ಪೊಲೀಸರ ಭರ್ಜರಿ ಬೇಟೆ: ಅಕ್ರಮ 5.60 ಕೋಟಿ ರೂ. ನಗದು,120ಕ್ಕೂ ಕೆಜಿಗೂ ಹೆಚ್ಚು ಚಿನ್ನ, ಬೆಳ್ಳಿ ವಶ

Ravi Talawar
ಪೊಲೀಸರ ಭರ್ಜರಿ ಬೇಟೆ: ಅಕ್ರಮ 5.60 ಕೋಟಿ ರೂ. ನಗದು,120ಕ್ಕೂ ಕೆಜಿಗೂ ಹೆಚ್ಚು ಚಿನ್ನ, ಬೆಳ್ಳಿ ವಶ
WhatsApp Group Join Now
Telegram Group Join Now

ಬಳ್ಳಾರಿ,ಏಪ್ರಿಲ್​ 08: : ಇಲ್ಲಿನ ಬ್ರೂಸ್‌ಪೇಟೆ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ದಾಖಲೆ ಇಲ್ಲದ 5.60 ಕೋಟಿ ರೂ. ನಗದು ಮತ್ತು ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಿದ್ದಾರೆ. ಕಂಬಳಿ ಬಜಾರ್‌ನಲ್ಲಿರುವ ಹೇಮಾ ಜ್ಯುವೆಲ್ಲರಿ ಶಾಪ್ ಮಾಲೀಕರ ಮನೆ ಮೇಲೆ ದಾಳಿ ನಡೆದಿದೆ.

ಒಟ್ಟು 5.60 ಕೋಟಿ ರೂ. ನಗದು, 3 ಕೆ.ಜಿ ಬಂಗಾರ 103 ಕೆ.ಜಿ ಬೆಳ್ಳಿ ಆಭರಣ, 21 ಕೆ.ಜಿ ಕಚ್ಚಾ ಬೆಳ್ಳಿಯನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಜ್ಯುವೆಲ್ಲರಿ ಶಾಪ್ ಮಾಲೀಕ ನರೇಶ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಎಸ್ಪಿ ರಂಜಿತ್ ಕುಮಾರ್ ಬಂಡಾರು, “ವಶಕ್ಕೆ ಪಡೆದ ನಗದು, ಚಿನ್ನ ಮತ್ತು ಬೆಳ್ಳಿಯನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸುತ್ತೇವೆ. ಹಣದ ಮೂಲ ಪತ್ತೆಗೆ ವಿಚಾರಣೆ ನಡೆಸಲಾಗುತ್ತದೆ. ನಂತರ ಖಚಿತ ಮಾಹಿತಿ ಲಭ್ಯವಾಗಲಿದೆ. ಡಿವೈಎಸ್ಪಿ ನಂದಾರೆಡ್ಡಿ, ಸಿಪಿಐ ಎಂ.ಎನ್.ಸಿಂಧೂರು ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ” ಎಂದರು.

 

WhatsApp Group Join Now
Telegram Group Join Now
Share This Article