ಮೊದಲಿನ ಮೀಸಲಾತಿ ಅನ್ವಯ ಸರ್ಕಾರ ನೇಮಕಾತಿ ಪ್ರಕ್ರಿಯೆ ಮುಂದುವರಿಸಬೇಕೆಂದು ಆಗ್ರಹಿಸಿ ಮನವಿ

Pratibha Boi
ಮೊದಲಿನ ಮೀಸಲಾತಿ ಅನ್ವಯ ಸರ್ಕಾರ ನೇಮಕಾತಿ ಪ್ರಕ್ರಿಯೆ ಮುಂದುವರಿಸಬೇಕೆಂದು ಆಗ್ರಹಿಸಿ ಮನವಿ
WhatsApp Group Join Now
Telegram Group Join Now

ಕಾಗವಾಡ:ಒಂದು ಪಂಗಡಕ್ಕೆ ನ್ಯಾಯ ಒಂದು ಪಂಗಡಕ್ಕೆ ಅನ್ಯಾಯ ಎಸಗಿದಂತಾಗುತ್ತದೆ.ಆದರಿಂದ ನಾಗಮೋಹನದಾಸರವರು ಜನಗಣತಿಯ ವರದಿಯು ಸರಿಯಾಗಿ ಆಗಿರುವುದಿಲ್ಲ. ಪರಿಶಿಷ್ಟ ಜಾತಿಯಲ್ಲಿ ಪ್ರವರ್ಗ ಬಿ ಸಂಖ್ಯೆ `ಹೆಚ್ಚಿನ ಪ್ರಮಾಣದ ಇದು ನಮ್ಮ ಪಂಗಡಕ್ಕೆ ಹೊಲೆಯ ಸಂಬಂಧಿತ ಜಾತಿಗಳಿಗೆ ವಂಚಿಸಿ ವರದಿಯನ್ನು ನೀಡಿರುತ್ತಾರೆ. ಆದರಿ ವರದಿಯು ಅವೈಜ್ಞಾನಿಕವಾಗಿದ್ದು ಈ ವರದಿಯನ್ನು ಜಾರಿ ಮಾಡದೆ ತಿರಸ್ಕರಿಸಬೇಕುಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕಾಗವಾಡ,ಆಗ್ರಹಿಸಿದರು.

