ಡಿ 27ರಂದು ಶಬರಿ ಅಯ್ಯಪ್ಪಸ್ವಾಮಿ ದೇವಸ್ಥಾನದ 43ನೇ ವರ್ಷದ ಮಂಡಲ ಪೂಜೆ

A B
By A B
ಡಿ 27ರಂದು ಶಬರಿ ಅಯ್ಯಪ್ಪಸ್ವಾಮಿ ದೇವಸ್ಥಾನದ 43ನೇ ವರ್ಷದ ಮಂಡಲ ಪೂಜೆ
WhatsApp Group Join Now
Telegram Group Join Now
ಬಳ್ಳಾರಿ. ಡಿ. 25.: ನಗರದ ರಾಘವೇಂದ್ರ ಕಾಲೋನಿ ಎರಡನೇ ಹಂತದಲ್ಲಿರುವ ಶ್ರೀ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಸ್ಥಾನದ 43ನೇ ವರ್ಷದ ಮಂಡಲ ಪೂಜೆಯ ಕಾರ್ಯಕ್ರಮವನ್ನು ಇದೇ ಡಿಸೆಂಬರ್ 27 ಶನಿವಾರದಂದು ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಶಬರಿ ಅಯ್ಯಪ್ಪ ಟ್ರಸ್ಟ್ ಅಧ್ಯಕ್ಷರಾದ
ಜಯಪ್ರಕಾಶ್ ಜೆ ಗುಪ್ತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 ಈ ಕುರಿತು ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು ಆ ದಿನ ಮುಂಜಾನೆ 6 ಗಂಟೆಯಿಂದಲೇ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗುವವು, ಪ್ರಥಮವಾಗಿ ಮುಂಜಾನೆ ಆರು ಗಂಟೆಗೆ  ಧ್ವಜಾರೋಹಣ ಮತ್ತು 7:30ಕ್ಕೆ ಗಣ ಹೋಮ ನವಗ್ರಹ ಹೋಮ ಅಯ್ಯಪ್ಪ ಸ್ವಾಮಿ ಹೋಮ  8.30ಕ್ಕೆ ವಿಶೇಷ ಅಷ್ಟ ದ್ರವ್ಯ ಅಭಿಷೇಕ, 9:30ಕ್ಕೆ ಮಹಾ ಮಂಗಳಾರತಿ ಸೇರಿದಂತೆ ರಾತ್ರಿ ಒಂಬತ್ತು ಗಂಟೆಯವರೆಗೂ ವಿವಿಧ ಪೂಜೆಗಳು ಭಕ್ತಿಗೀತೆ ಗಾಯನ ಕಾರ್ಯಕ್ರಮ, ರಂಗಸ್ವಾಮಿ ಮತ್ತು ವೇಣು ತಂಡದಿಂದ ಭಜನ ಕಾರ್ಯಕ್ರಮ ನಡೆಯುವವು.
 ರಾತ್ರಿ 9 ಗಂಟೆಗೆ ಶಬರಿಮಲೈನ ಅಯ್ಯಪ್ಪ ದೇವಸ್ಥಾನದಲ್ಲಿ ನಡೆಯುವ ಪ್ರಕಾರವಾಗಿ ನಗರದ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿಯೂ ಸಹ  ವಿಶೇಷವಾಗಿ 18 ಮೆಟ್ಟಿಲುಗಳಿಗೆ ವಿಶೇಷವಾದ ಪಡಿಪೂಜೆ ಕಾರ್ಯಕ್ರಮವನ್ನು ಅಯ್ಯಪ್ಪ ಸ್ವಾಮಿಯ ನೂರಾರು ಭಕ್ತರ ಸಮ್ಮುಖದಲ್ಲಿ ನಡೆಸಲಾಗುವುದು ನಗರದ ಸಕಲ ಅಯ್ಯಪ್ಪ ಸ್ವಾಮಿ ಭಕ್ತರು ಹಾಗೂ ಅಯ್ಯಪ್ಪ ಮಾಲದಾರಿಗಳು ಸೇರಿದಂತೆ ಸಾರ್ವಜನಿಕರು ಆ ದಿನದ ಪೂಜಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ  ಭಾಗವಹಿಸಿ ದೇವಸ್ಥಾನದಲ್ಲಿ ನೀಡುವ ಪ್ರಸಾದವನ್ನು ಸ್ವೀಕರಿಸಿ
 ಅಯ್ಯಪ್ಪ ಸ್ವಾಮಿಯ ದರ್ಶನವನ್ನು ಪಡೆದು ಸ್ವಾಮಿಯ ಕೃಪೆಗೆ ಪಾತ್ರರಾಗಬೇಕೆಂದು ಕರೆ ನೀಡಿದರು.
WhatsApp Group Join Now
Telegram Group Join Now
Share This Article