Pratibha Boi
WhatsApp Group Join Now
Telegram Group Join Now

ಝಳಕಿ : ಚಡಚಣ ತಾಲೂಕಿನ ರೈತರಿಗೆ ಕೆ. ಬಿ. ಜೆ. ಎನ್. ಎಲ್ ಅಧಿಕಾರಿಗಳು ಮಲತಾಯಿ ದೋರಣೆ ಮಾಡುತ್ತಿದ್ದಾರೆ, ನಮ್ಮ ರೈತರು, ಜಾನುವಾರುಗಳಿಗೆ, ಜಮೀನುಗಳಿಗೆ ನೀರಿಲ್ಲದೆ ಗೊಳಾಡಿದರು ೨೩ – ಝಳಕಿ : ನಾಗಠಾಣ ಕ್ಷೇತ್ರದ ೩೫ ರಿಂದ ೪೬ರ ಡಿಸ್ಟ್ರಿಬ್ಯೂಟರ್ ಕಾಲುವೆಗೆ ನೀರು ಹಾರೈಸುವಂತೆ ಅಗ್ರಹಿಸಿ ರೈತರಿಂದ ರೈತರ ಕೂಗಿಗೆ ಸ್ಪಂದನೆ ಕೊಡುತ್ತಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರು ನಾಗನಾಥ ಬಿರಾದಾರ ಮಾತನಾಡಿದರು.
ನಾಗಠಾಣ ಕ್ಷೇತ್ರದ ೩೫ ರಿಂದ ೪೬ರ ಡಿಸ್ಟ್ರಿಬ್ಯೂಟರ್ ಕಾಲುವೆಗೆ ನೀರು ಹಾರೈಸುವಂತೆ ಅಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘದ ಸದಸ್ಯರು ಮತ್ತು ಚಡಚಣ ತಾಲೂಕಾ ರೈತರಿಂದ ಝಳಕಿ ಕಾರ್ಯ ಪಾಲಕ ಅಭಿಯಂತರರು ಕೃ? ಭಾಗ್ಯ ಜಲ ನಿಗಮ ನಿಯಮಿತ ಕಚೇರಿ ಎದುರಿಗೆ ರೈತರಿಂದ ಬೃಹತ ಹೋರಾಟ ಹಮ್ಮಿಕೊಳ್ಳಲಾಯಿತು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘದ ವಿಜಯಪುರ ಜಿಲ್ಲಾ ಅಧ್ಯಕ್ಷರು ಸಂಗಮೇಶ ಸಗರ ಮಾತನಾಡಿ, ರೈತರಿಗೆ ಸರಿಯಾದ ನೀರು ಪೋರೈಕೆ ಮಾಡಬೇಕು, ಇಲ್ಲವಾದಲ್ಲಿ ನಾಳೆ ಮತ್ತೆ ಜನ, ಜಾನುವಾರುಗಳನ್ನು ತಂದು ಉಗ್ರ ಹೋರಾಟ ಮಾಡಲಾಗುವುದು ಎಂದರು.
ಅಧಿಕ್ಷಿತ ಅಭಿಯಂತರರು ಮನೋಜಕುಮಾರ ಗಡಬಳೆ ಮಾತನಾಡಿ, ಕುಡಿಯುವ ನೀರಿನ ಅಭಾವವಿದ್ದು, ಶುದ್ಧ ಘಟಕ ಮತ್ತು ಕೆರೆಗಳಿಗೆ ನೀರನ್ನು ತುಂಬಿಸಿ ನಂತರ ಕಾಲುವೆಗಳಿಗೆ ನೀರು ಹಾರೈಸುವಂತೆ ಆದೇಶವಿದ್ದು, ನಾವು ಅದನ್ನು ಪಾಲಿಸಬೇಕಾಗುತ್ತದೆ, ನಾನು ಯಾವ ರೈತರಿಗೂ ಅಸಹ್ಯ ಮಾತನಾಡಿಲ್ಲ, ಆದರೂಕೂಡ ನಾನು ರೈತರಲ್ಲಿ ಕ್ಷಮಾಪಣೆ ಕೇಳುತ್ತೇನೆ ಎಂದರು.
