ಮಹಾಂತ ಶಿವಯೋಗಿಗಳ 66 ನೇ ಜಾತ್ರಾ ಮಹೋತ್ಸವ

Ravi Talawar
ಮಹಾಂತ ಶಿವಯೋಗಿಗಳ 66 ನೇ ಜಾತ್ರಾ ಮಹೋತ್ಸವ
WhatsApp Group Join Now
Telegram Group Join Now

ಧಾರವಾಡ, ಏಪ್ರಿಲ್​ 22: ಧಾರವಾಡ ತಾಲೂಕಿನ ನರೇಂದ್ರ ಗ್ರಾಮದದಲ್ಲಿ ಜರುಗಲಿರುವ ಮಳೆಪ್ಪಜ್ಜ ಹಾಗೂ ಮೌನಯೋಗಿ ಮಹಾಂತ ಶಿವಯೋಗಿಗಳ ೬೬ ನೇ ಜಾತ್ರಾ ಮಹೋತ್ಸವದ ಅಂಗವಾಗಿ ಈ ಲೇಖನ.

ಮಹಾತಪಸ್ವಿ ನರೇಂದ್ರದ ಮಹಾಂತ ಶಿವಯೋಗಿ ಧಾರವಾಡ ತಾಲೂಕಿನ ನರೇಂದ್ರ ಗ್ರಾಮವು ಮೌನಯೋಗಿ, ಹಠಯೋಗಿಯೂ ಆದ ಮಹಾಂತ ಶಿವಯೋಗಿಗಳ ನೆಲೆಸಿದ ಪುಣ್ಯಕ್ಷೇತ್ರ. ಅವರ ಪವಾಡ, ಲೀಲೆಗಳು ಪ್ರಪಂಚಕ್ಕೆ ಪರಿಚಯವಾದ ತಾಣ.

ಬಾಗಲಕೋಟ ಬಳಿಯ ಶಿರೂರ ಗ್ರಾಮದ ಶಿಕ್ಷಕ ಚನಬಸಯ್ಯ ಮತ್ತು ಪತ್ನಿ ಗುರುಲಿಂಗಮ್ಮನವರ ಪುತ್ರರು. ಶಿಕ್ಷಕರಾಗಿದ್ದ ಚನಬಸಯ್ಯ ಸೇವೆ ಸಲ್ಲಿಸುತ್ತಿದ್ದ ಚಿಕ್ಕ ಅಲಗುಂಡಿಯಲ್ಲಿ ೧೯೧೮ ರ ಫೆ.೩ ರಂದು ಜನಿಸಿದ ಬಾಲಕ ಮಹಾಂತಯ್ಯ, ಮನೆಯಲ್ಲಿನ ಬಡತನದಿಂದ
ಬಾಗಲಕೋಟ ದೇಸಾಯರ ಮನೆಯಲ್ಲಿದ್ದು ಕಲಿಕೆ ಮುಂದುವರೆಸಿದರು.

ನಂತರ ಮುಲ್ಕಿ ಪರೀಕ್ಷೆಗೆ  ಬೆಳಗಾವಿಗೆ ಹೋಗಲು ಹಣ ಇಲ್ಲದ್ದರಿಂದ ತನಗೆ ಯಾರಾದರೂ ಹಣ ನೀಡಿಯಾರು ಎಂಬ ಕಾರಣದಿಂದ ಬಸವಣ್ಣನ ಗುಡಿಯ ಮುಂದೆ ಶಿರ್ಷಾಸನದಲ್ಲಿ ಇಪ್ಪತ್ತೊಂದು ದಿನಗಳು ನಿಂತವರು.

ಹಳ್ಳಿಗಾಡಿನ ಜನರ ಕಷ್ಟಗಳನ್ನು ಬಲು ಹತ್ತಿರದಿಂದ ಕಂಡಿದ್ದ ಮಹಾಂತರು, ಸರಕಾರದ ಸೌಲಭ್ಯಗಳನ್ನು ಒದಗಿಸಿಕೊಡುವುದು ಮಾತ್ರವಲ್ಲದೇ ಶಿಕ್ಷಣ ಮತ್ತು ಕಾಯಕದ ಮಹತ್ವವನ್ನು ಜನರಿಗೆ ತಿಳಿಸಕೊಟ್ಟರು.

ಬಳಿಕ ತಮ್ಮ ನೌಕರಿ ಬಿಟ್ಟು ತಂಗಡಗಿ ಗ್ರಾಮಕ್ಕೆ ಬಂದು ಅಲ್ಲಿಯೂ ನೆಲೆ ನಿಲ್ಲದೇ ಕೂಡಲ ಸಂಗಮಕ್ಕೆ ಬಂದು ಸಾಧನೆಯಲ್ಲಿ ತೊಡಗಿದರು.

ಅಲ್ಲಿಂದ ಮುಂದೆ ನವಲಗುಂದಕ್ಕೆ ಬಂದ ಮಹಾಂತಸ್ವಾಮೀಜಿ, ನಾಗಲಿಂಗನ ಸಮಾಧಿ ದರ್ಶನ, ನಂತರ ಯಲ್ಲಮ್ಮನಗುಡ್ಡಕ್ಕೆ ಹೋಗಿ ರೇಣುಕಾ ದೇವಿ ದರ್ಶನ ಬಳಿಕ ಸಮೀಪದ ಕರೀಕಟ್ಟಿ ಗ್ರಾಮಕ್ಕೆ ತೆರಳಿದರು.ಅಲ್ಲಿನ  ಹೊಲದಲ್ಲಿ ಮಹಾಲಿಂಗ ಹುದುಗಿ ಹೋಗಿದ್ದನ್ನು ತಮ್ಮ ದಿವ್ಯ ದೃಷ್ಠಿಯಿಂದ ಅರಿಕೆ ಮಾಡಿಕೊಟ್ಟರು.

