9ನೇ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿ ಕರ್ನಾಟಕ ತಂಡಕ್ಕೆ ಪ್ರಶಸ್ತಿ ಪಡೆದ ಕರಾಟೆ ಪಟುಗಳು

Ravi Talawar
9ನೇ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿ ಕರ್ನಾಟಕ ತಂಡಕ್ಕೆ ಪ್ರಶಸ್ತಿ ಪಡೆದ ಕರಾಟೆ ಪಟುಗಳು
WhatsApp Group Join Now
Telegram Group Join Now
ಬಳ್ಳಾರಿ,ಡಿ.31: ಟ್ರೇಡಿಷನಲ್ ಶೊಟೊಕಾನ್ ಕರಾಟೆ ಅಕಾಡೆಮಿ ಕರ್ನಾಟಕ  ಕರಾಟೆ ಪಟುಗಳು ಇದೆ ಡಿಸೆಂಬರ್ 26 ರಿಂದ 28 (2024) ರವರೆಗೆ ದೆಹಲಿಯ ತಲ್ಕಟೋರಾ ಒಳ ಕ್ರೀಡಾಂಗಣದಲ್ಲಿ ನಡೆದ ನ್ಯಾಷನಲ್ ಶೊಟೊಕಾನ್ ಕರಾಟೆ ಇಂಡಿಯಾ ವತಿಯಿಂದ ಆಯೋಜಿಸಿದ, 9ನೇ ರಾಷ್ಟ್ರ ಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯವನ್ನು  ಪ್ರತಿನಿದಿಸಿದ ಕರಾಟೆ ಪಟುಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿ  ಕಟಾ ಮತ್ತು ಕುಮಿತೆ ವಿಭಾಗದಲ್ಲಿ 14 ವರ್ಷದ ಒಳಗಿನ  ವಯೋಮಿತಿಯಲ್ಲಿ ಬಾಲಕರ ಕಟಾ ವಿಭಾಗದಲ್ಲಿ ಸಾಗರ್ ಕವಾಸಿ ದ್ವಿತೀಯ ಸ್ಥಾನ, ಎಲ್ಲಾ ದೇವಾಂಷ್ ತ್ರಿತಿಯ ಸ್ಥಾನ, ಭುವನ್ ತೇಜಾ ತ್ರಿತಿಯ , ಅರ್ಜುನ ಸಾಯಿ ಕಟಾ ಪ್ರಥಮ ಮತ್ತು ಕುಮಿತೆ  ತ್ರಿತಿಯ ಸ್ಥಾನ, ಧನೀಷ್ ರೆಡ್ಡಿ.ಡಿ ಕಟಾ ಪ್ರಥಮ ಮತ್ತು ಕುಮಿತೆ  ತ್ರಿತಿಯ ಸ್ಥಾನ, ಸಂದೀಪ್.ಕೆ ಎಸ್.ಕಟಾ ದ್ವಿತೀಯ ಮತ್ತು ಕುಮಿತೆ ತ್ರಿತಿಯ ಸ್ಥಾನ, ಗೌತಮ್.ಡಿ ಆರ್. ಕಟಾ ದ್ವಿತೀಯ ಮತ್ತು ಕುಮಿತೆ ಪ್ರಥಮ ಸ್ಥಾನ, ಟಿ.ಸಾಯಿ ತೇಜಸ್  ಕಟಾ ತ್ರಿತಿಯ ಮತ್ತು ಕುಮಿತೆ ದ್ವಿತೀಯ ಸ್ಥಾನ, ಸಮರ್ಥ್ ಎಸ್ ಎಮ್. ಕಟಾ ತ್ರಿತಿಯ ಮತ್ತು ಕುಮಿತೆ ತ್ರಿತಿಯ ಸ್ಥಾನ, ಮಹೇಂದ್ರ ಪ್ರಸಾದ್ ಬಿಕೆ. ಕಟಾ ತ್ರಿತಿಯ ಮತ್ತು ಕುಮಿತೆ ತ್ರಿತಿಯ ಸ್ಥಾನ, ಅಭಿನಾಷ್ ಸಿಂಗ್ ಕಟಾ ತ್ರಿತಿಯ ಮತ್ತು ಕುಮಿತೆ ತ್ರಿತಿಯ ಸ್ಥಾನವನ್ನು ಪಡೆದಿದ್ದಾರೆ,
ಬಾಲಕಿಯರ ವಿಭಾಗದಲ್ಲಿ ಯಾಸ್ಮಿನ್* ಕಟಾ ದ್ವಿತೀಯ ಮತ್ತು ಕುಮಿತೆ ತ್ರಿತಿಯ ಸ್ಥಾನ, ಸರಸ್ವತಿ ಕುಲಕರ್ಣಿ ಕಟಾ ತ್ರಿತಿಯ ಮತ್ತು ಕುಮಿತೆ ಪ್ರಥಮ ಸ್ಥಾನ ಪಡೆದಿದ್ದಾರೆ. ಬಾಲಕರ  ವಿಭಾಗದಲ್ಲಿ18 ವರ್ಷ  ಮೇಲ್ಪಟ್ಟು ರಾಕೇಶ್ ವಿ‌ಪಿ.ಕಟಾ ದ್ವಿತೀಯ ಸ್ಥಾನ , ದಿನೇಶ್ ಕಟಾ ದ್ವಿತೀಯ ಸ್ಥಾನ, ನಬಿ ಸಾಹೇಬ್ ಕಟಾ ತ್ರಿತಿಯ ಮತ್ತು ಕುಮಿತೆ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ಪ್ರಶಸ್ತಿಗಳನ್ನು  ಕರ್ನಾಟಕದ ತಂಡಕ್ಕೆ   ಪಡೆದಿದ್ದಾರೆ ಎಂದು ಕರಾಟೆ ಅಕಾಡೆಮಿಯ ಹಿರಿಯ ತರಬೇತುದಾರರು ಹಾಗೂ ಅಧ್ಯಕ್ಷರಾದ ಕಟ್ಟೇಸ್ವಾಮಿ ಅವರು ತಿಳಿಸಿದ್ದಾರೆ.
ತಂಡದ ತರಬೇತುದಾರರಾಗಿ ಹುಲುಗಣ್ಣ ಮತ್ತು ಪ್ರಸಾದ್,   ಅಕಾಡಾಮಿಯ ಹಿರಿಯ ತರಬೇತುದಾರರು ಹಾಗೂ ತಾಂತ್ರಿಕ ನಿರ್ದೇಶಕರಾದ ಸುಭಾಷ್ ಚಂದ್ರ.ಎಮ್ ಸೇರಿದಂತೆ  ಕ್ರೀಡಾಭಿಮಾನಿಗಳು‌ ಪೋಷಕರು‌  ಅಭಿನಂದಿಸಿದ್ದಾರೆ.
WhatsApp Group Join Now
Telegram Group Join Now
Share This Article