ವಿವಿಧ ಕಾರಣಗಳಿಗಾಗಿ ಮದ್ಯ ಮಾರಾಟ ನಿಷೇಧ: ಸರ್ಕಾರದ ಬೊಕ್ಕಸಕ್ಕೆ 517 ಕೋಟಿ ನಷ್ಟ

Ravi Talawar
ವಿವಿಧ ಕಾರಣಗಳಿಗಾಗಿ ಮದ್ಯ ಮಾರಾಟ ನಿಷೇಧ: ಸರ್ಕಾರದ ಬೊಕ್ಕಸಕ್ಕೆ 517 ಕೋಟಿ  ನಷ್ಟ
WhatsApp Group Join Now
Telegram Group Join Now

ಬೆಂಗಳೂರು: ಅಬಕಾರಿ ಸುಂಕ ರಾಜ್ಯದ ಬೊಕ್ಕಸ ತುಂಬಿಸುವ ಪ್ರಮುಖ ಮೂಲಗಳಲ್ಲಿ ಒಂದಾಗಿದೆ. ಮದ್ಯದ ಬೆಲೆ ಏರಿಕೆಯಿಂದ ಇತ್ತೀಚೆಗೆ ಅಬಕಾರಿ ಆದಾಯದಲ್ಲಿ ಕೊರತೆ ಕಂಡುಬರುತ್ತಿದೆ. ಈ ಮಧ್ಯೆ ಹಬ್ಬ ಹರಿದಿನ ಸೇರಿ ವಿವಿಧ ಕಾರಣಗಳಿಗಾಗಿ ಆಯಾ ಜಿಲ್ಲೆಗಳಲ್ಲಿನ ಮದ್ಯ ಮಾರಾಟ ನಿಷೇಧದಿಂದ ಸರ್ಕಾರದ ಬೊಕ್ಕಸಕ್ಕೆ ಬರೋಬ್ಬರಿ 517 ಕೋಟಿ ರೂ. ಆದಾಯ ನಷ್ಟವಾಗಿದೆ.

ರಾಜ್ಯದ ಬೊಕ್ಕಸ ತುಂಬಿಸುವ ಪ್ರಮುಖ ಮೂಲಗಳ ಪೈಕಿ ಅಬಕಾರಿ ಸುಂಕವೂ ಒಂದು.‌ ಪ್ರಸಕ್ತ 2024-25ರ ಬಜೆಟ್​ನಲ್ಲಿ 38,525 ಕೋಟಿ ರೂ. ಅಬಕಾರಿ ಆದಾಯ ಸಂಗ್ರಹದ ಗುರಿ ಇಡಲಾಗಿದೆ. ಆದರೆ ಆರಂಭದಲ್ಲೇ ನಿರೀಕ್ಷಿತ ಅಬಕಾರಿ ಆದಾಯ ಸಂಗ್ರಹ ಸಾಧ್ಯವಾಗುತ್ತಿಲ್ಲ. ಬಜೆಟ್ ಗುರಿಯಂತೆ ಎರಡು ತಿಂಗಳಲ್ಲಿ 6,420 ಕೋಟಿ ರೂ. ಅಬಕಾರಿ ಸುಂಕ ಸಂಗ್ರಹಿಸಬೇಕಾಗಿದೆ. ಆದರೆ, ಎರಡು ತಿಂಗಳಲ್ಲಿ 5,450 ಕೋಟಿ ರೂ. ಮಾತ್ರ ಸಂಗ್ರಹಿಸಲಾಗಿದೆ. ಬಜೆಟ್ ಗುರಿಗಿಂತ 970 ಕೋಟಿ ರೂ. ಕುಂಟಿತವಾಗಿದೆ.

2023-24 ಬಜೆಟ್​ನಲ್ಲಿ ಸಿಎಂ ಸಿದ್ದರಾಮಯ್ಯ ಅಬಕಾರಿ ಮೂಲಕ 36,000 ಕೋಟಿ ಆದಾಯ ಸಂಗ್ರಹದ ಗುರಿ ನಿಗದಿ ಪಡಿಸಿದ್ದರು. ಆದರೆ, ಆರ್ಥಿಕ ವರ್ಷದಲ್ಲಿ ಕೇವಲ 34,629 ಕೋಟಿ ರೂ‌. ಅಬಕಾರಿ ಆದಾಯ ಸಂಗ್ರಹ ಮಾಡಲು ಸಾಧ್ಯವಾಯಿತು. ಬಜೆಟ್ ಗುರಿಗಿಂತ 1,371 ಕೋಟಿ ರೂ. ಸಂಗ್ರಹ ಕುಂಟಿತವಾಗಿತ್ತು. ಮದ್ಯ ದರ ಏರಿಕೆ ಹಿನ್ನೆಲೆ ಮದ್ಯ ಮಾರಾಟ ಪ್ರಮಾಣ ಕಡಿಮೆಯಾಗಿದ್ದು, ನಿರೀಕ್ಷಿತ ಆದಾಯ ಗುರಿ ಮುಟ್ಟಲು ಸಾಧ್ಯವಾಗಿಲ್ಲ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಅಷ್ಟೇ ಅಲ್ಲ ಮದ್ಯದ ಆದಾಯ ಖೋತಾಗೆ ಹಬ್ಬ ಹರಿದಿನ, ವಿಶೇಷ ದಿನಗಳಂದು ಮದ್ಯ ಮಾರಾಟ ನಿಷೇಧಗಳಿಂದ ಬೊಕ್ಕಸಕ್ಕೆ ಭಾರೀ ನಷ್ಟ ಉಂಟಾಗಿರುವುದಾಗಿ ಅಬಕಾರಿ ಇಲಾಖೆ ಮಾಹಿತಿ ನೀಡಿದೆ.

WhatsApp Group Join Now
Telegram Group Join Now
Share This Article