ಗದಗ,11 ಭಾರತೀಯ ಜನತಾ ಪಾರ್ಟಿ ಗದಗ ಜಿಲ್ಲೆಯ ಜಿಲ್ಲಾ ಕಾರ್ಯಾಲಯದಲ್ಲಿ ವಿಶ್ವಗುರು, ಮಹಾಮಾನತವಾದಿ ಶ್ರೀ
ಬಸವೇಶ್ವರರ ೯೧೯ ನೇ ಬಸವ ಜಯಂತಿಯನ್ನ ಅದ್ಧೂರಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯರಾದ ಎಸ್.ವ್ಹಿ.ಸಂಕನೂರರವರು ಮಾತನಾಡುತ್ತ ಬಸವೇಶ್ವರರು ವಿಶ್ವಗುರುಗಳು ಅವರು ವಿಶ್ವಗುರು ಆಗಿದ್ದರಿಂದ ಇಂಗ್ಲೇಂಡ್‌ನ ಥೇಮ್ಸ್ ನದಿಯ ದಂಡಯ ಮೇಲೆ ಬಸವಣ್ಣನವರ ಮೂರ್ತಿಯನ್ನು ಸ್ಥಾಪಿಸಲಾಯಿತು. ಬಸವಣ್ಣನವರ ಆಚಾರ
ವಿಚಾರಗಳನ್ನ ವಿದೇಶಿಯರು ಕೂಡಾ ಪಾಲಿಸುತ್ತಿರುವರು.
ದಾಸೋಹ ಎಂದರೆ ಇಂದು ಮಠ ಮಂದಿರಗಳಲ್ಲಿ ನಡೆಯುವ ಪ್ರಸಾದ ವಿತರಣೆ ಮಾತ್ರ ಅಲ್ಲಾ ದಾಸೋಹ ಎಂದರೆ ನಾವು ದುಡಿದಿದ್ದರಲ್ಲಿ ಸ್ವಲ್ಪನಾದರೂ ಸಮಾಜಕ್ಕೆ ಅರ್ಪಿಸಬೇಕು. ದೀನ ದಲಿತರು, ಬಡವರು ಹಾಗು ಸಮಾಜದಲ್ಲಿ ತುಳಿತಕ್ಕೆ ಒಳಗಾದ ಜನತೆಗೆ ನಾವು ದುಡಿದಿದ್ದರಲ್ಲಿ ಸ್ವಲ್ಪ ಭಾಗವನ್ನಾದರು ಹಂಚಿದರೆ ಮನಸ್ಸಿಗೆ ನೆಮ್ಮದಿ ಸಿಗುವದು. ನಮ್ಮಲ್ಲಿರುವ ಸಂಪತ್ತು ಕಳ್ಳಕಾಕರ ಪಾಲಾಗದೆ ಸತ್ಕಾರ್ಯಗಳಿಗೆ ಸದುಪಯೋಗವಾಗುವದು ನೆಮ್ಮದಿಯ ಬದುಕು
ನಮ್ಮದಾಗುವದೆಂದು ಮಾತನಾಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ತೋಟಪ್ಪ(ರಾಜು) ಕುರುಡಗಿ ರವರು ೧೨ ನೇ ಶತಮಾನದಲ್ಲಿ ಜಾತಿ, ಜಾತಿಯ ನಡುವೆ ಸಂಘರ್ಷಗಳಿದ್ದವು. ಯಾವ ಜಾತಿಯು ಮೇಲಲ್ಲಾ, ಕೀಳಲ್ಲಾ ದಲಿತರಿಗು ಕೂಡ ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಸಿಗುವ ಹಾಗೆ ಮಾಡಿದರು. ೧೨ನೇ ಶತಮಾನದಲ್ಲಿಯ ಶಿವಶರಣ ಶರಣೆಯರು ಕಾಯಕ ದಾಸೊಹಗಳನ್ನು ನಂಬಿ ಅವುಗಳ ಸವಿಯನ್ನು ಅನುಭವಿಸಿ ಸಾರ್ಥಕ ಬದುಕನ್ನು ಸಾಧಿಸಿ ಮಕುಲಕ್ಕೆ ಮಾದರಿಯಾಗಿರುವರು. ಶರಣರು ಕಾಯಕ
ದಾಸೋಹದ ಬಗ್ಗೆ ಕೇವಲ ವಚನಗಳನ್ನು ರಚಿಸಲಿಲ್ಲಾ. ನುಡಿದಂತೆ ನಡೆದು ತಮ್ಮ ನಿತ್ಯ ಬದುಕಿನಲ್ಲಿ ಅಳವಡಿಸಿಕೊಂಡು ಬಾಳಿ ಬದುಕಿದರು. ಅವರ ತತ್ವ ಆಚರಣೆಗಳನ್ನು ಇಂದಿಗೂ ನಮ್ಮ ಬದುಕಿಗೆ ದಾರಿದೀಪವಾಗಿದೆ ಎಂದು ಮಾತನಾಡಿದರು.
