ರನ್ನ ಬೆಳಗಲಿಯಲ್ಲಿ ಶೇಕಡಾ ೭೭.೨ರಷ್ಟು ಮತದಾನ, ಮತದಾರರಲ್ಲಿ ಸಂಭ್ರಮ

Ravi Talawar
ರನ್ನ ಬೆಳಗಲಿಯಲ್ಲಿ ಶೇಕಡಾ ೭೭.೨ರಷ್ಟು ಮತದಾನ, ಮತದಾರರಲ್ಲಿ ಸಂಭ್ರಮ
WhatsApp Group Join Now
Telegram Group Join Now

ರನ್ನ ಬೆಳಗಲಿ: ಮೇ ೦೭., ಭಾರತ ಚುನಾವಣಾ ಆಯೋಗ, ಮುಖ್ಯ ಚುನಾವಣಾ ಅಧಿಕಾರಿ ಕರ್ನಾಟಕ, ಜಿಲ್ಲಾ, ತಾಲೂಕ ಆಡಳಿತ ಕಾರ್ಯಾಲಯ ಹಾಗೂ ಪಟ್ಟಣ ಪಂಚಾಯತ ರನ್ನ ಬೆಳಗಲಿಯ ಆಶ್ರಯದಲ್ಲಿ ಯಶಸ್ವಿಯಾಗಿ ಸಂಭ್ರಮದ ಜೊತೆಗೆ ಜರುಗಿದ ಮತದಾನ ಪಟ್ಟಣದ ವ್ಯಾಪ್ತಿಯಲ್ಲಿರುವ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯ ಆವರಣದಲ್ಲಿ ಮತಗಟ್ಟೆಗಳಾದ ೧ರಲ್ಲಿ ೮೦% ೩ರಲ್ಲಿ೭೮%,೪ರಲ್ಲಿ ೭೩% ಗ್ರಾಮ ಚಾವಡಿಯ ೨ನೇ ಮತಗಟ್ಟೆಯಲ್ಲಿ೭೮.೧% ಸರ್ಕಾರಿ ಮಾದರಿ ಪ್ರಾಥಮಿಕ ಗಂಡು ಮಕ್ಕಳ ಶಾಲಾ ಆವರಣದಲ್ಲಿ ೫ರಲ್ಲಿ ೭೬.೭%, ೬ರಲ್ಲಿ ೭೮%, ೭ರಲ್ಲಿ ೮೨.೩% ೮ರಲ್ಲಿ ೭೮%, ೯ರಲ್ಲಿ ೭೨.೧%ಪಟ್ಟಣ ಪಂಚಾಯತ್ ಕಾರ್ಯಾಲಯದ ೧೦ರಲ್ಲಿ ೮೧.೫೬% ಗ್ರಂಥಾಲಯದ ೧೧ರಲ್ಲಿ ೮೩.೬೫% ಹಾಗೂ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜನತಾ ಪ್ಲಾಟ್ ಶಾಲಾ ಆವರಣದಲ್ಲಿ ೧೨ರಲ್ಲಿ ೭೨.೩%, ೧೩ರಲ್ಲಿ೭೯% ಭೂತಗಳಲ್ಲಿ ಮತದಾನ ನಡೆದಿದ್ದು, ಒಟ್ಟಾರೆಯಾಗಿ ರನ್ನ ಬೆಳಗಲಿಯಲ್ಲಿ ೭೭.೨% ಪ್ರಮಾಣದಷ್ಟು ಯಶಸ್ವಿಯಾಗಿ ಮತದಾನ ಪೂರ್ಣಗೊಂಡಿತು.

೧೩,ಭೂತಗಳಲ್ಲಿ ಜರುಗಿದ ಮತದಾನದಲ್ಲಿ ಹಿರಿಯ ಮತದಾರರಿಗೆ ಮತ್ತು ಅಂಗವಿಕಲರಿಗೆ ಪಟ್ಟಣ ಪಂಚಾಯತ್ ಆಶ್ರಯದಲ್ಲಿ ವಿಶೇಷ ವಾಹನದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು,

ಬೂತ್ ಸಂಖ್ಯೆ ೪ರಲ್ಲಿ ಅತಿ ಹೆಚ್ಚು ಮಹಿಳಾ  ಮತದಾರರನ್ನು ಹೊಂದಿದ್ದ ಕಾರಣ ವಿಶೇಷ ಗುಲಾಬಿ ಬಣ್ಣದ ಅಲಂಕಾರದ ಜೊತೆಗೆ ಗುಲಾಬಿ ಬಣ್ಣದ
ಸೀರೆಯನ್ನುಟ್ಟು ಎಲ್ಲಾ ಮಹಿಳಾ ಅಧಿಕಾರಿಗಳು ಅಲ್ಲಿ ಕರ್ತವ್ಯ ನಿರ್ವಹಿಸಿದ್ದು ವಿಶೇಷವಾಗಿ ಕಂಡುಬಂದಿತು.

