ಗದಗ: ಭಾರತೀಯ ಜನತಾ ಪಾರ್ಟಿ ಗದಗ್ ಜಿಲ್ಲಾ ಮಹಿಳಾ ಮೂರ್ಚಾ ವತಿಯಿಂದ ಇಂದು ಅಂತರಾಷ್ಟ್ರೀಯ ಯೋಗ ದಿನಾಚರಣೆ ಗದಗ ಬೆಟಿಗೇರಿ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಸಮುದಾಯ ಭವನದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಬಿಜೆಪಿ ಗದಗ ಶಹರ ಮಂಡಲ ಅಧ್ಯಕ್ಷರಾದ ಶ್ರೀ ಅನಿಲ್ ಅಬ್ಬಿಗೇರಿ ಅವರು ಆಗಮಿಸಿದ್ದು ಸಸಿಯನ್ನು ನೀರು ಬಿಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಜೀವನದಲ್ಲಿ ದಿನನಿತ್ಯದ ಯೋಗ ಅತಿ ಅವಶ್ಯಕವಾದದ್ದು ಯಾರು ಯೋಗ ದಿನ ನಿತ್ಯ ಮಾಡುತ್ತಾರೆ ಅವರ ಆರೋಗ್ಯವಾಗಿ ಇರುತ್ತಾರೆ ಹಾಗೆ ಯೋಗದಿಂದ ಪ್ರಾಣಾಯಾಮದಿಂದ ಶಾರೀರಿಕ ಹಾಗೂ ಮಾನಸಿಕ ನೆಮ್ಮದಿಯನ್ನು ಸಿಗುತ್ತದೆ ಎಂದು ಹೇಳಿದರು.
ಬಿಜೆಪಿ ಮಹಿಳಾ ಮೋರ್ಚಾ ಗದಗ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ನಿರ್ಮಲ ಕೊಳ್ಳಿ ಮಾತನಾಡಿ ಇಂದು ಶುಕ್ರವಾರ ಹಾಗೂ ಹುಣ್ಣಿಮೆ ಕೂಡ ಇಂತಹ ಒಂದು ಸುಸಂದರ್ಭದಲ್ಲಿ ದೇವರ ಸನ್ನಿಧಿಯಲ್ಲಿ ಸೇರಿದಂತ ನಾವೆಲ್ಲ ಮಹಿಳೆಯರು ದಿನನಿತ್ಯ ಯೋಗ ಮಾಡಿ ನಮ್ಮ ಆರೋಗ್ಯವನ್ನು ಕಾಯ್ದುಕೊಳ್ಳೋಣ ಎಂದು ಹೇಳಿದರು. ನಗರ ಮಂಡಲ ಪ್ರಧಾನ ಕಾರ್ಯದರ್ಶಿಯಾದ ದೇವೇಂದ್ರಪ್ಪ ಗೋಟುರವರು ಆಗಮಿಸಿದರು.
ಈ ಸಂದರ್ಭದಲ್ಲಿ ದಶರಥರಾಜ ಕೊಳ್ಳಿ, ಕಸ್ತೂರಿ ಕಮ್ಮಾರ, ಶಶಿಕಲಾ ಬೆಲೇರಿ ಮಂಜುಳಾ ಚನ್ನಪ್ಪನವರ್ ಸೀಮಾ ಚನ್ನಪ್ಪನವರ ಭಾಗ್ಯ ಆರಿ ಶೋಭಾ ಆರಿ ಸರೋಜ ಗಣಾಚಾರಿ ಕೀರ್ತಿ ಕಾಳಗಿ ಸುಜಾತಾ ಅಮ್ರದ ಸರಸ್ವತಿ ಮುದುಗಲ ಶಶಿಕಲಾ ಮುಧೋಳ ಮುಂತಾದವರು ಉಪಸ್ಥಿತರಿದ್ದರು.