ರಾಮದುರ್ಗ: ತುರನೂರ ಸಮೀಪದ ಜ್ಞಾನ ಪ್ರಬೋಧಿನಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಸ್ಕೌಟ್ಸ್ ಮತ್ತು ಗೈಡ್ಸ್ನ ರಾಜ್ಯ ಪುರಸ್ಕಾರ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ವಿವಿಧ ಕೌಶಲ್ಯ ಪರೀಕ್ಷೆಗಳು, ಸಮುದಾಯ ಸೇವೆ ಮತ್ತು ರಾಜ್ಯ ಮಟ್ಟದ ಶಿಬಿರದಲ್ಲಿ ಭಾಗವಹಿಸಿದವರಿಗೆ ರಾಜ್ಯಪಾಲರಿಂದ ನೀಡಲ್ಪಡುವ ತಿಷ್ಠಿತ ಪ್ರಶಸ್ತಿಯಾಗಿದ್ದು, ಭಾರತ ಸ್ಕೌಟ್ಸ್ ಗೈಡ್ಸ್ ಮತ್ತು ಕರ್ನಾಟಕ ರಾಜ್ಯ ಸಂಸ್ಥೆಯಿಂದ ಇತ್ತಿಚೆಗೆ ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಕೊಂಡಜ್ಜಿಯಲ್ಲಿ ನಡೆದ ತರಭೇತಿಯಲ್ಲಿ ಪಾಲ್ಗೊಂಡು, ೨೦೨೪-೨೫ ನೇ ಸಾಲಿನಲ್ಲಿ ರಾಜ್ಯ ಪ್ರತಿಭಾ ಪುರಸ್ಕಾರ ಅಂತಿಮ ಪರೀಕ್ಷೆಯಲ್ಲಿ ಒಟ್ಟು ೯ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದು ರಾಜ್ಯ ಮಟ್ಟದ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ.
ವಿಪ್ರ ವಿದ್ಯಾಸಂಸ್ಥೆಯ ತುರನೂರ ಶ್ರೀಮತಿ ರುಕ್ಮಿಣಿಬಾಯಿ ಲ. ಮಾಳದಕರ ಜ್ಞಾನ ಪ್ರಬೋಧಿನಿ ವಿದ್ಯಾಲಯದ ಸ್ಕೌಟ್ಸ್ ವಿದ್ಯಾರ್ಥಿಗಳಾದ ಬೈಲಪ್ಪ ತುಡಬಿನ, ಮೈಲಾರ ಮನಿಹಾಳ, ಅಜಯ ಮೂಗನೂರ, ಪ್ರಕಾಶ ಕಲ್ಲೇಶನವರ, ಅಭಿಷೇಕ, ಮಿಠ್ಠಲ ಮಾದರ, ಗೈಡ್ಸ್ ವಿದ್ಯಾರ್ಥಿಗಳಾದ ರಕ್ಷಿತಾ ಮಾದರ, ಭೀಮವ್ವ ಹುಚಕೆಂಚನವರ, ಭೂಮಿಕಾ ಕಂಠಿ ಅವರುಗಳು ಪ್ರಶಸ್ತಿ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸ್ಕೌಟ್ಸ್ ಶಿಕ್ಷಕ ಎಸ್.ಪಿ. ರಾಠೋಡ, ಗೈಡ್ಸ ಶಿಕ್ಷಕಿ ಎಸ್.ಎಸ್. ಬಡಿಗೇರ ಮಾರ್ಗದರ್ಶನ ನೀಡಿದ್ದರು. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಪಿ.ಎಂ. ಆಪ್ಟೆ, ಗೌರವಾಧ್ಯಕ್ಷ ವಿ.ಎನ್. ಗೋಡಿಖಿಂಡಿ ಸೇರಿದಂತೆ ಆಡಳಿತ ಮಂಡಳಿಯ ಪದಾಧಿಕಾರಿಗಳು, ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಜ್ಞಾನ ಪ್ರಬೋಧಿನಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಸ್ಕೌಟ್ಸ್ ಮತ್ತು ಗೈಡ್ಸ್ನ ರಾಜ್ಯ ಪುರಸ್ಕಾರ ಪ್ರಶಸ್ತಿಗೆ ಆಯ್ಕೆ


