ಬೆಳಗಾವಿ ಶ್ರೀ ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕಿನ 61ನೇ ವಾರ್ಷಿಕ ಮಹಾಸಭೆ

Ravi Talawar
ಬೆಳಗಾವಿ ಶ್ರೀ ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕಿನ 61ನೇ ವಾರ್ಷಿಕ ಮಹಾಸಭೆ
WhatsApp Group Join Now
Telegram Group Join Now

ಬೆಳಗಾವಿ: ಬೆಳಗಾವಿ ಶ್ರೀ ಬಸವೇಶ್ವರ ಕೋ-ಆಪರೇಟಿವ್ ಬ್ಯಾಂಕಿನ ೬೧ ನೇ ವಾರ್ಷಿಕ ಮಹಾಸಭೆಯು ಅಗಷ್ಟ್18 ರಂದು  ರಾಮನಗರದಲ್ಲಿರುವ ವಿದ್ಯಾಧಿರಾಜ ಸಭಾಗೃಹದಲ್ಲಿ ಯಶಸ್ವಿಯಾಗಿ ಜರುಗಿತು.

೨೦೨೩-೨೪ ರ ಸಾಲಿಗೆ ರೂ.೧೫೧.೦೦ ಲಕ್ಷ ಲಾಭ ಗಳಿಕೆ ಹಾಗೂ ಸದಸ್ಯರಿಗೆ ಶೇ.೧೨ ಪ್ರತಿಶತ ಡಿವಿಡೆಂಡ್ ಘೋಷಣೆ ಜಗಜ್ಯೋತಿ ಶ್ರೀ ಬಸವಣ್ಣನವರ ಭಾವ ಚಿತ್ರದ ಪೂಜೆಯಿಂದ
ಮೊದಲ್ಗೊಂಡು ಸಭೆಯು ಆರಂಭವಾಯಿತು. ಮೊದಲಿಗೆ ಬ್ಯಾಂಕಿನ ಜನರಲ್ ಮ್ಯಾನೇಜರರಾದ  ಎಸ್.ಎಸ್.ವಾಲಿ ಇವರು ಎಲ್ಲ ಉಪಸ್ಥಿತ ಸದಸ್ಯರನ್ನು, ನಿರ್ದೇಶಕ ಮಂಡಲಿ ಸದಸ್ಯರನ್ನು ಹಾಗೂ ವ್ಯವಸ್ಥಾಪನಾ ಮಂಡಲಿ ಸದಸ್ಯರನ್ನು ಹಾರ್ದಿಕವಾಗಿ ಸ್ವಾಗತಿಸಿದರು.

ಬ್ಯಾಂಕಿನ ನಿರ್ದೇಶಕರಾಗಿದ್ದ ಲಿಂ.  ವೀರಣ್ಣಾ (ರಾಜು) ಸಿದ್ರಾಮಪ್ಪಾ ಹುಲಮನಿ ಇವರು ಹಾಗೂ ವರದಿ ವರ್ಷದಲ್ಲಿ ನಿಧನರಾದ ಬ್ಯಾಂಕಿನ ಸದಸ್ಯರ ಆತ್ಮಕ್ಕೆ ಚಿರಶಾಂತಿ ದಯಪಾಲಿಸಲೆಂದು ಪ್ರಾರ್ಥಿಸಿ ಎರಡು ನಿಮಿಷ ಮೌನ ಆಚರಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಪ್ರಾರ್ಥನೆಯೊಂದಿಗೆ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಮೊದಲಿಗೆ ೭೫ ವರ್ಷ ವಯೋಮಾನದ, ಕಳೆದ ೨೦ ವರ್ಷಗಳಿಂದ ಬ್ಯಾಂಕಿನ ಸದಸ್ಯರಾಗಿರುವ ಒಟ್ಟು ೩೭ ಜನ ಹಿರಿಯ ಸದಸ್ಯರನ್ನು ಬ್ಯಾಂಕಿನ ಪರವಾಗಿ ಶಾಲು, ಫಲಪುಷ್ಪ ಹಾಗೂ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.

