MK HasiruKranti
WhatsApp Group Join Now
Telegram Group Join Now

ರಾಯಬಾಗ: ತಾಲೂಕಿನ ಜಲಾಲಪುರ ಗ್ರಾಮದ ಏಳುಮಕ್ಕಳ ತಾಯಿಬಾಯಿ ಜಾತ್ರಾ ಮಹೋತ್ಸವವು ಬುಧವಾರ ವಿಜೃಂಭಣೆಯಿಂದ ಜರುಗಿತು.

ಬುಧವಾರ ನಡೆದ ವಿವಿಧ ಶರ್ಯತ್ತುಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಜೋಡು ಎತ್ತಿನ ಗಾಡಿ ಶರ್ಯತ್ತು: ಜಲಾಲಪುರದ ವಸಂತ ಹವಾಲ್ದಾರ ಪ್ರಥಮ, ಭಿರಡಿಯ ತಾಯಿಬಾಯಿ ಪ್ರಸನ್ನ ದ್ವಿತೀಯ ಮತ್ತು ರಾಯಬಾಗದ ಅಕ್ಷಯ ಪೂಜಾರಿ ತೃತೀಯ ಬಹುಮಾನ ಪಡೆದರು.
ಜೋಡು ಕುದುರೆ ಗಾಡಿ ಶರ್ಯತ್ತು: ಭಿರಡಿಯ ರಾಮಚಂದ್ರ ಗೌಳಿ ಪ್ರಥಮ, ಮಹಾದೇವ ಈಟೇಕರಿ ದ್ವಿತೀಯ ಮತ್ತು ಲಗಮಣ್ಣ ಹಿಡಕಲ ತೃತೀಯ ಬಹುಮಾನ ಪಡೆದರು.
ಕುದುರೆ ಶರ್ಯತ್ತು: ಚಿಂಚಲಿಯ ಕುಮಾರ ಪೂಜಾರಿ ಪ್ರಥಮ, ಕಲ್ಲಪ್ಪ ಖಿಲಾರೆ ದ್ವಿತೀಯ ಹಾಗೂ ಸುರೇಶ ಚಿಂಚಲಿ ತೃತೀಯ ಬಹುಮಾನ ಪಡೆದರು.
ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಬಸಗೌಡ ಪಾಟೀಲ, ಮಲ್ಲು ಮುರಚಿಟ್ಟೆ, ಬಂಡು ಹವಾಲ್ದಾರ, ರಾವಸಾಹೇಬ ಹೇರವಾಡೆ, ರಾಜು ಜಾಧವ,  ಸಾವಂತ ಪಾಟೀಲ, ರಘುನಾಥ ಶೇಲಾರ, ಪ್ರಕಾಶ ನಿಂಬಾಳ್ಕರ ಸೇರಿ ಜಾತ್ರಾ ಕಮಿಟಿ ಸದಸ್ಯರು ಇದ್ದರು.
WhatsApp Group Join Now
Telegram Group Join Now
Share This Article