ಅಥಣಿ: ಭವ್ಯ ಭಾರತದ ಪರಂಪರೆ ಜೊತೆಗೆ ಮುಂದಿನ ಪೀಳಿಗೆಗೆ ಭವ್ಯ ಭಾರತ ನಿರ್ಮಾಣ ಮಾಡುವದರಲ್ಲಿ ಸರಕಾರದ ಜೊತೆಗೆ ಸಾರ್ವಜನಿಕರು ಕೈಜೊಡಿಸಬೇಕು. ಮುಂದಿನ ಜನಾಂಗಕ್ಕೆ ನಮ್ಮ ದೇಶದ ಬಗ್ಗೆ ಸ್ವಾಭಿಮಾನ, ಅಭಿಮಾನ, ಏಕತೆ ಹಾಗೂ ಅಖಂಡತೆಗೆ ನಾವು ಆಧ್ಯತೆಯನ್ನಿ ನೀಡಬೇಕಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು
ಪಟ್ಟಣದ ಭೋಜರಾಜ ದೇಸಾಯಿ ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ೭೮ನೇ ಸ್ವಾತಂತ್ರೋತ್ಸ ಕಾರ್ಯಕ್ರಮದಲ್ಲಿ ಶಾಸಕ ಲಕ್ಷö್ಮಣ ಸವದಿ ಹಾಗೂ ತಹಶೀಲ್ದಾರ ವಿನೇಶಕುಮಾರ ಮೀನಾ ಅವರ ನೇತೃತ್ವದಲ್ಲಿ ಸಾರ್ವಜನಿಕ ಧ್ವಜಾರೋಹನ ಮಾಡಲಾಯಿತು. ನಗರದ ಪ್ರಮುಖ ಭೀದಿಗಳಲ್ಲಿ ಪಥಸಂಚನ ನಡೆಸಿದ ವಿದ್ಯಾರ್ಥಿಗಳು ಕ್ರೀಡಾಂಗಣದಲ್ಲಿ ಸಮಾರೋಪಗೊಂಡರು,
ಧ್ವಜಾರೋಹನ ನಡೆಸಿದ ತಹಶೀಲ್ದಾರ ವಿನೇಶಕುಮಾರ ಮಿನಾ ಅವರು ಮಾತನಾಡಿ ಭವ್ಯ ಭಾರತದ ನಿರ್ಮಾಣ ಯುವ ಪೀಳಿಗೆ ಕೈಯಲ್ಲಿದೆ. ಉತ್ತಮ ನಾಗರಿಕರನ್ನು ನಿರ್ಮಾಣ ಮಾಡಲು ಶಿಕ್ಷರು ಮೌಲ್ಯಯುತ ಶಿಕ್ಷಣವನ್ನು ನೀಡಬೇಕು. ಸ್ವತಂತ್ರಕ್ಕಾಗಿ ಹೋರಾಡಿ ಮಹನೀಯರ ಯಶೋಗಾಥೆಗಳನ್ನು ಮಕ್ಕಳಿಗೆ ತಿಳಿ ಹೇಳುವ ಮೂಲಕ ದೇಶದ ಬಗ್ಗೆ ಅಭಿಮಾನ ಮೂಡುಂತೆ ಮಾಡಬೇಕು ಎಂದು ಹೇಳಿದರು
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಸಕ ಲಕ್ಷö್ಮಣ ಸವದಿ ಅವರು ಮಾತನಾಡಿ. ಸ್ವತಂತ್ರ ಭಾರತ ನಿರ್ಮಾಣಕ್ಕೆ ತಮ್ಮ ರಕ್ಷದ ಕಣಕಣಗಳನ್ನು ದೇಶಕ್ಕಾಗಿ ಸಮರ್ಪಣೆ ಮಾಡಿರುವ ಸ್ವತಂತ್ರ ಸೇನಾನಿಗಳ ತ್ಯಾಗ ಬಲಿದಾನಗಳನ್ನು ನಾವು ನೇನೆಯಬೇಕಿದೆ. ಅವರ ಬಲಿದಾನದ ಫಲವಾಗಿ ಇಂದು ನಾವು ಸ್ವತಂತ್ರ ಭಾರತದಲ್ಲಿ ಬಾಳುತ್ತಿದ್ದೇವೆ. ಅಂತಹ ಮಹಾನುಭಾವರ ಆದರ್ಶಗಳನ್ನು ಮುಂದಿನ ಜನಾಂಗಕ್ಕೆ ಕಲಿಸಬೇಕಿದೆ. ಅಲ್ಲದೆ ಅಗಷ್ಟ ತಿಂಗಳಲ್ಲಿ ಪ್ರತಿ ನಾಲ್ಕು ವರ್ಷಗಳಲ್ಲಿ ಒಂದು ಬಾರಿಯಾದರು ಕೃಷ್ಣಾ ನದಿಗೆ ಪ್ರವಾಹ ಬಂದು ನದಿ ಪಾತ್ರದ ಜನ ಜಾನುವಾರುಗಳು ಸಮಸ್ಯೆಗಳನ್ನು ಅನುಭವಿಸುವದು ಕಂಡು ಬರುತ್ತಿದೆ. ತಾಲೂಕು ಆಡಳಿತ ಎಲ್ಲ ಸಮಸ್ಯಗಳನ್ನು ಸಮರ್ಥವಾಗಿ ನಿಭಾಯಿಸಿದೆ ಎಂದು ಶ್ಲಾಘನೆಯನು ವ್ಯಕ್ತಪಡಿಸಿದರು.
ಸರಕಾರದಿಂದ ಅಥಣಿ ಮತಕ್ಷೇತ್ರಕ್ಕೆ ಸಾಕಷ್ಟು ಅನುದಾನವನ್ನು ನೀಡಿದ್ದಾರೆ, ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ ವಿಶೇವಾಗಿ ೧೫೦೦ ಕೋಟಿ ರೂಗಳ ಅನುದಾನ ನೀಡಿ ಕಾಮಗಾರಿ ಪ್ರಾರಂಭಿಸಿದ್ದು, ಇನ್ನೂ ೨೪ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರಾವರಿ ಒದಗಿಸಲಾಗುವದು, ಅಥಣಿ ಪಟ್ಟಣಕ್ಕೆ ೨೪*೭ ಕುಡಿಯುವ ಶುದ್ದ ನೀರಿನ ಸರಬರಾಜು ಯೋಜನೆಗೆ ೧೧೬ ಕೋಟಿ ರೂ.ಗಳ ಯೋಜನೆಗೆ ಈಗಾಗಲೆ ಅನುದಾನ ನೀಡಿ ಕಾಮಗಾರಿಯನ್ನು ಪ್ರಾರಂಭಿಸಲಾಗಿದ್ದು, ಇನ್ನೂ ೧೮ ತಿಂಗಳಲ್ಲಿ ಯೋಜನೆಯನ್ನು ಪೂರ್ಣಗೊಳಿಸಿ ದಿನದ ೨೪ ಗಂಟೆಗಳ ನೀರು ಸರಬರಾಜು ಮಾಡಲಾಗುವದು, ಇದರ ಜೊತೆಗೆ ಪುಶು ವೈದ್ಯಕೀಯ ಕಾಲೇಜು ಇದೇ ವರ್ಷದಿಂದ ಪ್ರಾರಂಭವಾಗಲಿದ್ದು, ಕೃಷಿ ಕಾಲೇಜು ನಿರ್ಮಾಣಕ್ಕೂ ಶೀಘ್ರದಲ್ಲೆ ಶಂಕುಸ್ಥಾಪನೆ ಮಾಡಲಾಗುವದು, ಅಥಣಿ ಪಟ್ಟಣದಲ್ಲಿ ಕೇಂದ್ರೀಯ ವಿದ್ಯಾಲಯವನ್ನು ಮಂಜೂರು ಮಾಡಲಾಗಿದ್ದು ಅದು ಸಹ ತಕ್ಷಣವೇ ಪ್ರಾರಂಭವಾಗಲಿದೆ. ಇನ್ನು ಹತ್ತು ಹಲವಾರು ಸರಕಾರದ ಯೋಜನೆಗಳನ್ನು ಕ್ಷೇತ್ರದ ಜನತೆ ಒದಗಿಸುವ ಸಂಕಲ್ಪವನ್ನು ಮಾಡಲಾಗಿದೆ ಎಂದು ಶಾಸಕ ಲಕ್ಷö್ಮಣ ಸವದಿ ಹೇಳಿದರು
