ಬೆಳಗಾವಿಯಲ್ಲಿ ಒಂದೇ ತಿಂಗಳಲ್ಲಿ 68 ಡೆಂಗ್ಯೂ ಕೇಸ್ ದೃಢ

Ravi Talawar
ಬೆಳಗಾವಿಯಲ್ಲಿ  ಒಂದೇ ತಿಂಗಳಲ್ಲಿ 68 ಡೆಂಗ್ಯೂ ಕೇಸ್ ದೃಢ
WhatsApp Group Join Now
Telegram Group Join Now

ಬೆಳಗಾವಿ: ಒಂದೆಡೆ ಸತತ ಮಳೆ, ಮತ್ತೊಂದೆಡೆ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು ಜಿಲ್ಲೆಯ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಬೆಳಗಾವಿಯಲ್ಲಿ ಶೇ.45ರಷ್ಟು ಪ್ರಕರಣಗಳು ಹೆಚ್ಚು ದಾಖಲಾಗಿವೆ. ಜೂನ್ ಒಂದೇ ತಿಂಗಳಲ್ಲಿ 68 ಕೇಸ್ ದೃಢಪಟ್ಟಿವೆ. ಹಾಗಾಗಿ, ಡೆಂಗ್ಯೂ ನಿಯಂತ್ರಣಕ್ಕೆ ಆರೋಗ್ಯಾಧಿಕಾರಿಗಳು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಡೆಂಗ್ಯೂ ಪ್ರಮಾಣದ ಜತೆ ಶೇ.21ರಷ್ಟು ಪರೀಕ್ಷೆಯೂ ಹೆಚ್ಚಾಗಿದೆ. ಕಳೆದ ವರ್ಷ ಜನವರಿಯಿಂದ ಜೂನ್ ತಿಂಗಳವರೆಗೆ 1,237 ಜನರನ್ನು ಪರೀಕ್ಷೆ ಮಾಡಲಾಗಿತ್ತು. ಆ ಪೈಕಿ 101 ಕೇಸ್ ಪಾಸಿಟಿವ್ ಬಂದಿದ್ದವು. ಅದೇ ರೀತಿ ಈ ವರ್ಷ ಜನವರಿಯಿಂದ ಜೂನ್ ವರೆಗೆ 1,490 ಜನರನ್ನು ಪರೀಕ್ಷಿಸಲಾಗಿದೆ. ಅದರಲ್ಲಿ 177 ಪಾಸಿಟಿವ್ ಕೇಸ್ ದೃಢಪಟ್ಟಿವೆ. ಹಾಗಾಗಿ, ಶೇ.45ರಷ್ಟು ಕೇಸ್​ಗಳು ಹೆಚ್ಚಾಗಿವೆ.

ಇನ್ನು ಎರಡು ಸಂಶಯಸ್ಪಾದ ಸಾವು ಪ್ರಕರಣಗಳಾಗಿದ್ದು, ಅವು ಡೆಂಗ್ಯೂ ಎಂದು ಖಚಿತವಾಗಿಲ್ಲ. ಹೋದ ವರ್ಷ ಬೆಳಗಾವಿ, ಬೈಲಹೊಂಗಲ ಮತ್ತು ಖಾನಾಪುರ ತಾಲ್ಲೂಕುಗಳಲ್ಲಿ ಹೆಚ್ಚು ಕೇಸ್​ಗಳು ಕಂಡು ಬಂದಿದ್ದವು. ಈ ಬಾರಿ ಈ ತಾಲೂಕುಗಳ ಜೊತೆಗೆ ರಾಮದುರ್ಗದಲ್ಲೂ ಹೆಚ್ಚು ಕೇಸ್​ ಪತ್ತೆಯಾಗಿರೋದು ಆರೋಗ್ಯ ಇಲಾಖೆ ಅಂಕಿ ಅಂಶಗಳಿಂದ ಸ್ಪಷ್ಟವಾಗಿದೆ.

WhatsApp Group Join Now
Telegram Group Join Now
Share This Article