ಚೆನ್ನೈ, ಜೂನ್ 17: ತಮಿಳುನಾಡಿನಲ್ಲಿ ಸೋಮವಾರ ಸಂಜೆ 80 ವರ್ಷದ ಮಹಿಳೆ ಮನೆಯ ಹೊರೆಗ ವಾಕಿಂಗ್ ಮಾಡುತ್ತಿದ್ದಾಗ ಕುಡಿದ ಮತ್ತಿನಲ್ಲಿದ್ದ ಸುಂದರವೇಲ್ ಎಂಬ ವ್ಯಕ್ತಿ ಆ ವೃದ್ಧೆಯನ್ನು ಅಪಹರಿಸಿ, ಅವರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ನಂತರ ಅವರ ಮೈಮೇಲಿದ್ದ ಒಡವೆಗಳನ್ನು ದೋಚಿಕೊಂಡು ಪರಾರಿಯಾಗಿದ್ದಾನೆ. ಆ ವೃದ್ಧೆ ಪ್ರಜ್ಞಾಹೀನರಾಗಿ ಬಿದ್ದಿರುವುದನ್ನು ಕಂಡ ಸ್ಥಳೀಯರು ಅವರನ್ನು ರಕ್ಷಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಮಿಳುನಾಡಿನ ಕಡಲೂರು ಜಿಲ್ಲೆಯ ಪನ್ರುಟ್ಟಿ ಬಳಿ ಈ ಘಟನೆ ನಡೆದಿದೆ. ಪೊಲೀಸರು ಆರಂಭದಲ್ಲಿ ಈ ಕೃತ್ಯದಲ್ಲಿ ಹಲವಾರು ವ್ಯಕ್ತಿಗಳು ಭಾಗಿಯಾಗಿದ್ದಾರೆಂದು ಶಂಕಿಸಿದ್ದರು. ಆದರೆ ನಂತರ ಹಲ್ಲೆ ಮತ್ತು ದರೋಡೆಗೆ ಒಬ್ಬ ವ್ಯಕ್ತಿ ಮಾತ್ರ ಕಾರಣ ಎಂದು ಹೇಳಿದ್ದಾರೆ.
80 ವರ್ಷದ ವೃದ್ಧೆ ಮೇಲೆ ಲೈಂಗಿಕ ದೌರ್ಜನ್ಯ: ತಮಿಳುನಾಡಿನಲ್ಲಿ ನೀಚ ಕೃತ್ಯ

ತನ್ನ ಮಗನೊಂದಿಗೆ ವಾಸಿಸುವ ಮಹಿಳೆ ಬೆಳಿಗ್ಗೆ ಮತ್ತು ಸಂಜೆ ವಾಕಿಂಗ್ ಹೋಗುತ್ತಾರೆ. ಸೋಮವಾರ ಸಂಜೆ, ಅವರು ಹೊರಗೆ ನಡೆದುಕೊಂಡು ಹೋಗುತ್ತಿದ್ದಾಗ, ಒಬ್ಬ ವ್ಯಕ್ತಿ ಅವರನ್ನು ಅಡ್ಡಗಟ್ಟಿ, ಅಪಹರಿಸಿ, ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಬಾಯಿ ಮುಚ್ಚಿ, ಅತ್ಯಾಚಾರ ಮಾಡಿ, ಸುಮಾರು 8 ಗ್ರಾಂ ಚಿನ್ನಾಭರಣಗಳನ್ನು ದೋಚಿದ್ದಾನೆ ಎಂದು ಆರೋಪಿಸಲಾಗಿದೆ. ಈ ಆಘಾತಕಾರಿ ಘಟನೆಯ ನಂತರ, ಪೊಲೀಸರು 4 ವಿಶೇಷ ತಂಡಗಳನ್ನು ರಚಿಸಿದರು. ಇನ್ಸ್ಪೆಕ್ಟರ್ ವೇಲುಮಣಿ ನೇತೃತ್ವದ ತಂಡಗಳಲ್ಲಿ ಒಂದು, ಶಂಕಿತ ಸುಂದರವೇಲ್ ಗ್ರಾಮದಲ್ಲಿ ಅಡಗಿಕೊಂಡಿದ್ದಾನೆ ಎಂಬ ಮಾಹಿತಿಯ ಆಧಾರದ ಮೇಲೆ ಕಡಂಪುಲಿಯೂರ್ಗೆ ಧಾವಿಸಿ ಅವನನ್ನು ಬಂಧಿಸಲು ಪ್ರಯತ್ನಿಸಿತು.