ಹುಬ್ಬಳ್ಳಿಯ ಸಿದ್ಧಾರೂಢರ ಮಠಕ್ಕೆ ಬಂದು ದರುಶನ ಪಡೆದು ಬಳಿಕ ನರೇಂದ್ರಕ್ಕೆ ಆಗಮಿಸಿದ ಮಹಾಂತಸ್ವಾಮೀಜಿ, ಗ್ರಾಮದಲ್ಲಿ ಮೂರು ದಿನಗಳ ಕಾಲ ಭಿಕ್ಷಾಟನೆ ನಡೆಸಿದರು. ಊರ ಮುಂದಿನ ಮುಳ್ಳು-ಕಂಟಿಗಳ ನಡುವೆ ಮುಸುಕು ಹಾಕಿಕೊಂಡಿದ್ದ ಮುರಿದು ಬಿದ್ದ ಶಿವಾಲಯ
ಕಂಡು, ಮಠದಲ್ಲಿನ ಮಳೆಪ್ಪಜ್ಜನ ಈಶ್ವರ ಮೂರ್ತಿ ಅಪ್ಪಿಕೊಂಡು ನಲಿದಾಡಿದರು.

ಅಂದೇ ತಮ್ಮ ಸಾಧನಾ ಕ್ಷೇತ್ರ ಇದೇ ಎಂದು ತೀರ್ಮಾನಿಸಿದರು. ಇದರಿಂದ ಸ್ಪೂರ್ತಿಗೊಂಡ ಮಹಾಂತಸ್ವಾಮೀಜಿ, ಮಠದ ಎದುರಿನ ಅರಳಿಮರದ ಕೆಳಗೆ ಬ್ರಹ್ಮಚರ್ಯ ಸಾಧನೆಗಾಗಿ ತಲೆ ಕೆಳಗಾಗಿ ನಿಂತರು. ಹೀಗೆ ಒಂಬತ್ತು ದಿನಗಳವರೆಗೆ ನಿಂತ ಸಂದರ್ಭದಲ್ಲೇ, ಮೂರು ತಿಂಗಳಿಂದ ಮಳೆ ಆಗಮನವನ್ನು ಕಾಯುತ್ತಿದ್ದ ಜನರು ಅರಳಿ ಮರದ ಹತ್ತಿರ ಸೇರಿದರು.ತಮ್ಮ ಗ್ರಾಮಕ್ಕೆ ಮಳೆ ಬರದಿರಲು ಈ
ಸ್ವಾಮಿಯೇ ಕಾರಣ ಎಂದು ಮಾತನಾಡಿಸಿದರು ಜೊತೆಗೆ ಹಳಿಯತೊಡಗಿದರು. ಆದರಿಂದ ಇದರಿಂದ ವಿಚಲಿತರಾಗದ ಸ್ವಾಮೀಜಿ ಕೈಸನ್ನೆ ಮೂಲಕ ಲೆಕ್ಕಣಿಕೆ ಮತ್ತು ಕಾಗದ ತರಿಸಿ, ಮುರಿದು ಬಿದ್ದ ಗುಡಿಯನ್ನು ಸೂರ್ಯೋದಯದ ಹೊತ್ತಿಗೆ ಜೀರ್ಣೋದ್ಧಾರ ಮಾಡಬೇಕು.

ಆಗ ಮಳೆ ಸುರಿದು ಜೀವನ ಸಮೃದ್ಧಿಯತ್ತ ಸಾಗಲಿದೆ ಎಂದರು.ಮೊದಲು ಹಿಂಜರಿದ ಜನರು, ನೋಡಿಯೇ ಬಿಡೋಣ ಎಂದು ಸೂರ್ಯೋದಯದೊಳಗೆ ಗುಡಿಯ ಜೀರ್ಣೋದ್ಧಾರ ಕಾರ್ಯ ಮಾಡಿ ಮುಗಿಸಿದರು. ಅದೇ ದಿನ ಸಂಜೆ ಧಾರಾಕಾರ ಸುರಿದಿದ್ದು ಅವರ ತಪೋಶಕ್ತಿಗೆ ಸಾಕ್ಷಿಯಾಯಿತು.

ಮಹಾಂತರ ಪವಾಡದಿಂದ ಆಶ್ಚರ್ಯಚಕಿತರಾದ ಗ್ರಾಮಸ್ಥರಿಗೆ ಅವರ ಮೇಲೆ ಭಕ್ತಿ-ಗೌರವಗಳು ಹೆಚ್ಚಾದವು. ನರೇಂದ್ರ ಮತ್ತು ಸುತ್ತಲಿನಗ್ರಾಮಗಳ ಜನರು ಸ್ವಾಮೀಜಿ ಕಡೆಗೆ ಬರಲಾರಂಭಿಸಿದರು. ಆಗ ಸ್ವಾಮೀಜಿ ಎಲ್ಲರೂ ಕೂಡಿ ಶಿವ ಭಜನೆ ಮಾಡಿರಿ,
ಮಳೆಪ್ಪಜ್ಜನು ನಿಮ್ಮೆಲ್ಲರಿಗೆ ಸುಖ-ಸಮೃದ್ಧಿ

WhatsApp Group Join Now
Telegram Group Join Now
Share This Article