ಸಿದ್ದಸಿರಿ ಸಹಕಾರಿ ಸೌಹಾರ್ಧ ಶೀಘ್ರದಲ್ಲಿ ದೇಶದಲ್ಲಿಯೇ ಒಂದನೆಯ ಸ್ಥಾನಕ್ಕೆ ಬರಲಿದೆ : ಬಸನಗೌಡ ಪಾಟೀಲ

MK HasiruKranti
ಸಿದ್ದಸಿರಿ ಸಹಕಾರಿ ಸೌಹಾರ್ಧ ಶೀಘ್ರದಲ್ಲಿ ದೇಶದಲ್ಲಿಯೇ ಒಂದನೆಯ ಸ್ಥಾನಕ್ಕೆ ಬರಲಿದೆ : ಬಸನಗೌಡ ಪಾಟೀಲ
WhatsApp Group Join Now
Telegram Group Join Now

ಇಂಡಿ: ಸಿದ್ದಸಿರಿ ಸಹಕಾರಿ ಸೌಹಾರ್ಧ ರಾಜ್ಯದಲ್ಲಿ ಸೌಹಾರ್ಧದಲ್ಲಿ ಒಂದನೆಯ ಸ್ಥಾನದಲ್ಲಿದ್ದು ದೇಶದಲ್ಲಿ ಹತ್ತನೆಯ ಸ್ಥಾನದಲ್ಲಿದೆ. ಮುಂದಿನ ಎರಡು ವರ್ಷಗಳಲ್ಲಿ ಸಿದ್ದಸಿರಿ ನಿಮ್ಮೆಲ್ಲರ ಸಹಕಾರದಿಂದ ದೇಶದಲ್ಲಿಯೇ ಒಂದನೆಯ ಸ್ಥಾನಕ್ಕೆ ಬರಲಿದೆ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಹೇಳಿದರು.
ತಾಲೂಕಿನ ನಾದ ಗ್ರಾಮದಲ್ಲಿ ಸಿದ್ದಸಿರಿ ಸೌಹಾರ್ಧ ನೂತನ ಸಹಕಾರಿ ಸೌಹಾರ್ಧ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಸಾಲೋಟಗಿಯ ಜ್ಞಾನ ಯೋಗಾಶ್ರಮ ಶ್ರೀ ಸಿದ್ದೇಶ್ವರ ಗುರುದೇವಾಶ್ರಮದ ಸಂಗಮೇಶ್ವರ ಶ್ರೀಗಳು ಮಾತನಾಡಿ ಇಂಡಿ ತಾಲೂಕಿನಲ್ಲಿ ಸಿದ್ದಸಿರಿ ಸಂಸ್ಥೆಯ ೧೫ ಶಾಖೆಗಳನ್ನು ಹೊಂದಿದ್ದು ನಾದ ತಾಂಬಾ ನೂತನ ಕಟ್ಟಡ ಸೇರಿ ೮ ಶಾಖೆಗಳಿಗೆ ಸ್ವಂತ ಕಟ್ಟಡಗಳಿವೆ. ರಾಜ್ಯಾದ್ಯಂತ ೨೧೨ ಶಾಖೆಗಳನ್ನು ಹೊಂದಿದ್ದು ೫ ಸಾವಿರ ಯುವಕರಿಗೆ ಉದ್ಯೋಗ ನೀಡಲಾಗಿದ್ದು ಹೆಮ್ಮೆಯ ವಿಷಯ ಎಂದರು.
ನಾದ ಕೆಡಿ ಸಂಸ್ಥಾನ ಮಠದ ಶಿವಾನಂದ ಶಿವಾಚಾರ್ಯರರು, ಗೋಳಸಾರದ ಅಭಿನವ ಪುಂಡಲಿಂಗ ಶಿವಯೋಗಿಗಳು ಪ್ರಭುಗೌಡ ದೇಸಾಯಿ, ನಂದಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಉಪ್ಪಾರ ಮಾತನಾಡಿದರು
ದಯಾಸಾಗರ ಪಾಟೀಲ, ಗ್ರಾ.ಪಂ ಅಧ್ಯಕ್ಷ ಸಿದರಾಯ ಐರೋಡಗಿ, ಮಲ್ಲನಗೌಡ ಪಾಟೀಲ ಗೋಳಸಾರ, ಹಣಮಂತರಾಯಗೌಡ ಪಾಟೀಲ ಶಿರಶ್ಯಾಡ, ಬಸವರಾಜ ಅಂಕದ, ಬಸವರಾಜ ಬಿರಾದಾರ, ಅನೀಲ ಅಳ್ಳಗಿ, ಸಿದ್ರಾಮಗೌಡ ಬಿರಾದಾರ, ಶ್ರೀಮಂತ ಕಸ್ಕಿ ಚಂದ್ರಶೇಖರ ತೆಗ್ಗೆಳ್ಳಿ, ಸಂಗನಬಸಪ್ಪ ಸಜ್ಜನ, ಶಿವಾನಂದ ಅಣ್ಣೆಪ್ಪನವರ, ನಾಗರಾಳ ಹುಲಿ ಬಸನಗೌಡ ಪಾಟೀಲ ಮತ್ತಿತರಿದ್ದರು.

WhatsApp Group Join Now
Telegram Group Join Now
Share This Article