ದಯಾನಂದ ಕೋಳಿ ಮಾತನಾಡಿ ಸರ್ಕಾರ ನೀಡಿರುವ ಆದೇಶ ಪ್ರತಿ ನಮಗೆ ಕೊಡಿ, ರೈತರೆಂದರೆ ಮರ್ಯಾದೆ ಕೊಡದ ಅಧಿಕಾರಿಗಳಿಗೆ ಧಿಕ್ಕಾರ, ರೈತ ದೇಶದ ಬೆನ್ನೆಲಬು ಎಂದು ಭಾ?ಣ ಬಿಗಿಯುತ್ತೀರಿ, ರೈತರು ಕಚೇರಿಗೆ ಬಂದರೆ ಅಸಭ್ಯ ವರ್ತನೆ ಮಾಡುತ್ತೀರಿ, ನಾವುಗಳು ನಮಗೆ ನ್ಯಾಯ ಸಿಗುವ ವರೆಗೂ ಇಲ್ಲಿಂದ ಕಾಡೋಳಿದಿಲ್ಲ ಎಂದು ಘೋ?ಣೆ ಕೂಗಿದರು.
ಕಚೇರಿ ಎದುರಲ್ಲಿ ರೈತರೇ ಸ್ವತಃ ಅಡುಗೆ ಮಾಡಿ, ಕಚೇರಿ ಎದುರು ನೆಲದ ಮೇಲೆ ಕುಳಿತು ಉಪಹಾರ ಮಾಡಿ, ಮತ್ತೆ ಹೋರಾಟ ಮುಂದೆ ವರೆಸಿದರು.
ಇಂಡಿ ತಹಸೀಲ್ದಾರ ವಿಜಯ ಕಡಕಭಾವಿ ಮತ್ತು ಚಡಚಣ ತಹಸೀಲ್ದಾರ ಸಂಜಯ ಇಂಗಳೆ, ಝಳಕಿ ಠಾಣಾ ಅಧಿಕಾರಿಗಳು ಮಂಜುನಾಥ್ ತೀರಕನ್ನವರ ಮಧ್ಯಸ್ತಿಕೆ ವಹಿಸಿ, ರೈತರಿಗೆ ಅಸ್ವಾಸನೆ ನೀಡಿ, ಜಿಲ್ಲಾಧಿಕಾರಿಗಳೊಂದಿಗೆ ನೇರವಾಗಿ ಸಂದರ್ಶನ ನಡೆಸಿ ನೀರು ಪೋರೈಕೆ ಮಾಡಲಾಗುವದು ಎಂದು ತಿಳಿಸಿದರು ರೈತರು ಹೋರಾಟ ಅಂತ್ಯ ಗೊಳಿಸಿ ಅಧಿಕಾರಿಗಳೊಂದಿಗೆ ಸ್ಪಂದಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಮತ್ತು ಹಸಿರು ಸೇನೆ ವಿಜಯಪುರ ಜಿಲ್ಲಾ ಅಧ್ಯಕ್ಷರು ಸಂಗಮೇಶ ಸಗರ, ದಯಾನಂದ ಕೋಳಿ, ವಸಂತ ಭೈರಾಮಡಿ, ಗುರುನಾಥ ಬಗಲಿ, ಎಮ್.ಎಚ್. ಪೂಜಾರಿ, ಖಾಜೀಸಾಬ ಗುರುನಾಳ, ರಾಜುಗೌಡ ಪಾಟೀಲ, ದಸ್ತಗೀರ ವಾಲಿಕಾರ, ಅಣ್ಣಾರಾಯ ಶಿರನಾಳ, ಸತೀಶ ತಳಕೇರಿ, ದಾನೇಶ್ ತಳಕೇರಿ, ಅಶೋಕ್ ಜಿತ್ತಿ, ಸೋಮನಾಥ ಮದಭಾವಿ, ಭೀಮಾಶಂಕರ್ ರಗಟೆ, ಸದಾಶಿವ ತೇಲಿ, ಸುರೇಶ ಮಾಳಾಬಾಗಿ, ಲಕ್ಷ್ಮಣ ಬೆಳ್ಳಿ, ಸಂತೋ? ಘೋಡಕೆ, ಖಾಜಾಮಿಯಾ ಪಿರಜಾದೆ, ಮಹೇಶ ವಗ್ಗಿ, ಲೋಣಿ (ಬಿಕೆ ), ಬರಡೋಲ, ಏಳಗಿ, ಹಲಸಂಗಿ, ಹತ್ತಳ್ಳಿ, ಹಾವಿನಾಳ, ಮಣನಂಕಲಗಿ, ಮರಗುರ, ತದ್ದೇವಾಡಿ, ಗೋಡಿಹಾಳ, ಉಮರಾಣಿ ಗ್ರಾಮದ ರೈತರು ಉಪಸ್ಥಿತರಿದ್ದರು.

 

 

WhatsApp Group Join Now
Telegram Group Join Now
Share This Article