ಅಥಣಿ ಕ್ಷೇತ್ರದ 8 ಹಿರಿಯ ಪ್ರಾಥಮಿಕ ಶಾಲೆಗಳು ಪ್ರೌಢಶಾಲೆಗಳಾಗಿ ಮೇಲ್ದರ್ಜೆ: ಸರ್ಕಾರಕ್ಕೆ ಶಾಸಕ ಸವದಿ ಅಭಿನಂದನೆ

Ravi Talawar
ಅಥಣಿ ಕ್ಷೇತ್ರದ 8 ಹಿರಿಯ ಪ್ರಾಥಮಿಕ ಶಾಲೆಗಳು ಪ್ರೌಢಶಾಲೆಗಳಾಗಿ ಮೇಲ್ದರ್ಜೆ: ಸರ್ಕಾರಕ್ಕೆ ಶಾಸಕ  ಸವದಿ ಅಭಿನಂದನೆ
WhatsApp Group Join Now
Telegram Group Join Now

ಅಥಣಿ:  ಕ್ಷೇತ್ರದ 8 ಹಿರಿಯ ಪ್ರಾಥಮಿಕ ಶಾಲೆಗಳು ಪ್ರೌಢಶಾಲೆಗಳಾಗಿ ಮೇಲ್ದರ್ಜೆ, ರಾಜ್ಯ ಸರ್ಕಾರಕ್ಕೆ ಶಾಸಕ ಲಕ್ಷ್ಮಣ ಸವದಿ ಅಭಿನಂದನೆ. ಅಥಣಿ: ಪ್ರೌಢಶಾಲೆಗಳ ಸ್ಥಾಪನೆಯಿಂದ ಸ್ಥಳೀಯ ವಿದ್ಯಾರ್ಥಿಗಳಿಗೆ ತಮ್ಮ ಹಳ್ಳಿಯಲ್ಲೇ ಪ್ರೌಢಶಿಕ್ಷಣ ಪಡೆಯುವ ಅವಕಾಶ ಸಿಗಲಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುವುದರೊಂದಿಗೆ, ಹತ್ತಿರದ ಪಟ್ಟಣಗಳಿಗೆ ಹೋಗುವ ಅವಶ್ಯಕತೆ ಕಡಿಮೆಯಾಗಲಿದೆ. ಕ್ಷೇತ್ರದ ಶೈಕ್ಷಣಿಕ ಗುಣಮಟ್ಟ ಹೆಚ್ಚುವ ನಿರೀಕ್ಷೆಯಿದೆ ಎಂದು ಶಾಸಕ ಲಕ್ಷö್ಮಣ ಸವದಿ ಹೇಳಿದರು.

ಅಥಣಿ ಮತಕ್ಷೇತ್ರದ ಒಟ್ಟು ೮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ೨೦೨೫-೨೬ನೇ ಶೈಕ್ಷಣಿಕ ವರ್ಷದಿಂದ ಪ್ರೌಢಶಾಲೆಗಳಾಗಿ ಮೇಲ್ದರ್ಜೆಗೆ ಏರಿಸಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಮಹತ್ವದ ನಿರ್ಧಾರಕ್ಕೆ ಸಂತೋಷ ವ್ಯಕ್ತಪಡಿಸಿದ ಶಾಸಕ ಲಕ್ಷ್ಮಣ ಸವದಿ ಕಳೆದ ಹಲವು ದಶಕಗಳಿಂದ ಅಥಣಿ ಪಟ್ಟಣದಲ್ಲಿ ಸರಕಾರಿ ಪ್ರೌಢ ಶಾಲೆ ಇರುಲಿಲ್ಲ, ಸರಕಾರಕ್ಕೆ ಕ್ಷೇತ್ರದ ಒಟ್ಟು ೮ ಶಾಲೆಗಳನ್ನು ಮೇಲ್ದರ್ಜೆಗೆ ಎರಿಸಿಲು ಪ್ರಸ್ತಾವಣೆ ಸಲ್ಲಿಸಿ ಕೆಲವೆ ದಿನಗಳಲ್ಲಿ ಸರಕಾರ ಅನುಮೋದನೆ ನೀಡಿರುವದು ಕ್ಷೇತ್ರದಲ್ಲಿ ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ಸಹಕಾರಿಯಾಗಲಿದೆ, ಕ್ಷೇತ್ರದ ಜನತೆ ಪರವಾಗಿ ಕೃತಜ್ಞತೆಗೆಳನ್ನು ಸರಕಾರಕ್ಕೆ ಸಲ್ಲಿಸಿದರು.

ಅಥಣಿ ಪಟ್ಟಣದಲ್ಲಿ ಮೇಲ್ದರ್ಜೆಗೊಂಡ ಶಾಲೆಗಳು: ಸ.ಕ. ಹಿ.ಪ್ರಾ.ಶಾಲೆ, ವಿಕ್ರಮಪುರ, ಸ.ಕ.ಹಿ.ಪ್ರಾ.ಶಾಲೆ, ಗವಿಸಿದ್ದೇಶ್ವರ ಮಡ್ಡಿ, ಅಥಣಿ. ಗ್ರಾಮೀಣ ವಿಭಾಗದಲ್ಲಿ: ಸ.ಕ.ಹಿ.ಪ್ರಾ.ಶಾಲೆ ರಾಮತೀರ್ಥ, ಸ.ಕ. ಹಿ.ಪ್ರಾ.ಶಾಲೆ ಅಡಹಳ್ಳಿ, ಸ.ಕ.ಹಿ.ಪ್ರಾ.ಶಾಲೆ ನಂದೇಶ್ವರ, ಸ.ಕ. ಹಿ.ಪ್ರಾ.ಶಾಲೆ ನಂದಗಾAವ, ಸ.ಕ. ಹಿ.ಪ್ರಾ.ಶಾಲೆ ಸುಟ್ಟಟ್ಟಿ ಫಾರ್ಮ್, ಸ.ಕ. ಹಿ.ಪ್ರಾ.ಶಾಲೆ, ಖವಟಕೊಪ್ಪ ಹೀಗೆ ಕ್ಷೇತ್ರದಲ್ಲಿ ೮ ಪ್ರಾಥಮಿಕ ಶಾಲೆಗಳ ಮೇಲ್ದರ್ಜೆಯಿಂದ ಅಥಣಿ ಕ್ಷೇತ್ರದಲ್ಲಿ ಪ್ರೌಢಶಿಕ್ಷಣದ ವ್ಯಾಪ್ತಿ ವಿಸ್ತರಿಸಿ, ಗ್ರಾಮೀಣ ವಿದ್ಯಾರ್ಥಿಗಳಿಗೆ ನೇರ ಲಾಭ ಸಿಗಲಿದೆ ಎಂದು ಕ್ಷೇತ್ರದ ಪೊಷಕರು ಹೇಳುತ್ತಿದ್ದಾರೆ.

 

WhatsApp Group Join Now
Telegram Group Join Now
Share This Article