೪೨ ದಿನಗಳ ಮಂಡಲಪೂಜಾ ಕಾರ್ಯಕ್ರಮ

Hasiru Kranti
೪೨ ದಿನಗಳ ಮಂಡಲಪೂಜಾ ಕಾರ್ಯಕ್ರಮ
WhatsApp Group Join Now
Telegram Group Join Now
ಬಳ್ಳಾರಿ,ಡಿ.09 ನಗರದ ರಾಘವೇಂದ್ರ ಕಾಲೋನಿ ೨ನೇ ಹಂತದಲ್ಲಿನ ಇಂಟೂರಿ ನಗರದಲ್ಲಿರುವ ಶ್ರೀ ಕಾಶೀ ವಿಶ್ವನಾಥ ವಿಶಾಲಾಕ್ಷಿ ದೇವಸ್ಥಾನದಲ್ಲಿ ವಿಗ್ರಹಗಳ ಪ್ರತಿಷ್ಠಾಪನೆ ನೆರವೇರಿಸಿ ೪೨ ದಿನಗಳು ಮುಗಿದಿದ್ದ ಸಂದರ್ಭದಲ್ಲಿ ಪ್ರತಿಷ್ಠಾಪನಾ ಮಹೋತ್ಸವದಿಂದ ಸತತವಾಗಿ ೪೨ ದಿನಗಳ ಮಂಡಲಪೂಜಾ ಹಮ್ಮಿಕೊಳ್ಳಲಾಗಿತ್ತು.
ಗಣಪತಿ ಪೂಜೆ, ನವಗ್ರಹ ಪೂಜಾ ಮತ್ತು ಮೃತ್ಯುಂಜಯ ಹೋಮಗಳು ಪ್ರಧಾನ ಅರ್ಚಕg ರಾಘವೇಂದ್ರ ಆಚಾರ್, ಸಂತೋಷ್ ಸ್ವಾಮಿ ನೇತೃತ್ವದಲ್ಲಿ ಸಂಪೂರ್ಣವಾಗಿ ಮುಗಿಯಿತು.
ಈ ಕಾರ್ಯಕ್ರಮದಲ್ಲಿ ಬಳ್ಳಾರಿ ನಗರ ಮಾಜಿ ಶಾಸಕ  ಸೋಮಶೇಖರರೆಡ್ಡಿ ಪಾಲ್ಗೊಂಡು ಮಾತನಾಡಿ, ಇಂತಹ ಪೂಜಾ ಕಾರ್ಯಕ್ರಮಗಳು, ಇದರಲ್ಲಿ ವಿಧಿ-ವಿಧಾನಗಳು  ಮಾನವನ ಜೀವನದಲ್ಲಿ ಅನುಸರಿಸಬೇಕೆಂದು ಆಶಿಸಿದರಲ್ಲದೆ, ಇಂತಹ ಕಾರ್ಯಕ್ರಮ ಮುಂದಿನ ಪೀಳಿಗೆಯ ಯುವಕರಿಗೆ ದೇವರ ಮೇಲಿನ ಆಧ್ಯಾತ್ಮಿಕ ಭಕ್ತಿಗೆ ಅನುಗುಣವಾಗಬೇಕೆಂದು. ಇಂತಹ ಆಧಾತ್ಮಿಕ ಶಕ್ತಿಯಿಂದ ಮಾತ್ರ ಇಂದಿಗೆ ಕಾಲವು ನಡೆಯುತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ ೨೦ನೇ ವಾರ್ಡ್ ಪಾಲಿಕೆ ಸದಸ್ಯ ವಿವೇಕ್ (ವಿಕ್ಕಿ), ಮಾಜಿ ಪಾಲಿಕೆ ಸದಸ್ಯ ಕರಕೋಡಪ್ಪ ಸೇರಿದಂತೆ ಹಲವಾರು ಮುಖಂಡರು, ದೇವಸ್ಥಾನ ಸಮಿತಿ ಸದಸ್ಯರು ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು. ನಂತರ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸುಮಾರು ೩೦೦೦ಕ್ಕೂ ಅಧಿಕಾರ ಭಕ್ತಾದಿಗಳೆಲ್ಲರಿಗೂ ಅನ್ನಪ್ರಸಾದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ವೆಂಕಟಸಾಯಿ ಮುರಳಿ ಕೋಲಾಟ ಸಮಾಜದ ವತಿಯಿಂದ ಕೋಡೂರು ಪದ್ಮಾವತಿ ಇವರ ನೇತೃತ್ವದಲ್ಲಿ ಸುಮಾರು ೩೦ ಜನ ಮಹಿಳೆಯರಿಂದ ಕೋಲಾಟ ಕಾರ್ಯಕ್ರಮ ಸೇರಿದಂತೆ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು.
WhatsApp Group Join Now
Telegram Group Join Now
Share This Article