ಇಂಡಿ ವಿಧಾನಸಭಾ ಕ್ಷೇತ್ರದ 4559 ಕೋಟಿ ರೂಪಾಯಿಗಳ ವಿವಿಧ ಇಲಾಖೆಯ ಅಭೀವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ

Ravi Talawar
ಇಂಡಿ ವಿಧಾನಸಭಾ ಕ್ಷೇತ್ರದ 4559 ಕೋಟಿ ರೂಪಾಯಿಗಳ ವಿವಿಧ ಇಲಾಖೆಯ ಅಭೀವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ
WhatsApp Group Join Now
Telegram Group Join Now

ಇಂಡಿ: ಪಟ್ಟಣದ ಪೊಲೀಸ ಪರೇಡ ಮೈದಾನದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡ ಇಂಡಿ ವಿಧಾನಸಭಾ ಕ್ಷೇತ್ರದ ೪೫೫೯ ಕೋಟಿ ರೂಪಾಯಿಗಳ ವಿವಿಧ ಇಲಾಖೆಯ ಅಭೀವೃದ್ದಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಲೋಕಾರ್ಪಣೆ ಸಮಾರಂಭದಲ್ಲಿ ಕರ್ನಾಟಕ ನಿಂಬೆ ಅಭೀವೃದ್ದಿ ಮಂಡಳಿಯ ಲಾಂಛನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಟನ್ ಒತ್ತುವ ಮೂಲಕ ಡಿಜಿಟಲ್ ವೇದಿಕೆಯ ಬ್ಯಾನರ್ ಮೇಲೆ ಬಿಡುಗಡೆ ಮಾಡಿ ಅನಾವರಣ ಗೊಳಿಸುತ್ತಿದ್ದಂತೆ ಆಗಮಿಸಿದ ರೈತರು, ಅಭಿಮಾನಿಗಳು ಘೋಷಣೆ, ಜೈಕಾರವನ್ನು ಮೊಳಗಿಸುವ ಮೂಲಕ ಕೂಗಿ ಹರುಷ ವ್ಯಕ್ತ ಪಡಿಸಿದರು.

ಇದಕ್ಕೂ ಪೂರ್ವದಲ್ಲಿ ಜ್ಞಾನಯೋಗಿ ಶ್ರೀ ಸಿದ್ದೇಶ್ವರಸ್ವಾಮಿಜಿ ವಾಣಿಜ್ಯ ಸಂಕೀರಣ ಉದ್ಘಾನೆ ಮಾಡಿ ನಂತರ ಶಕ್ತಿ ಯೋಜನೆಯಡಿ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ರಾಜ್ಯದ ೫೦೦ ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿರುವ ಹಿನ್ನಲೆಯಲ್ಲಿ ಸಿಂಗರಿಸಿದ ಬಸ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂಡಿ ಬೇಂಗಳೂರ ಮಾರ್ಗದ ಕೆಎಸ್‌ಆರ್‌ಟಿಸಿ ವಿಜಯಪೂರ ವಿಭಾಗದ ಬಸ್‌ಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಗೈದು ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಟಿಕೆಟ್ ವಿರಿಸಿದರು.

