ಬೆಂಗಳೂರು: ಸೂಕ್ತ ಸೌಲಭ್ಯಗಳೊಂದಿಗೆ ಯೋಜನೆಗಳನ್ನು ಪೂರ್ಣಗೊಳಿಸಿದ್ದರೂ, ಸರ್ಕಾರದ ವಿವಿಧ ಇಲಾಖೆಗಳಿಂದ ಕ್ಲಿಯರೆನ್ಸ್ ಸಿಗದೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ತನ್ನ ಎರಡು ಪ್ರಮುಖ ಯೋಜನೆಗಳಾದ ಕೊಮ್ಮಘಟ್ಟ ಹಂತ-3 ಮತ್ತು ಬಿಡಿಎ ವಿಲ್ಲಾ ಹುಣ್ಣಿಗೆರೆ ಯೋಜನೆಯ ಫ್ಲಾಟ್‌ಗಳನ್ನು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಹಲವು ತಿಂಗಳಿಂದ ಬಿಡಿಎಗೆ ಅಗತ್ಯ ಮಂಜೂರಾತಿ ನೀಡದ ಕಾರಣ ಸರ್ಕಾರದ ವಿವಿಧ ಇಲಾಖೆಗಳನ್ನು ಅಧಿಕಾರಿಗಳು ದೂರುತ್ತಿದ್ದಾರೆ. ಪರಿಣಾಮವಾಗಿ ಬಿಡಿಎ ಹೂಡಿಕೆ ಮಾಡಿದ 800 ಕೋಟಿ ರೂ. ಸ್ಟ್ರಕ್ ಆಗಿದೆ.
ಕುಂಬಳಗೋಡಿನ ಕೊಮ್ಮಘಟ್ಟ ಹಂತ-3 ಯೋಜನೆಯು 2BHK ಮತ್ತು 3BHKಯ 600 ಫ್ಲಾಟ್‌ಗಳನ್ನು ಹೊಂದಿದೆ ಎಂದು ಬಿಡಿಎ ಮೂಲಗಳು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿವೆ.
ಈ ”ಯೋಜನೆ ಪೂರ್ಣಗೊಂಡು ಒಂದು ವರ್ಷವಾಗಿದೆ. ಆದರೆ, ವಿದ್ಯುತ್ ತಪಾಸಣಾ ನಿರ್ದೇಶನಾಲಯದಿಂದ ಅನುಮತಿ ಮತ್ತು ಅಗ್ನಿಶಾಮಕ ಇಲಾಖೆ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನಿರಾಕ್ಷೇಪಣಾ ಪ್ರಮಾಣಪತ್ರವಿಲ್ಲದೆ ಹಂಚಿಕೆ ಪ್ರಕ್ರಿಯೆ ಮುಂದುವರಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಇಲ್ಲಿ 500 ಕೋಟಿ ರೂ. ಹೂಡಿಕೆ ಮಾಡಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.