ಧಾರಾಕಾರ ಮಳೆ  ಹಿನ್ನೆಲೆ ಖಾನಾಪುರ ತಾಲೂಕಿನ 7 ಜಲಪಾತಗಳಿಗೆ ನಿರ್ಬಂಧ

Ravi Talawar
ಧಾರಾಕಾರ ಮಳೆ  ಹಿನ್ನೆಲೆ ಖಾನಾಪುರ ತಾಲೂಕಿನ 7 ಜಲಪಾತಗಳಿಗೆ ನಿರ್ಬಂಧ
WhatsApp Group Join Now
Telegram Group Join Now

ಬೆಳಗಾವಿ, ಜುಲೈ.06: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ  ಹಿನ್ನೆಲೆ ದಟ್ಟ ಕಾಡಂಚಿನಲ್ಲಿರುವ ಜಲಪಾತಗಳ ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆ. ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ 7 ಜಲಪಾತಗಳಿಗೆ ನಿರ್ಬಂಧ ವಿಧಿಸಲಾಗಿದೆ. ಮಹಾರಾಷ್ಟ್ರದ ಲೊನಾವಾಲಾ ದುರಂತದ ಬಳಿಕ ಎಚ್ಚೆತ್ತ ಅರಣ್ಯ ಇಲಾಖೆ ಖಾನಾಪುರ ತಾಲೂಕಿನ ಕಾಡಂಚಿನಲ್ಲಿರುವ ಪ್ರಸಿದ್ಧ ಜಲಪಾತಗಳ ವೀಕ್ಷಣೆಗೆ ಬ್ರೇಕ್ ಹಾಕಿದೆ.

ಬಟವಾಡೆ ಫಾಲ್ಸ್, ಚಿಕ್ಕಲೆ ಫಾಲ್ಸ್, ಪಾರವಾಡ ಫಾಲ್ಸ್, ಚೋರ್ಲಾ ಫಾಲ್ಸ್, ವಜ್ರಾ ಫಾಲ್ಸ್​​ ಹೀಗೆ 7 ಜಲಪಾತಗಳ ವೀಕ್ಷಣೆಗೆ ನಿಷೇಧ ಹೇರಲಾಗಿದೆ. ಫಾಲ್ಸ್ ಬಳಿ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ಕಾರ್ಯ ನಿರ್ವಹಿಸುತ್ತಿದ್ದಾರೆ. ಫಾಲ್ಸ್ ಮುಖ್ಯ ರಸ್ತೆಗೆ ಮೂವರು ಫಾರೆಸ್ಟ್ ಗಾರ್ಡ್​ಗಳು ಕಾವಲು ಕಾಯುತ್ತಿದ್ದಾರೆ. ವೀಕೆಂಡ್​ನಲ್ಲಿ ಫಾಲ್ಸ್ ನೋಡಲು ಕರ್ನಾಟಕ, ಗೋವಾ, ಮಹಾರಾಷ್ಟ್ರ ರಾಜ್ಯದಿಂದ ಬರುವ ಪ್ರವಾಸಿಗರಿಗೆ ನಿರಾಸೆಯಾಗಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ರೌದ್ರಾವತಾರಕ್ಕೆ 500 ಎಕರೆ ಅಡಿಕೆ ತೋಟಕ್ಕೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಭಾಸ್ಕೆರೆ ಗ್ರಾಮದಲ್ಲಿ ಘಟನೆ ನಡೆದಿದ್ದು, ಅಡಕೆ ತೋಟದಲ್ಲಿ ನೀರು ನಿಂತುಕೊಂಡ್ರೆ ಕೊಳೆ ರೋಗ ಉಂಟಾಗುವ ಭೀತಿ ಎದುರಾಗಿದೆ. ಇನ್ನು 500 ಎಕರೆ ಅಡಿಕೆ ತೋಟದಲ್ಲಿರುವ 200 ಮನೆಗಳು ಕೂಡ ಜಲದಿಗ್ಬಂಧನದ ಭೀತಿ ಎದುರಿಸುತ್ತಿವೆ. ಬೆಟ್ಟದ ಮೇಲೆ ನಿರಂತರ ಮಳೆ ಸುರಿದ್ರೆ ಮನೆಗಳಿಗೆ ನೀರು ನುಗ್ಗುವ ಆತಂಕ ಎದುರಾಗಿದೆ.

WhatsApp Group Join Now
Telegram Group Join Now
Share This Article