ಹೊಸಪೇಟೆ : ನಗರದಲ್ಲಿ ಗುಡ್ ಫ್ರೈಡೆ ನಿಮಿತ್ತ ಇಂದು ಕ್ರೈಸ್ತ ಭಕ್ತಾದಿ ಗಳುನಗರದ ಎಲ್ಲಾ ಚರ್ಚ್ ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಕ್ರಿಸ್ತನು ಶಿಲುಬೆಯ ಮೇಲೆ ಪ್ರಾಣ ತೆತ್ತ ವೃಂತ್ತಾತ ವನ್ನು ಕೇಳಿ ಮರುಗಿದರು. ಮದ್ಯಾನ ಸುಡು ಬಿಸಿಲಿನಲ್ಲಿ ಕ್ಯಾಥೋಲಿಕ್ ಚರ್ಚ್ ನಲ್ಲಿ, ಭಕ್ತರು ಯೇಸುವನ್ನು
ಶಿಲುಬೆಗೆ ಏರಿಸುವಾಗ ಘಟನೆ ನಡೆದ 14 ಸ್ಥಳಗಳನ್ನು ನೆನೆಯುತ್ತ ಕಣ್ಣೀರು ಪ್ರಾರ್ಥನೆ ಸಲ್ಲಿಸಿದರು. ನಂತರ ನಡೆದ ಪೂಜಾ ವಿಧಾನ ದಲ್ಲಿ ಬೋಧಸಿದ ಪಾ. ಫ್ರಾನ್ಸಿಸ್ ಚಿನ್ನಪ್ಪ ಯೇಸು ಕ್ರಿಸ್ತ ಸತ್ತು ಪುರುತ್ತಾನ ಆಗದಿದ್ದರೆ, ಇಂದು ಯಾರೂ ಕ್ರಿಸ್ತನಲ್ಲಿ ನಂಬಿಕೆ ಇಡುತ್ತಿರಲಿಲ್ಲ. ಆದ್ದರಿಂದ ಮಾನವ ನಾಗಿ ಹುಟ್ಟಿ ಮತ್ತೊಮ್ಮೆ ಜೀವಂತ ವಾಗಿ ಪುನರುತ್ತಾನ ವಾಗಿ ಬಂದಿದ್ದು ಯೇಸು ಮಾತ್ರ, ನಾವು ಕೂಡಾ ಅವರಂತೆ ಪುರುತ್ತನರಾಗಿ ಬರಲು, ಅವರ ಮಾರ್ಗ ವನ್ನು ಅನುಸರಿಸೋಣ ಎಂದು ಪ್ರಬೋದಿಸಿದರು. ಈ ಪೂಜಾ ವಿಧಾನದಲ್ಲಿ ಫಾ. ಮೈಕಲ್, ಫಾ. ಅಂಥೋನಿ ಪಾಲ್ಗೊಂಡಿದ್ದರು. ಫಾ. ಭಗhವಂಥರಾಜ್ ಅವರ ಮಾರ್ಗದರ್ಶನ ದಲ್ಲಿ ಪ್ರಾರ್ಥನಾ ವಿಧಿ ಗಳು ನಡೆದವು.