೨೦೨೩-೨೪ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ/ಪಿ.ಯು.ಸಿ- ೨/ಡಿಪ್ಲೋಮಾ ಮತ್ತು ವಿವಿಧ ಪದವಿ ಪರೀಕ್ಷೆಗಳಲ್ಲಿ ೯೦% ಕ್ಕಿಂತ ಹೆಚ್ಚು ಅಂಕಗಳಿಸಿದ ಒಟ್ಟು ೨೭ ಜನ ಸದಸ್ಯರ ಮಕ್ಕಳಿಗೆ ಬ್ಯಾಂಕಿನ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರುಗಳು ಹಾಗೂ ವ್ಯವಸ್ಥಾಪನಾ ಮಂಡಲಿ ಸದಸ್ಯರು ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಿ ಪ್ರೊತ್ಸಾಹಿಸಿದರು.

ಈ ಸಂದರ್ಭದಲ್ಲಿ ಬ್ಯಾಂಕಿನ ನಿವೃತ ಪ್ರಧಾನ ವ್ಯವಸ್ಥಾಪಕರುಗಳಾದ  ಜಿ.ಎಸ್.ಟೋಪಣ್ಣವರ, ವಿ.ಬಿ.ಶಿಗಿಹಳ್ಳಿ,  ವಿ.ಸಿ.ಖಾನಾಪೂರ ಹಾಗೂ  ಆರ.ಎ.ಹೊನ್ನೋಳಿ ಇವರು
ಬ್ಯಾಂಕಿಗೆ ನೀಡಿದ ತಮ್ಮ ನಿಸ್ವಾರ್ಥ ಸೇವೆಯನ್ನು ನೆನೆದು ಅವರಿಗೆ ಬ್ಯಾಂಕಿನ ವತಿಯಿಂದ ಸತ್ಕರಿಸಲಾಯಿತು.

ಅದರಂತೆ, ೨೦೨೩-೨೪ನೇ ಸಾಲಿನಲ್ಲಿ ಹೆಚ್ಚಿನ ಸಾಲ ಹಂಚಿಕೆ ನೀಡಿದ ಶಾಖೆಯೆಂದು ಕ್ಲಬ್‌ರೋಡ ಶಾಖೆಗೆ, ಅತ್ಯುತ್ತಮ ಸಾಲ ವಸೂಲಾತಿ ಸಾಧಿಸಿದ ಶಾಖೆಯೆಂದು ಶಹಾಪೂರ ಶಾಖೆಗೆ, ಹೆಚ್ಚಿನ ಠೇವಣಿ ಸಂಗ್ರಹಿಸಿದ ಶಾಖೆಯೆಂದು ಟಿಳಕವಾಡಿ ಶಾಖೆಗೆ, ಹಾಗೂ ಉತ್ತಮ ಲಾಭ ಗಳಿಸಿದ ಶಾಖೆಯೆಂದು ರಾಮತೀರ್ಥನಗರ ಶಾಖೆಗೆ ಆಡಳಿತ ಮಂಡಳಿ ಸದಸ್ಯರಿಂದ ಆಗಿನ ಶಾಖಾ ವ್ಯವಸ್ಥಾಪಕರುಗಳಿಗೆ ಪ್ರಶಸ್ತಿ ಮತ್ತು ನಗದು ಬಹುಮಾನ ನೀಡಿ ಪ್ರೋತ್ಸಾಹಿಸಿದರು.

ಆನಂತರ ವಿಷಯಗಳ ಪಟ್ಟಿಯ ಪ್ರಕಾರ ಸಭೆಯನ್ನು ಮುಂದುವರೆಸಿ, ಬ್ಯಾಂಕಿನ ಕಳೆದ ವಾರ್ಷಿಕ ಮಹಾಸಭೆಯ ನಡುವಳಿಕೆಗಳನ್ನು ಓದಿ ಧೃಡೀಕರಿಸಲಾಯಿತು. ೨೦೨೩-೨೪ನೇ ಸಾಲಿನ ವಾರ್ಷಿಕ ವರದಿಯನ್ನು ಅಧ್ಯಕ್ಷರಾದ  ರಮೇಶ ಎಮ್. ಕಳಸಣ್ಣವರ ಇವರು ವರದಿ ವಾಚನ ಮಾಡಿದರು.

