ಹೊಸಪೇಟೆ: ತಾಯಮ್ಮ ಶಕ್ತಿ ಸಂಸ್ಥೆ ನಗರದ. ನಂ 88 ಮುದ್ಲಾಪುರ ದಲ್ಲಿ ಮಹಿಳೆಯರಿಗೆ ಸ್ವಾವಲಂಬಿ ಬದುಕು ನಡೆಸಲು ನೆರವಾಗುವ ಟೈಲರಿಂಗ್ ತರಗತಿಗಳನ್ನು ಆರಂಭಸಿ ದುಡಿಮೆ ಮಾರ್ಗ ಕ್ಕೆ ಅನುಕೂಲ ಕಲ್ಪಿಸಿ ಕೊಟ್ಟದ್ದಾರೆ .. ಈ ಸಂಧರ್ಭದಲ್ಲಿ ಮಾತನಾಡಿದ ತಾಯಮ್ಮ ಶಕ್ತಿ ಸಂಘದ ಅದ್ಯಕ್ಷೆ ಕವಿತಾ ಸಿಂಗ್ ಮಹಿಳೆ ಜೀವನದ ಯಾವುದೇ ಸಂದರ್ಭದಲ್ಲಿ ಕೈ ಕಟ್ಟಿ ಕುಳಿತು ಕೊಳ್ಳಬಾರದು, ಪುರುಷರಿಗೆ ಜೊತೆಯಾಗಿ ದುಡಿಮೆ ಕಂಡು ಕೊಳ್ಳುವಲ್ಲಿ ಮುಂದುವರಿಯ ಬೇಕಿದೆ .ಇಲ್ಲದೆ ಹೋದಲ್ಲಿ ಕುಟುಂಬ ಆರ್ಥಿಕವಾಗಿ ಕುಗ್ಗುವದರೊಂದಿಗೆ ಅನೇಕ ಕೌಟುಂಬಿಕ ಮತ್ತು ಸಾಮಾಜಿಕ ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ, ಆದ್ದರಿಂದ ಇಂತಹ ಸಮಸ್ಯೆ ಗಳು ತಲೆದೋರಲಿರಲೆಂದು, ತಾಯಮ್ಮ ಶಕ್ತಿ ಸಂಘ ಮಹಿಳೆಯರಿಗಾಗಿ ಟೈಲರಿಂಗ್ ನಂತಹ ಗುಡಿ ಕೈಗಾರಿಕಾ ಯೋಜನೆ ಗಳನ್ನು ತರುತ್ತಿದೆ, ಇವುಗಳ ಸದುಪಯೋಗ ಪಡೆದು ಉಜ್ವಲ ಬದುಕು ರೂಪಿಸಿಕೊಳ್ಳಿ ಎಂದು “ಮಗ್ಗಂ ವರ್ಕ್ಸ್” ಕೆಂದ್ರ ವನ್ನು ಉದ್ಘಾಟಿಸಿ ಮಹಿಳೆಯರಿಗೆ ಸಲಹೆ ನೀಡಿದರು. ಈ ಮಗ್ಗಂ ವಕ್ಸ್೯ ಕೇಂದ್ರ ದ ಉದ್ಘಾಟನೆಗೆ ಸ್ಥಳೀಯ ರಾದ ಎಲ್ಲಮ್ಮ, ವೆಂಕಟಮ್ಮ, ಹಾಗು ಸಮಾಜ ಸೇವಕರಾದ ನಾಗರಾಜ್ , ಅಲ್ಲದೆ ಸಂಘದ ಸದಸ್ಯರಾದ ಲಲಿತ ನಾಯಕ, ಪ್ರಮೀಳಾ, ಡಿ.ವಿಜಯ ಕುಮಾರಿ, ಶೋಭಾ ಗಾಯಕವಾಡ್, ಶೋಭಾ.ಏ. ಮುಂತಾದವರು ಭಾಗಿಯಾಗಿದ್ದರು..