ಇದೇ ಸಮಯದಲ್ಲಿ ಬಾಗಲಕೋಟೆ ಜಿಲ್ಲಾ ಚುನಾವಣಾ ವೀಕ್ಷಣಾಧಿಕಾರಿಗಳಾದ ಇ. ಸರವೆನ್ ಮೇಲರಾಜ್ ಐ.ಎ.ಎಸ್ ಅಧಿಕಾರಿಗಳು ಮಧ್ಯಪ್ರದೇಶ ಅವರು ಸ್ಥಳೀಯ ೧೩ ಭೂತಗಳನ್ನು ವೀಕ್ಷಿಸಿ ಮಾಹಿತಿಯನ್ನು ಸಂಗ್ರಹಿಸಿ, ಬೂತ್ ಚುನಾವಣೆ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು,

ಬಾಗಲಕೋಟೆಯ ಡಿಎ??? ಅಧಿಕಾರಿಗಳಾದ ಸಿ. ಜಿ. ಮೀರಜ್, ಚುನಾವಣೆ ತರಬೇತಿದಾರರಾದ ರಾಜಶೇಖರ ಹಿರೇಮಠ, ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿಗಳಾದ ನಾಮದೇವ ಲಮಾಣಿ, ಚುನಾವಣಾ ಸೆಕ್ಟರ್ ಆಫೀಸರಾದ ಎಸ್.ಎಂ. ಸುತಾರ, ಸಹಾಯಕ ಸೆಕ್ಟರ್ ಆಫೀಸರ್ ಎ. ಎಂ. ಕೆಂಭಾವಿ, ಗ್ರಾಮಾಡಳಿತ ಅಧಿಕಾರಿಯಾದ ಬಿ.ಎಂ.ಪಾಟೀಲ ಹಾಗೂ ಅಧಿಕಾರಿ ವೃಂದದವರು ವೀಕ್ಷಣಾಧಿಕಾರಿಗಳಿಗೆ ಮಾಹಿತಿಯನ್ನು ಒದಗಿಸಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಾಚಯ್ಯ ರುದ್ರಯ್ಯ ಸಾಲಿಮಠ, ಮಾನಪ್ಪ ಈರಪ್ಪ ಲೋಹಾರ, ರಾಜ್ಯ ಮತ್ತು ರಾಷ್ಟ್ರಮಟ್ಟದ ಯೋಗ ತರಬೇತುದಾರರಾದ ಯೋಗಿರಾಜೇಂದ್ರ ಸದಾಶಿವ ಗುರೂಜಿ ಇಟಾಣಿ, ಯೋಗ ಶಿಕ್ಷಕ ರಾಘವೇಂದ್ರ ನೀಲಣ್ಣವರ, ಹಾಗೆ ಶತಾಯುಷಿಗಳು,
ವಿವಿಧ ಕ್ಷೇತ್ರದ ಸಾಧಕರು ಮತ ಚಲಾಯಿಸಿ ಸಂಭ್ರಮಿಸಿದರು.

ಪಟ್ಟಣ ಪಂಚಾಯತ್ ಸಿಬ್ಬಂದಿಯವರಾದ ಪಿ.ಡಿ.ನಾಗನೂರ, ರಾಜು ಮುಗಳಖೋಡ, ಬಾಬು ಜಕಾತಿ, ಎಸ್. ಬಿ.ಚೌದ್ರಿ, ಬಾಳಪ್ಪ ಹೊಸೂರ, ರವಿ ಭಜಂತ್ರಿ, ಸತ್ಯಪ್ಪ ಹನಗಂಡಿ, ಅಮೀನ ನದಾಫ್, ರಾಜು ಚಮಕೇರಿ ಉಪಸ್ಥಿತರಿದ್ದರು. ಕಂದಾಯ ಇಲಾಖೆ,ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ,ಆರೋಗ್ಯ ಇಲಾಖೆ, ಇಂಧನ ಇಲಾಖೆ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗಳ ಅಧಿಕಾರಿಗಳು ಮತದಾನದಲ್ಲಿ ಪೂರ್ಣಾವಧಿ ಕರ್ತವ್ಯ ನಿರ್ವಹಿಸಿ ಮತದಾನದ ಹೆಚ್ಚಳಕ್ಕೆ ಕರ್ಣಿಕರ್ತರಾದರು.

WhatsApp Group Join Now
Telegram Group Join Now
Share This Article