ಸಂಕೇಶ್ವರ : ಪಟ್ಟಣದ ಗೌತಮ ಕನ್ನಡ ಮಾಧ್ಯಮ ಶಾಲೆಯಲ್ಲಿ ಡಾ! ಬಾಬಾಸಾಹೇಬ್ ಅಂಬೇಡ್ಕರ್ ಅವರ 135 ನೇ ಜಯಂತಿಯ ನಿಮಿತ್ತವಾಗಿ ಡಾ.ಬಿ.ಆರ್. ಅಂಬೇಡ್ಕರ್ ವೃತ ಭೀಮ ನಗರ ಸಂಕೇಶ್ವರ ಹಾಗೂ ಶ್ರೀಮತಿ ಗೋದಾಬಾಯಿ ಗೋವಿಂದ ಕರನಿಂಗ ಮೆಮೊರಿಯಲ್ ಫೌಂಡೇಷನ್ ವತಿಯಿಂದ ಡಾ.ಬಿ.ಆರ್. ಅಂಬೇಡ್ಕರ್ ಅವರ ಕುರಿತು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಪಟ್ಟಣದ ಭೀಮನಗರದಲ್ಲಿನ ಗೌತಮ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗೆ ಡಾ! ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಾಲ್ಯ ಹಾಗೂ ಶಿಕ್ಷಣ, ಪ್ರೌಢ ವಿಭಾಗ ವಿದ್ಯಾರ್ಥಿಗಳಿಗೆ ಡಾ! ಬಿ.ಆರ್ ಅಂಬೇಡ್ಕರ್ ಅವರ ಜೀವನ ಚರಿತ್ರೆ ಮತ್ತು ಭಾರತದ ಸಂವಿಧಾನದ ಕುರಿತು ವಿದ್ಯಾರ್ಥಿಗಳಿಗೆ ಪ್ರಮುಖ ಪ್ರಬಂಧದ ವಿಷಯಗಳಾಗಿದವು.
ಪ್ರಬಂಧ ಸ್ಪರ್ಧೆಯಲ್ಲಿ ಹುಕ್ಕೇರಿ ತಾಲೂಕು ಸೇರಿದಂತೆ ಗಳತಗಾ, ಬೋರಗಾವ್, ಚಿಕ್ಕೋಡಿ, ಹಾರೋಗೇರಿ, ನಂದಗಡ ಖಾನಾಪೂರದ ಕರಿಕಟ್ಟಿ ಗ್ರಾಮದಿಂದ ಹಾಗೂ ಗಡಹಿಂಗ್ಲಜ್ ತಾಲೂಕಿನ ಹಿಟ್ನಿ ಗ್ರಾಮದಿಂದ ಅನೇಕ ಕಡೆಯಿಂದ ಕನ್ನಡ, ಮರಾಠಿ, ಇಂಗ್ಲಿಷ್ ವಿಭಾಗದ ಪ್ರಾಥಮಿಕ ಹಾಗೂ ಪ್ರೌಡ ಶಾಲೆಯ ಒಟ್ಟು 277 ವಿದ್ಯಾರ್ಥಿಗಳು ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದರು.
ಶ್ರೀಮತಿ ಗೋದಾಬಾಯಿ ಗೋವಿಂದ ಕರನಿಂಗ ಮೆಮೊರಿಯಲ್ ಫೌಂಡೇಷನ್ ಮಾರ್ಗದರ್ಶಕರಾದ ನವೀನ ಗಂಗರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಅಂಬೇಡ್ಕರರ ಜೀವನ ಚರಿತ್ರೆ ಹಾಗೂ ಹೋರಾಟ ಬಗ್ಗೆ ಅರಿತುಕೊಳ್ಳಬೇಕು ಎನ್ನುವ ಉದ್ದೇಶದಿಂದ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದರು.
ದಲಿತ ಮುಖಂಡರಾದ ವಿನಾಯಕ ಮಳನಾಯಿಕ ಮಾತನಾಡಿ, ಭಾರತರತ್ನ, ಬಾಬಾಸಾಹೇಬ್ ಅಂಬೇಡ್ಕರ್ ಅವರ ಚಿಂತನೆ ಮತ್ತು ಬೋಧನೆಯ
ವಿಶೇಷವಾಗಿ ವಿದ್ಯಾರ್ಥಿ-ಯುವಜನರಿಗೆ ತಲುಪಿಸುವುದಕ್ಕೆ ಕಳೆದ 5 ವರ್ಷಗಳಿಂದ ಶ್ರೀಮತಿ ಗೋದಾಬಾಯಿ ಗೋವಿಂದ ಕರನಿಂಗ ಮೆಮೊರಿಯಲ್ ಫೌಂಡೇಷನ್ ಅವರ ಆಶ್ರಯದಲ್ಲಿ ಈ ಕಾರ್ಯಕ್ರಮ ಜರುಗುತ್ತಿದೆ ಎಂದರು.
ಬರುವ ದಿ.12 ರಂದು ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭ ನಡೆಯಲಿದ್ದು, ಅಂದು ಗೋದಾಬಾಯಿ ಗೋವಿಂದ ಕರನಿಂಗ ಮೆಮೊರಿಯಲ್ ಫೌಂಡೇಷನ್ ವತಿಯಿಂದ ನಗದು ಬಹುಮಾನ ಹಾಗೂ ಮೊಮೆಂಟೋ ವಿತರಿಸಲಾಗುವುದು.
ಪ್ರಬಂಧ ಸ್ಪರ್ಧೆಯಲ್ಲಿ ಆಯ್ಕೆಯಾದ ಕನ್ನಡ, ಮರಾಠಿ, ಇಂಗ್ಲಿಷ್ ಭಾಷೆಯಲ್ಲಿ ಬರೆದಿರುವ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಪ್ರಥಮ ಬಹುಮಾನ ರೂ. 3001, ದ್ವಿತೀಯ ಬಹುಮಾನ ರೂ. 2001, ತೃತೀಯ ಬಹುಮಾನ ರೂ.1001 ಹಾಗೂ ಪ್ರಮಾಣ ಪತ್ರ ವಿತರಿಸಲಾಗುವುದು ಎಂದರು.
ಈ ಸಂಧರ್ಭದಲ್ಲಿ ಶ್ರೀಮತಿ ಗೋದಾಬಾಯಿ ಗೋವಿಂದ ಕರನಿಂಗ ಮೆಮೊರಿಯಲ್ ಫೌಂಡೇಷನ್ ಉಪಾಧ್ಯಕ್ಷೆ ತಾರಾ ಕರನಿಂಗ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಚಿಕ್ಕೋಡಿ, ಜಿಲ್ಲಾ ಕಾರ್ಯದರ್ಶಿಗಳಾದ ನಾಗರಾಜ ಕರನಿಂಗ, ಶಂಕರ ಕರನಿಂಗ, ಪ್ರವೀಣ ಕರನಿಂಗ, ಅಮೀತ ಮಾಳಗೆ, ಅಪ್ಪಾಸಾಹೇಬ್ ದೊಡ್ಡಲಿಂಗ, ರಾಘವೇಂದ್ರ ಜಯಕರ, ಬಸವಂತ ಸತ್ಯನಾಯಿಕ, ಸುನೀಲ ಖಾತೆದಾರ ಸೇರಿದಂತೆ ಅನೇಕರು ಹಾಜರಿದ್ದರು.