ಬಾಕ್ಷ: ಶಾಸಕ ಲಕ್ಷö್ಮಣ ಸವದಿ ಅವರು ಈ ಬಾರಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಗೆದ್ದ ಮೂರು ತಂಡಗಳಿಗೆ ೧ ಲಕ್ಷ ೭೫ ಸಾವಿರ ರೂ.ಗಳ ವಯಕ್ತಿವಾಗಿ ನೀಡಿದರು ಅದರಲ್ಲಿ ಸರಕಾರಿ ಪ್ರೌಡ ಶಾಲೆ ರೆಡ್ಡೇರಹಟ್ಟಿ ಪ್ರಥಮ ಸ್ಥಾನ ಪಡೆದ ಶಾಲೆಗೆ ೧ ಲಕ್ಷ ನಗದು ಬಹುಮಾನ, ಶಾರದಾ ಮಾತಾ ಶಾಲೆ ದ್ವಿತಿಯ ೫೦ ಸಾವಿರ ನಗದು ಬಹುಮಾನ, ಸಿ ಎಸ್ ಕಿತ್ತೂರ ಹೈಸ್ಕೂಲ್ ತೃತಿಯ ಸ್ಥಾನ ಪಡೆದ ಶಾಲೆಗೆ ೨೫ ಸಾವಿರ ನಗದು ಬಹುಮಾನಗಳನ್ನು ವಿಶೇಷ ನೃತ್ಯಗಳನ್ನು ಪ್ರದರ್ಶನ ಮಾಡಿ ಬಹುಮಾನಗಳನ್ನು ಗಿಟ್ಟಿಸಿಕೊಂಡರು.
ಈ ವೇಳೆ ಪುರಸಭೆ ಸದಸ್ಯರಾದ ಸಂತೋಷ ಸಾವಡಕರ, ರಾಜೂ ಗುಡೊಡಗಿ, ದತ್ತಾ ವಾಸ್ಟರ್, ರಿಯಾಜ್ ಸನದಿ, ರಾವಸಾಹೇಬ ಐಹೋಳೆ, ಪ್ರಮೋದ ಬಿಳ್ಳೂರ, ಉದಯ ಸೋಳಸಿ, ಬಸವರಾಜ ನಾಯಿಕ, ಮೃಣಾಲಿನಿ ದೇಶಪಾಂಡೆ, ಶಾಂತಾ ಲೋಣಾರೆ, ವಿದ್ಯಾ ಹಳ್ಳದಮಳ,ಸುನೀತಾ ಬಡಕಂಬಿ, ವಿದ್ಯಾ ಹಳ್ಳದಮಳ್ಳ, ವಿದ್ಯಾ ಐಹೋಳೆ ಮುಖಂಡರಾದ ರಾಮಗೌಡ ಪಾಟೀಲ, ಅರುಣ ಯಲಗುದ್ರಿ, ತಹಶೀಲ್ದಾರ ವಿನೇಶ ಕುಮಾರ ಮಿನಾ, ತಾಲೂಕು ಪಂಚಾಯತ ಆಡಳಿತಧಿಕಾರಿ, ಬಸವರಾಜ ಹೆಗ್ಗನಾಯಕ, ಡಿ ವಾಯ್ ಎಸ್ಪಿ ಶ್ರೀಪಾದ ಜಲ್ದೆ, ತಾಲೂಕ ಪಂಚಾಯತ ಎಇಓ ಶಿವಾನಂದ ಕಲ್ಲಾಪೂರ, ಕ್ಷೇತ್ರ ಶಿಕ್ಷಣಾಧಿಕಾರಿ ಎಮ್ ಬಿ ಮೋರಟಿಗಿ, ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಸೇರಿದಂತ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು