ರಾಯಬಾಗ: ತಾಲೂಕಿನ ಸುಕ್ಷೇತ್ರ ಭೆಂಡವಾಡ (ಗುಡ್ಡದ) ಗ್ರಾಮದ ರೇವಣಸಿದ್ದೇಶ್ವರ ವಿರಕ್ತಮಠ ಜಾತ್ರಾ ಮಹೋತ್ಸವವು ಎ.1 ರಿಂದ 3 ರವರೆಗೆ ಜರುಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಬೇಕೆಂದು ವಿರಕ್ತಮಠದ ಗುರುಸಿದ್ದ ಸ್ವಾಮೀಜಿ ಹೇಳಿದರು.
ಶುಕ್ರವಾರ ಸಾಯಂಕಾಲ ತಾಲೂಕಿನ ಭೆಂಡವಾಡ ಗ್ರಾಮದ ರೇವಣಸಿದ್ದೇಶ್ವರ ವಿರಕ್ತಮಠದಲ್ಲಿ ಜಾತ್ರೆ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ಎ.1 ರಂದು ಗ್ರಾಮದಿಂದ ರೇವಣಸಿದ್ದೇಶ್ವರ ಉತ್ಸವ ಮೂರ್ತಿಯು ಗುಡ್ಡದ ಶ್ರೀ ಮಠದ ಕ್ಷೇತ್ರಕ್ಕೆ ಆಗಮಿಸುವುದು.
ಎ.2 ರಂದು ಮುಂ.6 ಗಂಟೆಗೆ ಕತೃ ಗದ್ದುಗೆಗೆ ರುದ್ರಾಭಿಷೇಕ, ಮುಂ.8 ಗಂಟೆಗೆ ಲಿಂಗದೀಕ್ಷೆ ಮತ್ತು ಅಯ್ಯಾಚಾರವು ಘಟಪ್ರಭಾ ಹೊಸಮಠದ ವಿರೂಪಾಕ್ಷ ಸ್ವಾಮೀಜಿಯವರಿಂದ ನೆರವೇರುವುದು, ಮಧ್ಯಾಹ್ನ 12 ಗಂಟೆಗೆ ಭಕ್ತರಿಂದ ನೈವೇದ್ಯ ಸಮರ್ಪಣೆ.
ಸಾಯಂಕಾಲ 5 ಗಂಟೆಗೆ ಧಾರ್ಮಿಕ ಶಿವಾನುಭವ ಕಾರ್ಯಕ್ರಮದ ಸಾನಿಧ್ಯವನ್ನು ಬೆಲ್ಲದ ಬಾಗೇವಾಡಿ ಮಹಾಂತೇಶ್ವರ ವಿರಕ್ತಮಠದ ಶಿವಾನಂದ ಸ್ವಾಮೀಜಿ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಗುರುಸಿದ್ದ ಸ್ವಾಮೀಜಿ ವಹಿಸಲಿದ್ದಾರೆ, ಉದ್ಘಾಟಕರಾಗಿ ಪಿ.ಎಲ್.ಡಿ ಬ್ಯಾಂಕ ಅಧ್ಯಕ್ಷ ಪ್ರತಾಪರಾವ ಪಾಟೀಲ ಆಗಮಿಸಲಿದ್ದಾರೆ. ಹಿಪ್ಪರಗಿ ಸಂಗಮೇಶ್ವರ ಮಠದ ಪ್ರಭು ಮಹಾರಾಜರು, ಕಟಕಭಾವಿಯ ಅಭಿನವ ದರಿದೇವರು ಸ್ವಾಮೀಜಿ, ಚಿಕ್ಕೋಡಿ ಸಂಸದೆ ಪ್ರಿಯಾಂಕ ಜಾರಕಿಹೊಳಿ, ಶಾಸಕರಾದ ಡಿ.ಎಮ್.ಐಹೊಳೆ, ಮಹೇಶ ತಮ್ಮಣ್ಣವರ, ಉದ್ಯಮಿ ಮಹೇಶ ಬೆಲ್ಲದ, ಅಶೋಕ ದಳವಾಯಿ, ಅರುಣ ದಳವಾಯಿ, ಅನೀಲ ದಳವಾಯಿ, ವಿ.ಎಸ್.ಪೂಜಾರಿ ಆಗಮಿಸಲಿದ್ದಾರೆ. ಬೆಳವಿ ಸಿದ್ದಾರೂಢ ಮಠದ ಮೃತ್ಯುಂಜಯ ಸ್ವಾಮೀಜಿ, ಇಟ್ನಾಳದ ಸಿದ್ದೇಶ್ವರ ಸ್ವಾಮೀಜಿ, ಕಂಕಣವಾಡಿಯ ಮಾರುತಿ ಶರಣರು ಪ್ರವಚನ ನೀಡಲಿದ್ದಾರೆ. ನಂತರ ವಿರಕ್ತಮಠದ ರೇವಣಸಿದ್ದೇಶ್ವರ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆ ಹಾಗೂ ವಸತಿ ಶಾಲೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ, ರಾತ್ರಿ 9 ಗಂಟೆಗೆ ಕರಡಿ ಮಜಲು, ಖಣಿವಾದನ ಹಾಗೂ ಡೊಳ್ಳಿನ ಪದಗಳು ನಡೆಯಲಿವೆ.
ಎ.3 ರಂದು ಮುಂ.7 ಗಂಟೆಗೆ ಪಲ್ಲಕ್ಕಿಗಳು ರೇವಣಸಿದ್ದೇಶ್ವರ ಗಿರಿ (ಗುಡ್ಡ) ಏರುವುದು, ಗಿರಿಯ ಮೇಲೆ ಸಕ್ಕರೆ ನೈವೇದ್ಯ ಸಮರ್ಪಣೆ, ಮಧ್ಯಾಹ್ನ ಮಹಾಪ್ರಸಾದ, ಸಂಜೆ 5 ಗಂಟೆಗೆ ಜಂಗಿ ನಿಕಾಲಿ ಕುಸ್ತಿ ನಡೆಯಲಿವೆ ಎಂದು ಶ್ರೀಗಳು ತಿಳಿಸಿದರು.
ಪರಶುರಾಮ ಪಿಡಾಯಿ, ಪ್ರವೀಣ ಹಂಜೆ, ಮಂಜು ಪೂಜಾರಿ, ಸಂಜು ಪೂಜಾರಿ, ಆನಂದ ಪೂಜಾರಿ, ಸಿದ್ದು ಪೂಜಾರಿ, ಅಣ್ಣಪ್ಪ ವಡ್ಡರ, ರೂಪೇಶ ಪೂಜಾರಿ, ರವಿ ಪೂಜಾರಿ, ಸಾಗರ ಪೂಜಾರಿ, ಸಂಗಪ್ಪ ಬೆನ್ನಾಳೆ, ರೇವಣು ದುಪದಾಳೆ, ರೇವಪ್ಪ ಪದ್ದಿ, ಅಪ್ಪು ಬಾನೆ, ಸುರೇಶ ಚೌಗಲಾ
ಇದ್ದರು.


