ಬಳ್ಳಾರಿ. ನ. 03. ಕರ್ನಾಟಕ ರಾಜ್ಯದಲ್ಲಿ ಹುಟ್ಟುವುದೇ ನಮ್ಮ ನಿಮ್ಮೆಲ್ಲರ ಪುಣ್ಯ ದೇವರು ನಮಗೆ ಈ ರಾಜ್ಯದಲ್ಲಿ ಜನ್ಮ ನೀಡಿ ಜೀವನವನ್ನು ಪಾವನಗೊಳಿಸಿದ್ದಾನೆ, ಅತ್ಯಂತ ಶಾಂತಿ ಸಹ ಬಾಳ್ವೆಯ ಸೌಹಾರ್ದತೆಯ ರಾಜ್ಯ ಕರ್ನಾಟಕ ರಾಜ್ಯವಾಗಿದೆ ಅಷ್ಟೇ ಅಲ್ಲದೆ ಸಮೃದ್ಧ ವಾದ ರಾಜ್ಯ ಯಾವುದಾದರೂ ಇದ್ದರೆ ಅದು ಕರ್ನಾಟಕ ರಾಜ್ಯ, ತಾಯಿ ಭುವನೇಶ್ವರಿ ಕೃಪೆ ಸದಾ ನಮ್ಮ ನಿಮ್ಮೆಲ್ಲರ ಮೇಲಿರಲಿ ಎಂದು ಮಾಜಿ ನಗರ ಶಾಸಕ ಜಿ ಸೋಮಶೇಖರ ರೆಡ್ಡಿ ತಿಳಿಸಿದರು.
ಅವರು ಇಂದು 70ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮ ಪ್ರಯುಕ್ತ ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ವತಿಯಿಂದ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿ ವೇದಿಕೆಯ ಕಚೇರಿಯಲ್ಲಿ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದರು.
ವೇದಿಕೆಯ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯ ಜಿಲ್ಲಾಧ್ಯಕ್ಷರಾದ ರಾಜಶೇಖರ್ (ರಾಜಣ್ಣ) ಮಾತನಾಡಿ ಕರ್ನಾಟಕ ರಾಜ್ಯೋತ್ಸವ ಎನ್ನುವುದು ಕನ್ನಡಿಗರಿಗೆ ಅತ್ಯಂತ ದೊಡ್ಡ ಮತ್ತು ಹೆಮ್ಮೆಯ ಹಬ್ಬವಾಗಿದೆ, ಇದನ್ನು ವೇದಿಕೆಯ ಕಾರ್ಯಕರ್ತರು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲು ನಿರ್ಧರಿಸಿ ನೂರಾರು ಬೈಕ್ ರ್ಯಾಲಿ ಯೊಂದಿಗೆ ಆಚರಿಸಲು ನಿರ್ಧರಿಸಿದ್ದರು ಅದೇ ಪ್ರಕಾರವಾಗಿ ಬಳ್ಳಾರಿ ಜಿಲ್ಲೆಯ ಕುರುಗೋಡು ಮೂಕ ರೂಪನಗುಡಿ ಸೇರಿದಂತೆ ವಿವಿಧ ತಾಲೂಕು ಮತ್ತು ಗ್ರಾಮ ಘಟಕಗಳ ನೂರಾರು ಕಾರ್ಯಕರ್ತರು ಈ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾರೆ. ಜೊತೆಗೆ ಶಿವರಾಮೇಗೌಡ ಬಣದ ಕರವೇ ಕಾರ್ಯಕರ್ತರು ನಾಡು ನುಡಿ ವಿಷಯವಾಗಿ ಯಾವುದೇ ತೊಂದರೆಯಾದಲ್ಲಿ ಹೋರಾಟಕ್ಕೆ ಸದಾ ಮುಂಚೂಣಿಯಲ್ಲಿರುತ್ತದೆ ಎಂದರು. ಪಾರ್ವತಿ ನಗರದ ರವೇ ಕಚೇರಿಯಿಂದ ಆರಂಭವಾದ ಬೈಕ್ ರ್ಯಾಲಿ ದುರ್ಗಮ್ಮ ಗುಡಿ ಸರ್ಕಲ್ ಅಂಡರ್ ಬ್ರಿಡ್ಜ್ ಮೂಲಕ ಕೊಲಾಚಲಂ ಕಾಂಪೌಂಡ್ ನಲ್ಲಿ ಧ್ವಜಾರೋಹಣ ಸ್ಥಳಕ್ಕೆ ಬಂದು ಸೇರಿತು.
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಟಗಿ ಸೂರಿ, ಬಳ್ಳಾರಿ ಮಹಾನಗರ ಪಾಲಿಕೆ ಸದಸ್ಯರಾದ ಗುಡಿಗಂಟೆ ಹನುಮಂತ, ಮೋತ್ಕಾರ್ ರ್ ಶ್ರೀನಿವಾಸ್ ಹಾಗೂ ಕಾರ್ಯಕರ್ತರಾದ ರಸೂಲ್, ವೀರಾಪುರ್ ತಿಪ್ಪೇಸ್ವಾಮಿ, ಜಾಲಿಹಾಳ್ ಶ್ರೀಧರ್ ಗೌಡ ಸೇರಿದಂತೆ ನೂರಾರು ಜನ ವೇದಿಕೆಯ ಕಾರ್ಯಕರ್ತರು ಬೈಕ್ ರಾಲಿಯಲ್ಲಿ ಪಾಲ್ಗೊಂಡಿದ್ದರು.