ಸದರೀ ಸಾಲಿಗಾಗಿ  ಬ್ಯಾಂಕು ರೂ. ೨೧೫.೦೧ ಲಕ್ಷ ಲಾಭಗಳಿಸಿದ್ದು, ರೂ.೬೪.೦೧ ಲಕ್ಷ ಆಯಕರ ಅನುವು ಮಾಡಿದ ನಂತರ ರೂ.೧೫೧.೦೦ ಲಕ್ಷ ನಿವ್ವಳ ಲಾಭವಾಗಿರುತ್ತದೆ. ಸದಸ್ಯರಿಗೆ ಶೇ. ೧೨ ರಷ್ಟು ಲಾಭಾಂಶವನ್ನು ಘೋಷಿಸಲಾಯಿತು. ನಿರ್ದೇಶಕರಾದ ಶ್ರೀಮತಿ. ಸರಳಾ ಎಸ್. ಹೇರೆಕರ ಇವರಿಂದ ವಂದನಾರ್ಪಣೆ ಸಲ್ಲಿಸಲಾಯಿತು. ಕೊನೆಯದಾಗಿ ರಾಷ್ಟ್ರ ಗೀತೆಯೊಂದಿಗೆ ಸಭೆಯು ಮುಕ್ತಾಯಗೊಂಡಿತು.

ವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ಬ್ಯಾಂಕಿನ ಅಧ್ಯಕ್ಷರಾದ  ರಮೇಶ ಎಮ್. ಕಳಸಣ್ಣವರ ಇವರು ವಹಿಸಿದ್ದರು. ಉಪಾಧ್ಯಕ್ಷರಾದ  ಗಿರೀಶ ವಿ. ಬಾಗಿ, ನಿರ್ದೇಶಕರುಗಳಾದ (ಅಧ್ಯಕ್ಷರು-ಃoಒ)  ಬಾಳಪ್ಪಾ ಬಿ. ಕಗ್ಗಣಗಿ,  ವಿಜಯಕುಮಾರ ಸಿ. ಅಂಗಡಿ,  ಪ್ರಕಾಶ ಎಂ. ಬಾಳೇಕುಂದ್ರಿ,  ರಮೇಶ ಎಸ್. ಸಿದ್ದಣ್ಣವರ, ಬಸವರಾಜ ವಿ.
ಝೊಂಡ,  ಬಸವರಾಜ ವಿ. ಉಪ್ಪಿನ, . ಸರಳಾ ಎಸ್. ಹೇರೆಕರ, ಗಿರೀಶ ಎಸ್. ಕತ್ತಿಶೆಟ್ಟಿ,  ದೀಪಾ ಎಮ್. ಕುಡಚಿ,  ಸಚಿನ್ ಆರ್. ಶಿವಣ್ಣವರ,  ಸತೀಶ ಕೆ. ಪಾಟೀಲ, ಚಂದ್ರಕಾಂತ ಎಚ್.ಕಟ್ಟಿಮನಿ, ತಜ್ಞ ನಿರ್ದೇಶಕರಾದ  ಚಂದ್ರಶೇಖರ ಎ. ಹಿರೇಮಠ, ವ್ಯವಸ್ಥಾಪನಾ ಮಂಡಲಿ ಸದಸ್ಯರುಗಳಾದ  ರಾಜಶೇಖರ ಎಸ್. ಚೊಣ್ಣದ ಹಾಗೂ  ಮಹೇಶ ಎಂ. ಉಡದಾರ ಹಾಗೂ ರಾಮದುರ್ಗ, ಮುಧೋಳ ಮತ್ತು ಹುಬ್ಬಳ್ಳಿ ಶಾಖಾ ಸಲಹಾ ಸಮಿತಿಯ ಸದಸ್ಯರು, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕರಾದ  ಎಸ್.ಎಸ್.ವಾಲಿ, ಪ್ರಭಾರ ಮುಖ್ಯ ಶಾಖಾ ವ್ಯವಸ್ಥಾಪಕರಾದ  ಆರ್.ಯು.ತೆಲಸಂಗ , ಕ್ಲಬ್‌ರೋಡ ಶಾಖಾ ವ್ಯವಸ್ಥಾಪಕರಾದ  ವಿ.ವಿ.ಅಂಟಿನ, ಶಿವಬಸವನಗರ ಶಾಖಾ ಮ್ಯಾನೇಜರರಾದ  ಸಿ.ಎಸ್.ಶೆಟ್ಟಿ ಹಾಗೂ ಎಲ್ಲ ಶಾಖಾ ವ್ಯವಸ್ಥಾಪಕರು, ಸಿಬ್ಬಂದಿ ವರ್ಗ ಮತ್ತು ಪಿಗ್ಮಿ ಏಜಂಟರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article