ಬಾಗಲಕೋಟೆ : ಮಾರ್ಚ ೨7 : ಬಾಗಲಕೋಟೆ ವಿಧಾನಸಭಾ ಉಪ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾದ ಗುರುವಾರದಂದು ೧೪ ಅಭ್ಯರ್ಥಿಗಳ ಪೈಕಿ ೫ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದ್ದಿದ್ದು, ಅಂತಿಮವಾಗಿ ಚುನಾವಣಾ ಕಣದಲ್ಲಿ ೯ ಅಭ್ಯರ್ಥಿಗಳು ಇದ್ದಾರೆಂದು ಚುನಾವಣಾಧಿಕಾರಿ ಸಂತೋಷ ಜಗಲಾಸರ ತಿಳಿಸಿದ್ದಾರೆ.
ಅಂತಿಮ ಚುನಾವಣಾ ಕಣದಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್‌ನಿಂದ ಉಮೇಶ ಹುಲ್ಲಪ್ಪ ಮೇಟಿ, ಭಾರತೀಯ ಜನತಾ ಪಾರ್ಟಿಯಿಂದ ಚರಂತಿಮಠ ವೀರಭದ್ರಯ್ಯ, ಉತ್ತಮ ಪ್ರಜಾಕೀಯ ಪಾರ್ಟಿಯಿಂದ ಅಂತೋಷ ಸವ್ವಾಸೆ, ಜನತಾ ಚಳುವಳಿ ಭಾರತ ಪಕ್ಷದಿಂದ ತೇಜೋರಾಮಶೆಟ್ಟಿ ದೇವಾಂಗ, ಕರ್ನಾಟಕ ರಾಷ್ಟ್ರ ಸಮತಿಯಿಂದ ನಾಗರಾಜ ಕಲಕುಟಗರ, ಬ್ಲೂ ಇಂಡಿಯಾ ಪಾರ್ಟಿಯಿಂದ ತಳವಾರ ಶಿವಕುಮಾರ, ಆಲ್ ಇಂಡಿಯಾ ಜನರಕ್ಷ ಪಾರ್ಟಿಯಿಂದ ಸಿದ್ದಪ್ಪ ಗೋಡಿ, ಪಕ್ಷೇತರದಿಂದ ಆನಂದ ಜಕಾತಿ, ರವಿ ಶಿವಪ್ಪ ಪಡಸಲಗಿ ಉಳಿದುಕೊಂಡಿದ್ದಾರೆ.
ಪಕ್ಷೇತರದಿಂದ ಗೋವಿಂದರಾಜ ಬಳ್ಳಾರಿ, ಅಬ್ದುಲ್‌ರಜಾಕ ಬಾಳೀಕಾಯಿ, ಆಯ್ಯುಬಖಾನ ಲಾಲಸಾಬ ಬಾಗೇವಾಡಿ, ಪ್ರಶಾಂತ ಶರಣಪ್ಪ ರಾವ ಹಾಗೂ ಯಂಕಪ್ಪ ಬಾಪಣ್ಣ ಕಮತಗಿ ಅವರು ತಮ್ಮ ನಾಮಪತ್ರವನ್ನು ಹಿಂಪಡೆದಿದ್ದಾರೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.


