ಹಾರೂಗೇರಿ. ಲಿಂ. ಬಿ ಆರ್. ಪಾಟೀಲ ಅವರ ಸಮಾಜ ಸೇವೆಯ ಪ್ರತೀಕ ಮತ್ತು ಕನಸಿನ ಸಹಕಾರ ಸೇವೆಯ ಸಲುವಾಗಿ ಸ್ಥಾಪಿಸಿ ಇಂದು ಹೆಮ್ಮರವಾಗಿ ಬೆಳೆದು ಈ ಭಾಗದ ಜನರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಜನತಾ ಸಹಕಾರ ಬ್ಯಾಂಕ ಇದರ ಶ್ರೇಯೋಭಿವೃದ್ಧಿಗೆ ಲಿಂ ಬಿ ಆರ್. ಪಾಟೀಲ ಅವರ ಮೇಲೆ ಜನರ ನಂಬಿಗೆಯೇ ಕಾರಣ ಅದಕ್ಕಾಗಿ ಬ್ಯಾಂಕು 2023-24 ನೇ ಸಾಲಿಗೆ ನಿವ್ವಳ 1.15 ಕೋಟಿ ರೂಪಾಯಿಗಳ ಲಾಭ ಗಳಿಸಿ ಮುಂಚೂಣಿಯಲಿದೆ ಎಂದು ಜನತಾ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ರಾಜಶೇಖರ ಪಾಟೀಲ ಹೇಳಿದರು.
ಅವರು ಪಟ್ಟಣದ ಜನತಾ ಬ್ಯಾಂಕ ಪ್ರಧಾನ ಕಚೇರಿಯಲ್ಲಿ ಆಯೋಜಿಸಲಾಗಿದ್ದ 47 ನೇ ವರ್ಷದ 2023-2024 ನೇ ಸಾಲಿನ ವಾರ್ಷಿಕ ಸರ್ವ ಸಾಧಾರಣ ಸಭೆಯನ್ನು ಉದ್ದೇಸಿಸಿ ಮಾತನಾಡಿ ಪ್ರತಿಯೊಬ್ಬ ಷೇರುದಾರರು ಮತದಾನ ಕಡ್ಡಾಯವಾಗಿ ಮಾಡಲು ಗುರುತಿನ ಕಾರ್ಡ್ ಪಡೆಯಬೇಕು ಮತ್ತು ಈ ಬ್ಯಾಂಕ ಅಭಿವೃದ್ಧಿಗೆ ಆಡಳಿತ ಮಂಡಳಿಯ ಸಹಕಾರ ಮತ್ತು ಸಿಬ್ಬಂದಿ ಶ್ರಮ ಕಾರಣ ಎಂದರು.
ವೃತಿಪರ ನಿರ್ದೇಶಕರಾದ ಸಿ ಎ. ಸಿ ಡಿ. ಮುಂಗರವಾಡಿ ಮಾತನಾಡಿ ಭಾರತ ದೇಶ ಆರ್ಥಿಕವಾಗಿ ದಿನದಿಂದ ದಿನಕ್ಕೆ ಬೆಳವಣಿಗೆ ಹೊಂದುತ್ತಿದ್ದು. ಆರ್ಥಿಕವಾಗಿ ಬೆಳೆದ 5 ನೇ ಬಲಾಡ್ಯ ರಾಷ್ಟ್ರವಾಗಿದೆ ಇದಕ್ಕೆ ಕಾರಣ ಸಹಕಾರಿ ಬ್ಯಾಂಕುಗಳ ಪಾತ್ರ ಎಂದರು.
ಪ್ರಧಾನ ವ್ಯವಸ್ಥಾಪಕರಾದ ಎಸ್ ಎಸ್. ಅಮರಶೆಟ್ಟಿ 2023-2024 ನೇ ಸಾಲಿನ ವರದಿ ವಾಚನ ಮಾಡಿ ಮಾತನಾಡಿ ಬ್ಯಾಂಕು 4800 ಸದಸ್ಯರನ್ನು ಹೊಂದಿ, 207 ಕೋಟಿ ರೂಪಾಯಿಗಳ ದುಡಿಯುವ ಬಂಡವಾಳ ಹೊಂದಿ, 182 ಕೋಟಿ ರೂ ಗಳ ಠೇವಣಿ ಸಂಗ್ರಹಿಸಿ, ಪ್ರಸಕ್ತ ವರ್ಷ 92 ಕೋಟಿ ರೂಪಾಯಿಗಳ ಸಾಲ ನೀಡಿದೆ ಮತ್ತು 2023-24 ಸಲಿಗೆ 1.15 ಕೋಟಿ ರೂ. ಗಳ ಲಾಭ ಗಳಿಸಿದೆ ಮತ್ತು ಬರುವ ಎರಡು ವರ್ಷಗಳ ನಂತರ ಬ್ಯಾಂಕ 50 ವರ್ಷ ಪೂರೈಸುತ್ತಿದ್ದು ಅದರ ಪ್ರಯುಕ್ತ ಬ್ಯಾಂಕ ಮತ್ತು ಗ್ರಾಹಕರ ಬೆಳವಣಿಗೆಗೆ ಸಮಾಜಮುಖಿ ಯೋಜನೆಗಳನ್ನು ಜಾರಿಗೆ ತರಲಾಗುವದು ಎಂದರು.
ಬ್ಯಾಂಕಿನ ವಿವರಗಳನ್ನು ಕುರಿತು ನಿರ್ದೇಶಕರಾದ ಡಾ. ಸಿ ಆರ್. ಗುಡಸಿ ಮಾತನಾಡಿದರು. ಈ ವಾರ್ಷಿಕ ಸಭೆಯಲ್ಲಿ ಉಪಾಧ್ಯಕ್ಷರಾದ ತಮ್ಮಪ್ಪಣ್ಣ ತೇಲಿ, ನಿರ್ದೇಶಕರಾದ ಪ್ರಕಾಶ ಕಶೆಟ್ಟಿ, ಸಂಜೀವ ಅವ್ವಕ್ಕನವರ, ಶಂಕರ ಮಾನಶೆಟ್ಟಿ, ಪ್ರಭುಲಿಂಗ ಫಾಲಬಾವಿ, ಭೀಮಗೊಂಡ ಕರ್ಣವಾಡಿ, ಹಣಮಂತ ಮಡಿವಾಳ, ರಾಯಪ್ಪ ನಾಯಿಕ, ಬಸಗೌಡ ಪಾಟೀಲ, ಜಯಶ್ರೀ ಪಾಟೀಲ, ರೇಖಾ ದೇಶಪಾಂಡೆ, ಯಶೋದಾ ಪಾಟೀಲ, ಕಲ್ಪನಾ ಮಾದರ, ಎಮ್ ಆರ್. ಮಠಪತಿ, ಎಸ್ ಟಿ. ತೇಲಿ, ಅಶೋಕ ಪಾಟೀಲ, ಆನಂದ ಗುರವ, ಮಹಾದೇವ ಜೀರಗಾಳೆ, ಬ್ಯಾಂಕಿನ ಸದಸ್ಯರು, ಸಿಬ್ಬಂದಿ ಉಪಸ್ಥಿತರಿದ್ದರು.