8 ಮನೆಗಳಿಗೆ ನುಗ್ಗಿ ಸರಣಿ ಕಳ್ಳತನ

Hasiru Kranti
8 ಮನೆಗಳಿಗೆ ನುಗ್ಗಿ ಸರಣಿ ಕಳ್ಳತನ
WhatsApp Group Join Now
Telegram Group Join Now

ಇಂಡಿ : ತಾಲೂಕಿನ ಝಳಕಿ ಠಾಣಾ ವ್ಯಾಪ್ತಿಯಲ್ಲಿ ಬರುವ ಬಳ್ಳೊಳ್ಳಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ಯುವ ಕಳ್ಳರು ೮ ಮನೆಗಳಿಗೆ ನುಗ್ಗಿ ಸರಣಿ ಗಳ್ಳತನ ನಡೆಸಿ, ಮಿನಿ ವ್ಯಾನ ಓಮಿನಿ ವಾಹನದಲ್ಲಿ ಪರಾರಿಯಾಗಿದ್ದಾರೆ ಎಂದು ಝಳಕಿ ಠಾಣಾ ಅಧಿಕಾರಿಗಳು ಮಂಜುನಾಥ್ ತೀರಕನ್ನವರ ತಿಳಿಸಿದರು.
ಬಳ್ಳೊಳ್ಳಿ ಗ್ರಾಮದ ಬಡ ಜನರು ಕಬ್ಬಿನ ಕಟಾವಕ್ಕೆ, ಇಟಿಂಗಿ ಭಟ್ಟಿಗಳಿಗೆ ದುಡಿಯಲು ಹೊಗಿದ್ದು ಅಂತಹ ಬಡವರ ಮನೆಗಳಿಗೆ ಸುಮಾರು ರಾತ್ರಿ ೧:೩೦ ರಿಂದ ೨:೩೦ ಸಮಯದಲ್ಲಿ ಸುಮಾರು ೮ ಮನೆಗಳಿಗೆ ಬೀಗ ಒಡೆಡಿದ್ದಾರೆ, ಗ್ರಾಮದ ಸಿ. ಸಿ ಕ್ಯಾಮೆರಾ ಒಂದರಲ್ಲಿ ನಾಲ್ಕು ಜನ ಯುವಕರು, ಕೈಯಲ್ಲಿ ಮಾರಕಾಸ್ತ್ರಗಳೊಂದಿಗೆ ತಿರುಗಾಡುವುದು ಕಂಡುಬಂದಿದೆ, ಆದರೆ ಸರಿಯಾದ ಸಾಕ್ಷಿಗಳು, ಅಥವಾ ಪುರಾವೇಗಳನ್ನು ಕಲೆ ಹಾಕಲು ಶ್ವಾನ ದಳ ಮತ್ತು ಬೆರಳಚ್ಚು ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ, ಝಳಕಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ಕಾರ್ಯಾಚರಣೆ ನಡೆಸಲಾಗಿದೆ, ಕಳ್ಳತನದಲ್ಲಿ ಖಚಿತವಾಗಿ ಇಂತಿ? ವಡವೆ, ಹಣ ಇನ್ನಾವುದೇ ಮೊತ್ತದ ವಿ?ಯಗಳ ಸರಿಯಾದ ಮಾಹಿತಿ ದೊರೆತಿಲ್ಲ ಎಂದು ಠಾಣಾ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ಈರಣ್ಣ ವಾಲಿ, ಹಜರತ ಮುಲ್ಲಾ, ಶರಣಯ್ಯ ಮಠಪತಿ, ದತ್ತಾತ್ರೇಯ ಜಂಜುರ್ಡೇ, ಶಿವಲಿಂಗ್ ತುಪ್ಪದ, ಪ್ರವೀಣ್ ಬಡಿಗೇರ, ಉಸ್ಮಾನ್ ಪಠಾಣ, ಅಪ್ಪಾ? ವಾಲಿಕಾರ, ಸದಾಶಿವ ವಾಲಿಕಾರ ಹಾಗೂ ಗ್ರಾಮಸ್ಥರು ಸಿ. ಸಿ. ಕ್ಯಾಮೆರಾ ಸಹಾಯದಿಂದ ಹಲವಾರು ಮಾಹಿತಿ ಕಲ್ಪಿಸಿ ಪೊಲೀಸ್ ಇಲಾಖೆ ಸಿಬ್ಬಂದಿಗಳೊಂದಿಗೆ ಸಹಕರಿಸಿದರು.

 

WhatsApp Group Join Now
Telegram Group Join Now
Share This Article