ಈ ಬಾರಿ ಶೇ 75ರಷ್ಟು ಹೂಡಿಕೆ; ಸಚಿವ ಎಂಬಿ. ಪಾಟೀಲ್ ವಿಶ್ವಾಸ

Ravi Talawar
ಈ ಬಾರಿ ಶೇ 75ರಷ್ಟು ಹೂಡಿಕೆ;  ಸಚಿವ ಎಂಬಿ. ಪಾಟೀಲ್ ವಿಶ್ವಾಸ
WhatsApp Group Join Now
Telegram Group Join Now

ಬೆಂಗಳೂರು: ರಾಜ್ಯ ಸರ್ಕಾರ ಈ ಬಾರಿ ಆಯೋಜಿಸಿದ್ದ ಇನ್ವೆಸ್ಟ್ ಕರ್ನಾಟಕ ಜಾಗತಿಕ ಸಮಾವೇಶ 2025ರಲ್ಲಿ ಒಟ್ಟು 98 ಕಂಪೆನಿಗಳೊಂದಿಗೆ ಒಡಂಬಡಿಕೆಗಳಾಗಿದ್ದು, ಈ ಕಂಪೆನಿಗಳಿಂದ 6.24 ಕೋಟಿ ಬಂಡವಾಳ ಹರಿದು ಬರಲಿದೆ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರು ಮಂಗಳವಾರ ಮಾಹಿತಿ ನೀಡಿದರು.

ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಎಸ್‌.ವಿ. ಸಂಕನೂರ ಪ್ರಶ್ನೆಗೆ ಉತ್ತರಿಸಿದ ಅವರು, ಈ ಹಿಂದೆ ನಡೆದಿದ್ದ ಇನ್ವೆಸ್ಟ್ ಕರ್ನಾಟಕ-2022ರ ಸಮಾವೇಶದಲ್ಲಿ ಉದ್ಯಮ ಪ್ರಾರಂಭಿಸಲು 57 ಕಂಪೆನಿಗಳೊಂದಿಗೆ 5,41,369 ಕೋಟಿ ಹೂಡಿಕೆ ಮಾಡಲು ಒಪ್ಪಂದಗಳಿಗೆ ಸಹಿ ಮಾಡಲಾಗಿತ್ತು. ಈ 57 ಕಂಪೆನಿಗಳಲ್ಲಿ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಗಳಲ್ಲಿ ಒಟ್ಟು 20 ಕಂಪೆನಿಗಳಿಗೆ ಅನುಮೋದನೆ ನೀಡಲಾಗಿದ್ದು, ಈ ಪ್ರಸಾವನೆಗಳಿಂದ 2,01,167 ಕೋಟಿ ರು. ಬಂಡವಾಳ ಹೂಡಿಕೆಯಾಗಲಿದೆ ಹಾಗೂ 70,740 ಉದ್ಯೋಗ ಸೃಜನೆಯಾಗಲಿದೆ. ಇವುಗಳಲ್ಲಿ 2 ಯೋಜನೆಗಳು ಅನುಷ್ಠಾನಗೊಂಡಿವೆ ಎಂದು ಹೇಳಿದರು.

ಈ ವರ್ಷ ನಡೆದ ಸಮಾವೇಶದಲ್ಲಿ ಹೂಡಿಕೆಯ ಪ್ರಮಾಣ ಹೆಚ್ಚಿದ್ದು, ಇದರಿಂದ ಕರ್ನಾಟಕವು ಇಡೀ ದೇಶದಲ್ಲೇ ಮಾದರಿ ರಾಜ್ಯವಾಗಿ ಶರವೇಗದಲ್ಲಿ ಅಭಿವೃದ್ಧಿ ಕಾಣಲಿದೆ ಎಂದು ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ ನಡೆದ ಸಮಾವೇಶದಲ್ಲಿ ರಾಜ್ಯದಿಂದ 2,892, ವಿವಿಧ ರಾಜ್ಯಗಳಿಂದ 286 ಹಾಗೂ ವಿದೇಶಿಗಳಿಂದ 72 ಸೇರಿದಂತೆ ಒಟ್ಟು 3,250 ಉದ್ದಿಮೆದಾರರು ಭಾಗಿಯಾಗಿದ್ದರು. ಒಡಂಬಡಿಕೆಯಾದ 98 ಕಂಪನಿಗಳಿಂದ 6.24 ಕೋಟಿ ಬಂಡವಾಳ ಹರಿದು ಬರಲಿದೆ, ಹೆಚ್ಚುವರಿಯಾಗಿ, 1,101 ಕಂಪನಿಗಳಿಗೆ ನೀಡಲಾದ ಅನುಮತಿಗಳಿಂದ ರೂ. 4,03,533 ಕೋಟಿ ಮೌಲ್ಯದ ಹೂಡಿಕೆಗಳಾಗುವ ಸಾಧ್ಯತೆಗಳಿದ್ದು. ಒಟ್ಟಾರೆ ರೂ. 10.27 ಲಕ್ಷ ಕೋಟಿ ಮೌಲ್ಯದ ಹೂಡಿಕೆಯಾಗುವ ನಿರೀಕ್ಷೆಗಳಿವೆ ಎಂದು ಹೇಳಿದರು.

WhatsApp Group Join Now
Telegram Group Join Now
Share This Article