ಅವರು ಸೋಮವಾರ ದಿ.23 ರಂದು ಕಾಗವಾಡ ತಹಶಿಲ್ದಾರ ಕಛೇರಿಯಲ್ಲಿ ಹಮ್ಮಿಕೊಂಡ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಅವರು ಮುಂದೆ ಮಾತನಾಡುತ್ತಾ,ಇತ್ತೀಚಿಗೆ ಸರ್ಕಾರವು ಪರಿಶಿಷ್ಟ ಜಾತಿಯಲ್ಲಿ ಸಂಖ್ಯೆಗೆ ಅನುಗುಣವಾಗಿ ಜಾತಿ ಜನಗಣತಿ ಮಾಡಿ ವರ್ಗಿಕರಣನ್ವಯ ಒಳ ಮೀಸಲಾತಿ ಕಲ್ಪಿಸುವ ಸರ್ಕಾರವು ನ್ಯಾಯಮೂರ್ತಿ ನಾಗಮೋಹನದಾಸರವರ ಆಯೋಗವನ್ನು ರಚಿಸಿತ್ತು. ಅದರಂತೆ ನಾಗಮೋಹನದಾಸರವರು ಆಯೋಗದ ವರದಿಯಲ್ಲಿ ಪ್ರವರ್ಗ ಎ,ಪವರ್ಗ ಬಿ, ಪ್ರವರ್ಗ ಸಿ. ಎಂದು 17% ಮೀಸಲಾತಿ ಅನ್ವಯ 6:6:4:1 ಮೀಸಲಾತಿ. ವರ್ಗೀಕರಿ ಸಿ ವರದಿಯನ್ನು ಸರ್ಕಾರಕ್ಕೆ ನೀಡಿದ್ದು ಇರುತ್ತದೆ ಆದರೆ ಇದಕ್ಕೆ ಸಂಬಂಧಿತವಾಗಿ ಕರ್ನಾಟಕ ಉಚ್ಚನ್ಯಾಯಾಲಯ ಬೆಂಗಳೂರುನಲ್ಲಿ ಸಂವಿಧಾನಿಕ ಸಿಂಧುತ್ವವನ್ನು ಪ್ರಶ್ನೆ ಮಾಡಿದಾಗ ನ್ಯಾಯಾಲಯವು ಯಾವುದೇ ಕಾರಣಕ್ಕೆ ಮೀಸಲಾತಿಯ ಪ್ರಮಾಣ 50% ಮೀರು ಕೂಡದು ಎಂದು ಅಭಿಪ್ರಾಯ ಪಡಿಸುತ್ತಾ ಇದು ಮೀಸಲಾತಿಯ ಪ್ರಮಾಣ 56% ಆಗುತ್ತದೆ ಎಂದು ಹೇಳಿ ಸದರಿ 07% ಮೀಸಲಾತಿ ಅನ್ವಯಿಸುವುದಕ್ಕೆ ತಡೆಯಾಜ್ಞೆ ನೀಡಿ ಆದೇಶ ಇರುತ್ತದೆ. ಆದರೆ ಈಗ ಸರ್ಕಾರವು ಮೊದಲಿನ 15 % ಮೀಸಲಾತಿ ಅನ್ವಯ ಒಳ ಮೀಸಲಾತಿ ಜಾರಿಗೊಳಿಸುವ ಹುನ್ನಾರ ನಡೆಸಿರುತ್ತಾರೆ.ಎಂದ ಅವರು ನ್ಯಾಯಮೂರ್ತಿ ನಾಗಮೋಹನದಾಸರವರ ಅವೈಜ್ಞಾನಿಕ ಒಳ ಮೀಸಲಾತಿ ವರ್ಗೀಕರಣ ವರದಿಯನ್ನು ತಿರಸ್ಕರಿಸಿ ಮೊದಲಿನ ಮೀಸಲಾತಿ ಅನ್ವಯ ಸರ್ಕಾರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಮುಂದುವರಿಸಬೇಕೆಂದು ಆಗ್ರಹಿಸುತ್ತದೆ.
ಇದೆ ವೇಳೆ  ಅನೇಕ ದಲಿತ ಸಂಘಟನೆಗಳಿಂದ ತಹಶಿಲ್ದಾರ ರವೀಂದ್ರ ಹಾದಿಮನಿ ಅವರ ಮೂಲಕ ಸಿಎಂ ಸಿದ್ದರಾಮಯ್ಯನವರಿಗೆ  ಮನವಿ ಸಲ್ಲಿಸಲಾಯಿತು.
 ಈ ವೇಳೆ. ಸಂಜಯ ತಳವಲಕರ,ರವಿ ಕಾಂಬಳೆ,ಸಚೀನ ಪೂಜಾರಿ, ವಿಜಯ ಅಸೋದೆ, ಈಶ್ವರ ಕಾಂಬಳೆ, ಜಯಾಪಲ ಬಡಿಗೇರ,ಮಲ್ಲಿಕಾರ್ಜುನ ಕಾಂಬಳೆ, ದಯಾನಂದ ಕಾಂಬಳೆ, ರಾಜು ಪವಾರ, ಪ್ರಕಾಶ ಕಾಂಬಳೆ ವಿದ್ಯಾಧರ ಧೋಡಾರೆ, ಮಹಾಂತೇಶ್ ಬಡಿಗೇರ,ಮಹಾಂತೇಶ್ ವರಾಳೆ,ಜನಾರ್ಧನ್ ಧೋಡಾರೆ,ಉದಯ ಖೋಡೆ,ಶೇಖರ್ ಹೊನ್ನಕಾಂಬ್ಳೆ,ವಿನೋದ್ ಕಾಂಬಳೆ,, ಸಿದ್ರಾಮ್ ಬಸ್ತವಾಡ,ಉಪಸ್ಥಿತರಿದ್ದರು
WhatsApp Group Join Now
Telegram Group Join Now
Share This Article