ಸಸಿ ವಿತರಿಸುವ ಮೂಲಕ ಹುಟ್ಟು ಹಬ್ಬ ಆಚರಿಸಿಕೊಂಡ ಸಮಾಜ ಸೇವಕ ಆನಂದ ಟೋಣಪಿ.
ಅಥಣಿ : ಹುಟ್ಟು ಹಬ್ಬದ ಸಂದರ್ಭದಲ್ಲಿ ಯಾರು ದುಂದು ವೆಚ್ಚ ಮಾಡಬಾರದು ಎಂಬ ಸದುದ್ದೇಶವನ್ನು ಇಟ್ಟುಕೊಂಡು ಪರಿಸರ ಸಂರಕ್ಷಿಸುವ ನಿಟ್ಟಿನಲ್ಲಿ ಸಮಾಜ ಸೇವಕ ಆನಂದ ಟೋಣಪಿ ಅವರು ಹುಟ್ಟು ಹಬ್ಬದ ನಿಮಿತ್ತವಾಗಿ ಪ್ರತಿ ಮನೆಗೂ ಸಸಿಗಳನ್ನು ವಿತರಿಸುವ ಮೂಲಕ ಪರಿಸರದ ಬಗ್ಗೆ ಜಾಗೃತಿ ಮೂಡಿಸಿ ವಿಶಿಷ್ಟ ರೀತಿಯಲ್ಲಿ ಹುಟ್ಟು ಹಬ್ಬ ಆಚರಿಸಲಾಯಿತು
ಈ ವೇಳೆ ಸಸಿಗಳನ್ನು ವಿತರಿಸಿ ಸಮಾಜ ಸೇವಕ ಆನಂದ ಟೋಣಪಿ ಮಾತನಾಡಿ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು. ಹುಟ್ಟು ಹಬ್ಬದ ಸವಿ ನೆನಪಿನಲ್ಲಿ ಮನೆಗೊಂದು ಮರ ನೀಡುವ ಮೂಲಕ ಇಂದು ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಲು ಸಹಕರಿಸಿದ ಎಲ್ಲ ನನ್ನ ಆತ್ಮೀಯರಿಗೆ ಹೃತ್ಪೂರ್ವಕ ಧನ್ಯವಾದಗಳನ್ನ ಸಲ್ಲಿಸುತ್ತೇನೆ. ಎಂದ ಅವರು ಮುಂದಿನ ಪೀಳಿಗೆಗೆ ಪರಿಸರ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಹುಟ್ಟು ಹಬ್ಬ ನೆನಪಿನಲ್ಲಿ ಸಸಿಗಳನ್ನು ವಿತರಿಸಬೇಕು. ಪರಿಸರ ಸ್ನೇಹಿ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳಬೇಕು ಎಂದರು
ಆನಂತರ ಕಾರ್ಯನಿರತ ಪತ್ರಕರ್ತರ ಸಂಘದ ಅಥಣಿ ತಾಲೂಕಾ ಅಧ್ಯಕ್ಷ ರಾಕೇಶ ಮೈಗೊರ. ಮಾತನಾಡಿ ಸರಳ ಸಜ್ಜನಿಕೆಯ ವ್ಯಕ್ತಿತ್ವದ ಸಮಾಜಸೇವೆಯನ್ನೆ ತನ್ನ ಧ್ಯೇಯ ಮಾಡಿಕೊಂಡಿರುವ ಆನಂದ ಟೋಣಪಿ ಇವರು ಸಾಕಷ್ಟು ಬಡ ಕುಟುಂಬಗಳಿಗೆ ಸಹಾಯ ಸಹಕಾರ ಮಾಡುತ್ತಾ ಹಾಗೂ ಶಿಕ್ಷಣದಿಂದ ಯಾರು ವಂಚಿತರಾಗಬಾರದು ಎಂಬ ಉದ್ದೇಶದಿಂದ ಬಡ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡಿ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. ಇಂದು ತಮ್ಮ ಹುಟ್ಟು ಹಬ್ಬದಂದು ಪ್ರತಿ ಮನೆಗೆ ಸಸಿ ವಿತರಿಸುವ ಮೂಲಕ ಪರಿಸರ ಕಾಳಜಿಯನ್ನು ತೋರಿದ್ದಾರೆ. ಇದು ಎಲ್ಲರಿಗೂ ಮಾದರಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಪ್ರಕಾಶ ಅಂಬೇಡ್ಕರ್ ಬ್ರೀಗೆಡ್ ತಾಲೂಕಾ ಅಧ್ಯಕ್ಷ ಮಹಾಂತೇಶ ಬಾಡಗಿ ಮಾತನಾಡಿ ಆನಂದ ಟೋಣಪಿ ಇವರ ಸಾಮಾಜಿಕ ಕಳಕಳಿ ಎಲ್ಲರಿಗೂ ಮಾದರಿಯಾಗಿದೆ. ತಮ್ಮ ಹುಟ್ಟು ಹಬ್ಬದಂದು ಪ್ರತಿ ಮನೆಗೆ ಸಸಿ ವಿತರಿಸಿದ್ದು ನೋಡಿದರೆ ಪರಿಸರದ ಬಗ್ಗೆ ಅವರಿಗೆ ಇರುವ ಕಾಳಜಿ ಎತ್ತಿ ತೋರಿಸುತ್ತದೆ. ಅವರ ಈ ಮಾದರಿ ಕಾರ್ಯ ಎಲ್ಲರಿಗೂ ಪ್ರೇರಣೆಯಾಗಲಿ ಎಂದರು
ಈ ಸಂದರ್ಭದಲ್ಲಿ ರಮೇಶ ಬಾದವಾಡಗಿ,ಅಜೀತ ಇನಾಮದಾರ,ಕಿರಣ ದೇಶಪಾಂಡೆ, ಸಂದೀಪ ಅಳತೇಕರ,ಶ್ರೀನಾಥ್ ದೇಶಪಾಂಡೆ, ದಿಗ್ವಿಜಯ ದೇಸಾಯಿ, ಪರಸರಾಮ ಕಾವೇರಿ,ಅಭಯ ಪಾಟೀಲ,ಸಂತೋಷ ಲಠೆ,ರಾಕೇಶ ಲಗೋಟಿ,ವಿನಾಯಕ ಮಡಿವಾಳ,ದಾನೇಶ ಪಾಟೀಲ, ಅನೀಲ ಕುಲರ್ಕಣಿ,ಸುಶಾಂತ ಬೋಜನಿ,ಸುಶಾಂತ್ ಪಟ್ಟಣ,
ರವಿ ಬಾಸಿಂಗಿ, ಬಸವರಾಜ ಕಾಂಬಳೆ, ಶ್ರೀನಿವಾಸ ಪಟ್ಟಣ,
ಸೇರಿದಂತೆ ಹಲವರು ಉಪಸ್ಥಿತರಿದ್ದರು


