ಬಳ್ಳಾರಿ. 15..ನಗರದ ಸಂಗನಕಲ್ಲು ರಸ್ತೆಯಲ್ಲಿರುವ ಸುಬ್ಬರಾವ್ ಕ್ಯಾಂಪ್ ನಲ್ಲಿ ನೆಲೆಸಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಿಯ 4ನೇಯ ವರ್ಷದ ಜಾತ್ರ ಮಹೋತ್ಸವ ಇದೇ ತಿಂಗಳು ಜುಲೈ 22 ನೇಯ ಆಷಾಢ 4ನೇ ಮಂಗಳವಾರ ನಡೆಯಲಿದೆ, ಪ್ರತಿಯೊಬ್ಬ ಭಕ್ತರು ಈ ಜಾತ್ರಾ ಮಹೋತ್ಸವಕ್ಕೆ ಪಾಲ್ಗೊಂಡು ಯಲ್ಲಮ್ಮ ದೇವಿಯ ಕೃಪಗೆ ಪಾತ್ರರಾಗಬೇಕೆಂದು ದೇವಸ್ಥಾನದ ದೇವಿಯ ಆರಾಧಕರು ಶ್ರೀ ಸದ್ಗುರು ಜುಮಾರಿ ತಾತನವರು ತಿಳಿಸಿದ್ದಾರೆ.
ಜುಲೈ 21ರ ಬೆಳಗ್ಗೆ ವಿಶೇಷ ಪೂಜೆ ಆನಂತರ ಪಲ್ಲಕ್ಕಿ ಉತ್ಸವ ಹಾಗೂ ಸಾಯಂಕಾಲ 5 ಕ್ಕೆ ಸಕಲ ಜಾನಪದ ವಾದ್ಯ ವೈಭಗಳೊಂದಿಗೆ ನಡೆಯಲಿದೆ ಎಂದು. ಮರುದಿನ ಅಂದರೆ ಜುಲೈ 22 ಆಷಾಢ ನಾಲ್ಕನೆಯ ಮಂಗಳವಾರ ಸಾಯಂಕಾಲ ಮಹಾ ರಥೋತ್ಸವ, ಕಳಸ, ಕುಂಭ ಮೆರವಣಿಗೆ ನಡೆಯಲಿದೆ .ನಂತರ ಲಂಕಾ ದಹನ, ಪಟಾಕಿ ಉತ್ಸವ ನಂತರ ವಿವಿಧ ಪೂಜೆಗಳು ವಿಜೃಂಭಣೆಯಿಂದ ನಡೆಯಲಿದೆ ಎಂದು ಅರ್ಚಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ವರ್ಷ ವಿಶೇಷವಾಗಿ ಈ ಜಾತ್ರಾ ಮಹೋತ್ಸವಕ್ಕೆ ಈ ವರ್ಷ ವಿಶೇಷವಾಗಿ ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಮುಖ್ಯವಾಗಿ ದೇವಿಯ ಜಾತ್ರಾ ಮಹೋತ್ಸವ ಸಂದರ್ಭವಾಗಿ
ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಜುಮಾರಿ ತಾತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.