ಬೆಳಗಾವಿ ಗ್ರಾಹಕರ ಸಹಕಾರಿ ಸಗಟು ಮಾರಾಟ ಮಳಿಗೆ ನಿಯಮಿತದ ೪೮ನೇ ವಾರ್ಷಿಕ ಮಹಾಸಭೆ

Ravi Talawar
ಬೆಳಗಾವಿ ಗ್ರಾಹಕರ ಸಹಕಾರಿ ಸಗಟು ಮಾರಾಟ ಮಳಿಗೆ ನಿಯಮಿತದ ೪೮ನೇ ವಾರ್ಷಿಕ ಮಹಾಸಭೆ
WhatsApp Group Join Now
Telegram Group Join Now

ಬೆಳಗಾವಿ: ಬೆಳಗಾವಿ ಗ್ರಾಹಕರ ಸಹಕಾರಿ ಸಗಟು ಮಾರಾಟ ಮಳಿಗೆಯ 48ನೇ ವಾರ್ಷಿಕ ಮಹಾಸಭೆಯು ಸಂಘದ ಕಾರ್ಯಾಲಯದಲ್ಲಿ ಸೆಪ್ಟೆಂಬರ್ ೬ರಂದು ಬೆಳಿಗ್ಗೆ 11.30 ಗಂಟೆಗೆ ಜರುಗಿತು.

ಅಧ್ಯಕ್ಷ ಮಹಾಂತೇಶ ಪಾಟೀಲ, ಉಪಾಧ್ಯಕ್ಷ ಬಿ.ಡಿ. ಜಕ್ಕಣ್ಣವರ, ಹಿರಿಯ ನಿರ್ದೇಶಕರಾದ ಎಸ್.ಎಂ.ಬುಚಡಿ ಅವರು ದೀಪ ಬೆಳಗಿಸಿ ಸಭೆಗೆ ಚಾಲನೆ ನೀಡಿದರು.

ಬಿ.ಡಿ.ಜಕ್ಕಣ್ಣವರ ಸ್ವಾಗತಿಸಿ, ಮಾಲಾರ್ಪಣೆ ಮಾಡಿದರು. ಜಗಜಂಪಿಯವರು ವರದಿ ವಾಚನ ಮಾಡಿದರು. ಎಸ್.ಎಂ. ಬುಚಡಿ, ಹೆದ್ದೂರಶೆಟ್ಟಿ, ಎಸ್.ಆರ್.ಹಿರೇಮಠ ಸಂಸ್ಥೆಯ ಬಗ್ಗೆ ಮಾತನಾಡಿದರು.

ಮುಂಬರುವ ದಿನಗಳಲ್ಲಿ 50ನೇ ವಾರ್ಷಿಕ ಮಹಾಸಭೆ ಆಚರಿಸಲು ಈಗಿನಿಂದಲೇ ತಯಾರಿ ಮಾಡಿಕೊಳ್ಳಲು ಸೂಚಿಸಿದರು. ಅದಂತೆ 70 ವರ್ಷ ಮೇಲ್ಪಟ್ಟ ಹಿರಿಯ ಸದಸ್ಯರನ್ನು ಸನ್ಮಾನಿಸಲು ಮನವಿ ಸಲ್ಲಿಸಲಾಯಿತು. ಅಧ್ಯಕ್ಷರು ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು.

48ನೇ ವಾರ್ಷಿಖ ಮಹಾಸಭೆಯಲ್ಲಿ ಗೋಪಾಲ ಕುಡಚಿ ಅವರ ಮೊಮ್ಮಗಳು, ಚಂದ್ರಕಾಂತ ಗೊ ಕುಡಚಿ ಬಸ್ತವಾಡ ಅವರ ಮಗಳು ಪ್ರಜ್ಞಾ ಕುಡಚಿ ಭರತೇಶ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ೯೩.೫೦ ಪ್ರತಿಶತ ಅಂಕಗಳನ್ನು ಪಡೆದುಕೊಂಡು ಸದರಿ ಕಾಲೇಜಿಗೆ ಪ್ರಥಮ ರ‍್ಯಾಂಕ್ ಪಡೆದುಕೊಂಡಿದ್ದಕ್ಕೆ ಸಂಘದಿಂದ ವಿದ್ಯಾರ್ಥಿನಿಯನ್ನು ಸತ್ಕರಿಸಲಾಯಿತು. ಹಸಿರು ಕ್ರಾಂತಿ ಕನ್ನಡ ದಿನಪತ್ರಿಕೆಗೆ ವಂದನೆ ಸಲ್ಲಿಸಲಾಯಿತು.

ನಿದೇಶಕ ಮಂಡಳಿಯ ಎಲ್ಲ ನಿರ್ದೇಶಕರು ಹಾಗೂ ಸಂಘದ ಸದಸ್ಯರು, ಹಾಜರಿದ್ದು ಸಭೆಗೆ ಶೋಭೆ ತಂದರು. ಸದಸ್ಯರಿಗೆ ಕಾಣಿಕೆಗಳನ್ನು ನೀಡಲಾಯಿತು. ಜಗಜಂಪಿಯವರು ಸಭೆಯನ್ನು ನಡೆಸಿಕೊಟ್ಟರು. ಪ್ರೇಮಾ ಸಾಲಿಮಠ ವಂದನೆ ಸಲ್ಲಿಸಿದರು. ದೇಮಣ್ಣವರ ಹಜಗೋಳಕರ, ಮಲಗುಂದ, ಕೋಲಕಾರ, ಕಾರಗಿ ಸಹಕರಿಸಿದರು.
=============

WhatsApp Group Join Now
Telegram Group Join Now
Share This Article