ಬಾಕ್ಸ್: ಕಲ್ಯಾಣ ಕರ್ನಾಟಕ ಮಾದರಿಯಲ್ಲಿ ಹಿಂದುಳಿದ ಮುಂಬೈ ಕರ್ನಾಟಕದ ವಿಜಯಪುರಕ್ಕೂ ಮುಂಬರುವ ದಿನಗಳಲ್ಲಿ ವಿಜಯಪುರದಲ್ಲಿ ನಡೆಯಲಿರುವ ಕ್ಯಾಬಿನೆಟ್‌ನಲ್ಲಿ. ಪ್ರತೇಕ ಮಂಡಳಿ ರಚನೆ ಮಾಡಿ ಘೊಷಣೆ ಮಾಡುವ ಮೂಲಕ ಮತ್ತಷ್ಟು ಅಭಿವೃದ್ದಿಗೆ ಒತ್ತು ನೀಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಶಾಸಕ ಯಶವಂತರಾಗೌಡ ಪಾಟೀಲ ಅವರು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಉಪಮುಖ್ಯಂಂತ್ರಿ ಡಿ.ಕೆ.ಶಿವಕುಮಾರ, ಸಚಿವರಾದ ಎಮ್.ಬಿ.ಪಾಟೀಲ, ಶಿವಾನಂದ ಪಾಟೀಲ, ಎಚ್.ಕೆ.ಪಾಟೀಲ, ದಿನೇಶ ಗುಂಡುರಾವ, ಡಾ|| ಎಚ್.ಸಿ.ಮಹದೇವಪ್ಪ, ಶರಣಬಸಪ್ಪ ದರ್ಶನಾಪೂರ, ಡಾ|| ಶರಣ ಪ್ರಕಾಶ ಪಾಟೀಲಹಾಗೂ ಸಿಂಧನೂರ ಶಾಸಕ ಹಂಪನಗೌಡ ಬಾರ್ದಲಿ, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ಸಿಂದಗಿ ಶಾಸಕ ಅಶೋಕ ಮನಗೂಳಿ, ಅಫಜಲಪೂರ ಶಾಸಕ ಎಮ್.ವಾಯ್.ಪಾಟೀಲ, ವಿಪ ಸದಸ್ಯ ಸುನೀಲಗೌಡ ಪಾಟೀಲ, ಬಾಲವಿಕಾಸ ಆಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಮಾಜಿ ಶಾಸಕರಾದ ಮಕ್ಬುಲ ಬಾಗವಾನ, ಶರಣಪ್ಪ ಸೂಣಗಾರ, ರಾಜು ಆಲಗೂರ, ಹಾಗೂ ಕ್ಯಾಪ್ಟನ್.ಕೆ ರಾಜೇಂದ್ರ, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಜಿಲ್ಲಾ ಗ್ಯಾರೆಂಟಿ ಅನುಷ್ಟಾನ ಸಮಿತಿ ಅಧ್ಯಕ್ಷ ಇಲಿಯಾಸ ಬೋರಾಮಣಿ, ಪುರಸಭೆ ಅಧ್ಯಕ್ಷ ಲಿಂಬಾಜಿ ರಾಠೋಡ, ಕೆ.ಪಿ.ಮೋಹನರಾಜ್, ಜಿಲ್ಲಾಧಿಕಾರಿ ಡಾ|| ಆನಂದ ಕೆ, ವೇದಿಕೆ ಮೇಲಿದ್ದರು.

ಈ ಸಂದರ್ಭದಲ್ಲಿ ಜಿಪಂ ಸಿಇಒ ರಿಷಿ ಆನಂದ, ಎಸ್ಪಿ ಲಕ್ಷ್ಮಣ ನಿಂಬರಗಿ, ಉಪವಿಭಾಗಾಧಿಕಾರಿ ಅನುರಾಧ ವಸ್ತ್ರದ, ತಹಸಿಲ್ದಾರ ಬಿ.ಎಸ್.ಕಡಕಬಾವಿ, ತಾಪಂ ಇಓ ಡಾ|| ಭೀಮಾಶಂಕರ ಕನ್ನೂರ, ಪುರಸಭೆ ಮುಖ್ಯಾಧಿಕಾರಿ ಸಿದ್ದರಾಯ ಕಟ್ಟಮನಿ, ತೋಟಗಾರಿಕೆ ಅಧಿಕಾರಿ ಎಚ್.ಎಸ್.ಪಾಟೀಲ ಸೇರಿದಂತೆ ರಾಜ್ಯ, ಜಿಲ್ಲಾ ಹಾಗೂ ತಾಲೂಕಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಅನೇಕರಿದ್ದರು.
ಫೋಟೋ ೧೫ ಇಂಡಿ ೦೧: ೧)ಕರ್ನಾಟಕ ನಿಂಬೆ ಅಭೀವೃದ್ದಿ ಮಂಡಳಿಯ ಲಾಂಛನವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಟನ್ ಒತ್ತುವ ಮೂಲಕ ಡಿಜಿಟಲ್ ವೇದಿಕೆಯ ಬ್ಯಾನರ್ ಮೇಲೆ ಬಿಡುಗಡೆ ಮಾಡಿ ಅನಾವರಣ ಗೊಳಿಸಿದರು. ೨)ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂಡಿ ಬೇಂಗಳೂರ ಮಾರ್ಗದ ಕೆಎಸ್‌ಆರ್‌ಟಿಸಿ ವಿಜಯಪೂರ ವಿಭಾಗದ ಬಸ್‌ಗೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಗೈದು

 

WhatsApp Group Join Now
Telegram Group Join Now
Share This Article