ದೆಹಲಿಯಲ್ಲಿ 5 ಶಂಕಿತಉಗ್ರರನ್ನು ಬಂಧನ ಬಾಂಬ್ ತಯಾರಿಕಾ ಘಟಕ ಪತ್ತೆ

Ravi Talawar
ದೆಹಲಿಯಲ್ಲಿ 5 ಶಂಕಿತಉಗ್ರರನ್ನು ಬಂಧನ ಬಾಂಬ್ ತಯಾರಿಕಾ ಘಟಕ ಪತ್ತೆ
WhatsApp Group Join Now
Telegram Group Join Now

ನವದೆಹಲಿ, ಸೆಪ್ಟೆಂಬರ್ 11: ದೆಹಲಿ ಪೊಲೀಸರ ವಿಶೇಷ ಘಟಕವು ದೆಹಲಿಯಲ್ಲಿ ಐಸಿಸ್‌ಗೆ ಸಂಬಂಧಿಸಿದ ಐವರು ಶಂಕಿತಉಗ್ರರನ್ನು ಬಂಧಿಸಿದೆ. ಹಾಗೇ, ಆ ಸ್ಥಳದಲ್ಲಿ ಅಧಿಕಾರಿಗಳು ಸೋಡಿಯಂ ಬಯೋಕಾರ್ಬೊನೇಟ್, ಸರ್ಕ್ಯೂಟ್‌ಗಳು, ಸ್ಟ್ರಿಪ್‌ನಂತಹ ಎಲೆಕ್ಟ್ರಾನಿಕ್ ಘಟಕಗಳನ್ನು ಹೊಂದಿರುವ ಪೆಟ್ಟಿಗೆಯನ್ನು ಸಹ ಪತ್ತೆಹಚ್ಚಿದ್ದಾರೆ. ಬಯೋಕಾರ್ಬೊನೇಟ್ ಅನ್ನು ಸುಧಾರಿತ ಸ್ಫೋಟಕ ಸಾಧನಗಳನ್ನು (IED) ತಯಾರಿಸಲು ಬಳಸಲಾಗುತ್ತದೆ. ಈ ಬಾಂಬ್ ತಯಾರಿಕಾ ಘಟಕವನ್ನು ಕೂಡ ಪೊಲೀಸರು ಪತ್ತೆಹಚ್ಚಿ ಅಲ್ಲಿರುವ ವಸ್ತುಗಳ ಸ್ಯಾಂಪಲ್ ಸಂಗ್ರಹಿಸಿದ್ದಾರೆ. ಶಂಕಿತ ಉಗ್ರರಿಂದ ವೈರ್‌ಗಳು, ಡಯೋಡ್‌ಗಳು, ಮದರ್‌ಬೋರ್ಡ್ ಮತ್ತು ಉಸಿರಾಟದ ಮಾಸ್ಕ್​ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

WhatsApp Group Join Now
Telegram Group Join Now
Share This Article