವಜ, ರಾಷ್ಟ್ರಗೀತೆ ಕುರಿತಾದ ಮಾಹಿತಿ ತುಂಬಾ ಅದ್ಭುತವಾಗಿದ್ದು ಎಲ್ಲಾ ಶಿಕ್ಷಕರು ಅವರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಕೋಶಾಧ್ಯಕ್ಷ ಡಿ ಬಿ ಹಿರೇಕುರುಬರ್ ಹಾಗೂ ಕಾರ್ಯಕ್ರಮದ ಅಧ್ಯಕ್ಷ ಮತ್ತು ಸೇವಾದಳದ ಜಿಲ್ಲಾ ಅಧ್ಯಕ್ಷ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ, ಸೇವಾದಳ ತಾಲೂಕು ಅಧ್ಯಕ್ಷ ಶಿವನಗೌಡ ಎಂ ಪಾಟೀಲ್, ಜಿಲ್ಲಾ ಸಮಿತಿ ಸದಸ್ಯ ಶ್ರೀಶೈಲ
ಬಳಗಾನೂರ, ಶಾಲಾ ಮುಖ್ಯಗುರು ವಿ ಆರ್ ಹಾಲವರ ಸೋಮಶೇಖರ ರಾಠೋಡ ಇನ್ನೂ ಹಲವರು ಉಪಸ್ಥಿತರಿದ್ದರು.
ಸೇವಾದಳ ಸಂಪನ್ಮೂಲ ಶಿಕ್ಷಕಿ ಎಮ್ ಎಮ್ ತೆಲಗಿ ಕಾರ್ಯಕ್ರಮ ನಿರೂಪಿಸಿದರು, ಎಲ್ ಎಲ್ ತೊರವಿ ಸ್ವಾಗತಿಸಿದರು, ಆರ್ ವಿ ಚೌವ್ಹಾಣ್ ವಂದಿಸಿದರು. ಇಂದಿನ ಕಾಯಾ೯ಗಾರದಲ್ಲಿ ತಾಲೂಕಿನಿಂದ ಕನಿಷ್ಟ ೫೦ ಜನ ಶಿಕ್ಷಕ/ಶಿಕ್ಷಕಿಯರು ಭಾಗವಹಿಸಿದ್ದರು.