ಮೂರು ಮಕ್ಕಳೊಂದಿಗೆ ಬಾವಿಗೆ ಜಿಗಿದು ಮಹಿಳೆ ಆತ್ಮ ಹತ್ಯ

Pratibha Boi
ಮೂರು ಮಕ್ಕಳೊಂದಿಗೆ ಬಾವಿಗೆ ಜಿಗಿದು  ಮಹಿಳೆ ಆತ್ಮ ಹತ್ಯ
WhatsApp Group Join Now
Telegram Group Join Now

ಇಂಡಿ: ಜೀವನದಲ್ಲಿ ಜಿಗುಪ್ಸೆಗೊಂಡ ಮಹಿಳೆಯೊಬ್ಬಳು ತನ್ನ ಮೂರು ಮಕ್ಕಳೊಂದಿಗೆ ಬಾವಿಯಲ್ಲಿ ಜಿಗಿದು ಆತ್ಮ ಹತ್ಯ ಮಾಡಿಕೊಂಡಿದ್ದು ಮಹಿಳೆ ಸೇರಿ ಇಬ್ಬರು ಹೆಣ್ಣು ಮಕ್ಕಳು ಒಂದು ವರ್ಷದ ಗಂಡು ಮಗು ಸಹಿತ ನಾಲ್ಕು ಜನ ಮೃತ ಪಟ್ಟಿದ್ದಾರೆ. ಇಂತಹ ಮನಕಲಕುವ ಘಟನೆ ತಾಲೂಕಿನ ಮಿರಗಿ ಗ್ರಾಮದ ಅಶೋಕ ಅತನೂರ ಇವರ ಜಮಿನದಲ್ಲಿ ಗುರುವಾರರಂದು ಸಂಭವಿಸಿದೆ.
ಮೃತ ಮಹಿಳೆ ರಾಜಶ್ರೀ ಶಂಕ್ರೇಪ್ಪ ಹಳ್ಳೂರ(೨೯) ಎಂದು ಗುರ್ತಿಸಲಾಗಿದ್ದು ಸಾ|| ಮಿರಗಿ ಗ್ರಾಮದವಳಾಗಿದ್ದಾಳೆ. ತನ್ನ ತವರು ಮನೆ ಸಾಂಗಲಿ ಜಿಲ್ಲೆಯ ಜತ್ತ ತಾಲೂಕಿನ ಧರಿಕೊಣ್ಣೂರು ಗ್ರಾಮಕ್ಕೆ ಹೊಗಿ ಬರುತ್ತೆನೆ ಎಂದು ತನ್ನ ಗಂಡನನ್ನು ಕೇಳಿದಾಗ ಇಂದು ಬೇಡ ನಾಳೆ ಹೊಗು ಎಂದು ಮುಂದುಡುತ್ತಾ ಬಂದ ಪರಿಣಾಮ ಮನಸ್ಸಿಗೆ ಬೇಜಾರು ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಇದರಿಂದ ಮನ ನೊಂದ ಮಹಿಳೆ ತನ್ನ ಮಕ್ಕಳಾದ ಅನುಶ್ರೀ(೬), ತನುಶ್ರೀ(೩), ಸಂತೋಷ(೧) ಈ ಮೂರು ಜನ ಮುಗ್ದ ಮಕ್ಕಳನ್ನು ಬಾವಿಗೆ ತಳ್ಳಿ ತಾನು ಜಿಗಿದು ಆತ್ಮ ಹತ್ಯ ಮಾಡಿಕೊಂಡಿದ್ದಾಳೆ. ಇದರಿಂದ ನಾಲ್ಕು ಜನ ಬಾವಿ ನೀರಿನಲ್ಲಿ ಮುಳುಗಿದ ಪರಿಣಾಮ ನೀರಿನಿಂದ ಉಸಿರು ಗಟ್ಟಿ ಮೃತ ಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಇಂಡಿ ಗ್ರಾಮಿಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

WhatsApp Group Join Now
Telegram Group Join Now
Share This Article