ಜಿಲ್ಲಾ ವಕ್ತಾರರಾದ ಎಂ.ಎಂ. ಹಿರೇಮಠರವರು ಮಾತನಾಡುತ್ತ ಬಸವಣ್ಣನವರು ಕಾಯಕಕ್ಕೆ ಹೆಚ್ಚಿನ ಆಧ್ಯತೆಯನ್ನು ನೀಡಿದರು. ಕಾಯಕ ಎಂದರೆ ಕಸಬು, ಕೆಲಸ, ದುಡಿಮೆ, ವೃತ್ತಿ ಎಂದು ಹೇಳಿದರು ಕಾಯಕವೇ ಕೈಲಾಸ ಎಂದು ನಂಬಿ ನಾವು ಮಾಡುವ ಯಾವುದೇ ಉದ್ಯೋಗವಿದ್ದರು ಅದರಲ್ಲಿ ಪ್ರಾಮಾಣಿಕತೆ, ನಿಷ್ಠುರತೆ ಇರಬೇಕು ಇದನ್ನು ಬಿಟ್ಟು ಬೇರೆಯವರಿಗೆ ನಮ್ಮ ಕಾಯಕದಿಂದ ನೋವಾಗಬಾರದು ಎಂದರು.
ಹಿರಿಯರಾದ ಎಂ.ಎಸ್.ಕರೀಗೌಡ್ರ ಮಾತನಾಡುತ್ತ ಬಸವಣ್ಣನವರ ವಚನಗಳನ್ನು, ಕನಕದಾಸರ, ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು
ಕಾಯಕದಲ್ಲಿ ನಿರತನಾದರೆ ಗುರುದರ್ಶನವನ್ನು ಮರೆಯಬೇಕು, ಲಿಂಗ ಪೂಜೆಯಾದರು ಮರೆಯಬೇಕು, ಜಂಗಮ ಮುಂದಿದ್ದರೂ ಹಂಗು ಹರಿಯಬೇಕು,
ಕಾಯಕಕ್ಕಿಂತ ಗುರು, ಲಿಂಗ, ಜಂಗಮ ಇವರ‍್ಯಾರು ದೊಡ್ಡವರಲ್ಲಾ. ಕಾಯಕದಲ್ಲಿ ಎಲ್ಲವು ಇದೆ ಎಂದು ಮಾರ್ಮಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿದರು ಸಿದ್ದು ಪಲ್ಲೇದ, ಅಶೋಕ ಸಂಕಣ್ಣವರ, ಭೀಮಸಿಂಗ ರಾಠೋಡ, ಕೆ.ಕೆ.ಮಳಗೌಡ್ರ,
ಕೆ.ಪಿ.ಕೊಟಿಗೌಡ್ರ, ಸುಧೀರ ಕಾಟಿಗರ, ಮಂಜುನಾಥ ಶಾಂತಗೇರಿ, ಸಂತೋಷ ಅಕ್ಕಿ, ರಾಜೇಶ ಕಟ್ಟಿಮನಿ, ಸಂತೋಷ ಕಲ್ಯಾಣಿ, ವಿಶ್ವನಾಥ ಶಿರಿಗಣ್ಣವರ, ಎಸ್.ಕೆ.ಉಮಚಗಿ, ರವಿ ಮಾನ್ವಿ, ಮಾಂತೇಶ ಬಾತಾಖಾನಿ, ಶಾಂತೆಶ ಚವಡಿ, ಯೋಗೇಶ್ವರಿ ಭಾವಿಕಟ್ಟಿ, ವಿನೋದ ಹಂಸನೂರ ಹಾಗು ಇನ್ನೂ ಹಲವಾರು ಪ್ರಮುಖರುಗಳು ಭಾಗವಹಿಸಿದ್ದರು. ನಗರ ಅಧ್ಯಕ್ಷರಾದ ಅನೀಲ ಅಬ್ಬಿಗೇರಿ ರವರು ಸರ್ವರನ್ನು ಸ್ವಾಗತಿಸಿ ವಂದಿಸಿದರು. ರಮೇಶ ಸಜ್ಜಗಾರ ಕಾರ್ಯಕ್ರಮ ನಿರೂಪಿಸಿದರು.