ಯಾದಗಿರಿ : ಜಿಲ್ಲೆಯ ಶಹಾಪುರ ತಾಲ್ಲೂಕಿನ ಶಾರದಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಶಂಕ್ರಪ್ಪ.ವಿ.ಆಚಾರ್ಯ ಚಾರಿಟೇಬಲ್ ಟ್ರಸ್ಟ್ ಇವರ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ದಿ: 22-06-24ರ ಶನಿವಾರದಂದು ಆಯೋಜಿಸಲಾಗಿತ್ತು.
ಖ್ಯಾತ ಯೋಗ ಶಿಕ್ಷಕರಾದ ರಾಘವೇಂದ್ರ ಪತ್ತಾರ, ಶಹಾಪುರ ಇವರು ಶಾಲಾ ಮಕ್ಕಳಿಗೆ ಯೋಗ ಅಭ್ಯಾಸ ಮಾಡಿಸಿದರು. ನಂತರ ಕಾರ್ಯಕ್ರಮದಲ್ಲಿ ಶಂಕ್ರಪ್ಪ.ವಿ.ಆಚಾರ್ಯ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಸಂತೋಷ ಎಂ ಆಚಾರ್ಯ ಶಾರದಹಳ್ಳಿ ರವರು ಮಾತನಾಡಿ ಯೋಗವು ಮನುಷ್ಯನ ದೇಹಕ್ಕೆ ಅತಿ ಅವಶ್ಯವೆಂದರು.
ನಂತರ ಶಾಲೆಯ ಮುಖ್ಯ ಗುರುಗಳು ಮಾತನಾಡಿ ಯೋಗವು ನಿಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಮಕ್ಕಳಿಗೆ ಸೂಚಿಸಿದರು. ನಂತರ ಯೋಗ ಶಿಕ್ಷಕರು ಮಾತನಾಡಿ ದಿನನಿತ್ಯ ಯೋಗ ಮಾಡುವುದರಿಂದ ಶರೀರಕ್ಕಾಗುವ ಲಾಭಗಳ ಕುರಿತು ತಿಳಿಸಿ, ಕಾರ್ಯಕ್ರಮವನ್ನು ಆಯೋಜಿಸಿದ ಸಂತೋಷ ಎಂ. ಆಚಾರ್ಯ ಶಾರದಹಳ್ಳಿ ಇವರಿಗೆ ಹಾಗೂ ಶಾಲೆಯ ಮುಖ್ಯ ಗುರುಗಳಿಗೆ ಸಸಿ ನೀಡಿ ಸನ್ಮಾನಿಸಿ ಗೌರವಿಸಿದರು. ಶಂಕ್ರಪ್ಪ.ವಿ.ಆಚಾರ್ಯ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಯೋಗ ಶಿಕ್ಷಕರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಗುರುಗಳಾದ ಷಣ್ಮುಖಯ್ಯ ಹಿರೇಮಠ, ಎಸ್ಡಿಎಂಸಿ ಅಧ್ಯಕ್ಷರಾದ ಶಿವಪ್ಪ ಸಗರ, ಶಿಕ್ಷಕಿ ಅನುರಾಧಾ ಆದ್ವಾನಿ, ಶಿಕ್ಷಕಿ ಪ್ರಭಾವತಿ ಮೆಣಶಿಣಗಿ, ಶಿಕ್ಷಕಿ ಭಾರತಿ, ಶಿಕ್ಷಕಿ ಸೌಭಾಗ್ಯ, ಅತಿಥಿ ಶಿಕ್ಷಕಿ ರೇಣುಕಾ, ಅತಿಥಿ ಶಿಕ್ಷಕ ದೇವಿಂದ್ರಪ್ಪ, ಶಾಲೆಯ ವಿದ್ಯಾರ್ಥಿಗಳು ಹಾಗೂ ಶಾಲೆಯ ಹಳೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.