ರಾಯಬಾಗ: ಪ್ರತಿಯೂಬ್ಬ ವಿದ್ಯಾರ್ಥಿಯಲ್ಲಿ ಅಡುಗಿರುವ ಕೌಶಲ್ಯ, ಕಲೆಯನ್ನು ಸೂಕ್ತ ಸಮಯಕ್ಕೆ ಬಳಕೆಯಾದಾಗ ಮಾತ್ರ ಜೀವನದಲ್ಲಿ ಬದಲಾವಣೆಯ ಹಂತವನ್ನು ಕಾಣುತ್ತೇವೆ ಎಂದು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ರಸಾಯನಶಾಸ್ತ್ರದ ಮುಖ್ಯಸ್ಥ ಅನಂತ ಅಥಣಿ ಹೇಳಿದರು.
ಶುಕ್ರವಾರ ರಾಯಬಾಗ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಅಂತಿಮ ವ?ದ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿರುವ ಈ ತಾಂತ್ರಿಕ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆದುಕೊಂಡು ಉನ್ನತ ಸಾಧನೆ ಮಾಡಬೇಕೆಂದರು.
ಕಾಲೇಜ್ ಆಡಳಿತ ಮಂಡಳಿ ನಿರ್ದೇಶಿಕ ಎಸ್.ಆರ್.ನೇರ್ಲಿಕರ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತಾಂತ್ರಿಕ ಶಿಕ್ಷಣ ದೊರಕಬೇಕೆಂಬ ಉದ್ದೇಶದಿಂದ ೧೯೮೪ರಲ್ಲಿ ಶಿಕ್ಷಣ ಪ್ರೇಮಿ ವಸಂತರಾವ ಪಾಟೀಲರವರು ಈ ಕಾಲೇಜ ಪ್ರಾರಂಭಿಸಿ ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ಜ್ಞಾನದ ಬೆಳಕನ್ನು ಪಡೆದುಕೊಂಡು ತಮ್ಮ ವೃತ್ತಿ ಜೀವನವನ್ನು ಸುಧಾರಿಸಿಕೊಳ್ಳಬೇಕೆಂದರು.
ರೇಣುಕಾ ಶುಗರ್ಸ ಜನರಲ್ ಮ್ಯಾನೇಜರ್ ಸಂಗಮನಾಥ ಜಮಾದಾರ, ಎ.ಜಿ.ಎಮ್.ಎಚ್.ಆರ್. ಸಂಜಯ ಕಿಲ್ಲೇದಾರ, ಕೇನ್ ಮ್ಯಾನೇಜರ್ ವಿರೂಪಾಕ್ಷ ಕರಲಿಂಗನ್ನವರ, ಪ್ರಾಚಾರ್ಯ ಬಿ.ಎಸ್.ದಡ್ಡಿ, ಸಾಂಸ್ಕೃತಿಕ ಅಧ್ಯಕ್ಷ ಮಲ್ಲಿಕಾರ್ಜುನ ಜೇಡರ ಹಾಗೂ ಕಾಲೇಜ್ ಉಪನ್ಯಾಸಕರು ಮತ್ತು ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.
ಉಪನ್ಯಾಸಕ ರಾಜನ ಅನ್ವೇಕರ ಸ್ವಾಗತಿಸಿದರು, ಉಪನ್ಯಾಸಕ ಚಂದ್ರಕಾಂತ ಒಡೆಯರ ನಿರೂಪಿಸಿದರು.
ಕೌಶಲ್ಯ, ಕಲೆಯನ್ನು ಸೂಕ್ತ ಸಮಯಕ್ಕೆ ಬಳಕೆಯಾದಾಗ ಮಾತ್ರ ಜೀವನದಲ್ಲಿ ಬದಲಾವಣೆಯ ಹಂತವನ್ನು ಕಾಣುತ್ತೇವೆ:ಅಥಣಿ


