ಯತ್ನಾಳ ಅವರನ್ನು ಮತ್ತೇ ಬಿಜೆಪಿ ಪಕ್ಷಕ್ಕೆ ಮರಳಿ ಕರೆ ತರಲಾಗುವುದು : ರಮೇಶ ಜಾರಕಿಹೊಳಿ

Pratibha Boi
ಯತ್ನಾಳ ಅವರನ್ನು ಮತ್ತೇ ಬಿಜೆಪಿ ಪಕ್ಷಕ್ಕೆ ಮರಳಿ ಕರೆ ತರಲಾಗುವುದು : ರಮೇಶ ಜಾರಕಿಹೊಳಿ
WhatsApp Group Join Now
Telegram Group Join Now

ರಾಮದುರ್ಗ: ಮಾಜಿ ಕೇಂದ್ರ ಸಚಿವ ಹಾಗೂ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಮತ್ತೇ ಬಿಜೆಪಿ ಪಕ್ಷಕ್ಕೆ ಮರಳಿ ಕರೆ ತರುವದಾಗಿ ಮಾಜಿ ಸಚಿವ ಹಾಗೂ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ಪಟ್ಟಣದ ಹೊರವಲಯದಲ್ಲಿರುವ ನಟರಾಜ ಸಭಾ ಭವನದಲ್ಲಿ ಶನಿವಾರ ಹಮ್ಮಿಕೊಂಡ ಬಿಜೆಪಿ ರಾಮದುರ್ಗ ಮಂಡಲದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಹಾಗೂ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅವರು ಮಾತನಾಡಿದರು.
ಮುಂದಿನ ದಿನಗಳಲ್ಲಿ ಎಲ್ಲ ಭಿನ್ನಾಭಿಪ್ರಾಯಗಳನ್ನು ದೂರಮಾಡಿ ಕೆಳ ಹಂತದಿಂದ ಪಕ್ಷವನ್ನು ಕಟ್ಟಿ ನಮ್ಮೆಲ್ಲ ನಾಯಕರನ್ನು ಒಟ್ಟುಗೂಡಿಸಿ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಕೆಲಸ ಮಾಡುವದಾಗಿ ಹೇಳಿದರು.
ಏ. ೯ ರಂದು ದಾವಣಗೆರೆ ಮತ್ತು ಬಾಗಲಕೋಟೆಯಲ್ಲಿ ಉಪಚುನಾವಣೆ ನಡೆಯಲ್ಲಿದ್ದು ಎರಡೂ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ. ನಾನೂ ಕೂಡ ನಾಳೆ ದಾವಣಗೆರೆಗೆ ನಾಡಿದ್ದು ಬಾಗಲಕೋಟೆಗೆ ಪ್ರಚಾರ ಕಾರ್ಯಕ್ಕಾಗಿ ಹೋಗುತ್ತಿದ್ದೇನೆ ಎಂದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಪಕ್ಷಕ್ಕೆ ಮರಳಿ ಬಂದರೆ ನಾವು ಸ್ವಾಗತಿಸುತ್ತೇವೆ. ಯತ್ನಾಳ ಅವರು ಉಚ್ಛಾಟಿತರಾದ ಮರುದಿನದಿಂದಲೇ ನಾನು ಅವರನ್ನು ಬಿಜೆಪಿ ಪಕ್ಷಕ್ಕೆ ಮರಳಿ ಕರೆ ತರುವ ಪ್ರಯತ್ನ ಮಾಡುತ್ತಿದ್ದೇನೆ. ಕೊನೆಯಲ್ಲಿ ನಮ್ಮ ಪಕ್ಷದ ಹೈ ಕಮಾಂಡ್ ಏನು ತಿರ್ಮಾನ ತೆಗೆದು ತೆಗೆದುಕೊಳ್ಳುತ್ತದೆ ನೋಡೋಣ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ಮಂಡಲದ ಅಧ್ಯಕ್ಷ ಡಾ| ಕೆ.ವಿ. ಪಾಟೀಲ ಮಾತನಾಡಿ, ನೂತನವಾಗಿ ಜವಾಬ್ದಾರಿ ವಹಿಸಿಕೊಂಡಿರುವ ಎಲ್ಲಾ ಪದಾಧಿಕಾರಿಗಳು ಪಕ್ಷ ಸಂಘಟನೆಗೆ ಮುಂದಾಗಬೇಕು. ಅಧಿಕಾರ ಅನ್ನೋದು ಕೇವಲ ಒಂದು ಸ್ಥಾನವಲ್ಲ, ಅದೊಂದು ದೊಡ್ಡ ಜವಾಬ್ದಾರಿ ಅನ್ನೋದನ್ನು ನೀವು ಮರೆಯಬಾರದು. ಸುಮ್ಮನೆ ಪದವಿ ಸಿಕ್ಕಿತು ಅಂತ ಮನೆಯಲ್ಲಿ ಕೂರದೇ, ಹಳ್ಳಿ-ಹಳ್ಳಿಗಳಿಗೆ ಹೋಗಿ ಜನರ ಸಮಸ್ಯೆಗಳನ್ನು ಆಲಿಸುವ ಪರಿಹಾರದ ಜೊತೆಗೆ ಪಕ್ಷ ಸಂಘಟನೆ ಮಾಡಬೇಕು. ಮುಂಬರುವ ಎಲ್ಲ ಸ್ಥಳೀಯ ಚುನಾವಣೆಗಳಲ್ಲಿ ಪಕ್ಷದ ಗೆಲವಿಗೆ ಶ್ರಮಿಸಲು ಶ್ರಮಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಬಿ.ಎಸ್. ಬೆಳವಣಕಿ ಹಾಗೂ ಮುಖಂಡ ಸಿ.ಬಿ. ಪಾಟೀಲ ನೂತನ ಪದಾಧಿಕಾರಿಗಳಿಗೆ ನಿಯುಕ್ತ ಪತ್ರ ವಿತರಿಸಿದರು. ವೇದಿಕೆಯಲ್ಲಿ ಮಾಜಿ ಜಿ.ಪಂ ಅಧ್ಯಕ್ಷೆ ಮಹಾದೇವಿ ರೊಟ್ಟಿ, ಮುಖಂಡರಾದ ದ್ಯಾವಪ್ಪ ಬೆಳವಡಿ, ಪಿ.ಎಫ್. ಪಾಟೀಲ, ಕಲ್ಲಣ್ಣ ವಜ್ರಮಟ್ಟಿ, ಜನಕರಡ್ಡಿ ಹಕಾಟಿ, ಬಸವರಾಜ ಸೋಮಗೊಂಡ, ತೌಕೀರ ಖತೀಬ್, ಈರನಗೌಡ ಹೊಸಗೌಡ್ರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸಿದ್ದು ಗುಡೆನ್ನವರ ಸ್ವಾಗತಿಸಿದರು. ಗಂಗಾಧರ ಬೋಸಲೆ ನಿರುಫಿಸಿ, ವಂದಿಸಿದರು.

WhatsApp Group Join Now
Telegram Group Join Now
Share This Article