ಮಹಾಲಿಂಗಪುರ : ನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸನ ೨೦೨೪-೨೫ ನೇ ಸಾಲಿನಲ್ಲಿ ೪೦.೨೪ ಲಕ್ಷ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷರಾದ ಬಸನಗೌಡ ಪಾಟೀಲ ಹೇಳಿದರು.
ಸಂಘದ ಆವರಣದಲ್ಲಿ ನಡೆದ ೬೬ ನೇ ಸರ್ವ ಸಾಧಾರಣ ಸಭೆಯನ್ನು ಉದ್ಘಾಟಸಿ ಮಾತನಾಡಿ ಸಂಘವು ರೈತರ ಏಳಿಗೆಗಾಗಿ ಹಲವು ಯೋಜನೆಗಳ ಮೂಲಕ ಆರ್ಥಿಕ ನೆರವು ನೀಡಿ ಶ್ರಮಿಸುತ್ತಿದೆ. ಪ್ರತಿಯೊಬ್ಬ ಸದಸ್ಯ ರೈತರು ಇದರ ಸದುಪಯೋಗ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು.ಕಳೆದ ಸಾಲಿನಲ್ಲಿ ಸಂಘವು ಒಟ್ಟು ೧೫ ಕೋಟಿಗೂ ಅಧಿಕ ಸಾಲ ವಿತರಿಸಿದ್ದು. ಸಂಘದಲ್ಲಿ ಒಟ್ಟು ೨೫೨೧ ಸದಸ್ಯರಿದ್ದು ಒಟ್ಟು ೧.೮೯ ಕೋಟಿ ಶೇರ ಬಂಡವಾಳ ಹೊಂದಿದ್ದು.ದುಡಿಯುವ ಬಂಡವಾಳ ೨೨.೫೪ ಕೋಟಿ ರೂಪಾಯಿ ಇದ್ದು ಸಂಘವು ತನ್ನ ಸದಸ್ಯರಿಗೆ ಬೆಳೆ, ಟ್ರಾಕ್ಟರ್, ಟೇಲರ್, ನೇಕಾರಿಕೆ, ಬಿನ್ ಶೇತಕಿ, ವಾಹನ, ಮುದ್ದತಿ ಠೇವು ಸಾಲ ನೀಡುತ್ತಿದೆ. ಎಂದರು.
ಅಪಘಾತ ವಿಮೆ : ಸಂಘದಿಂದ ಬೆಳೆ ಸಾಲ ಪಡೆದಿರುವ ೭೦ ವ?ದೊಳಗಿನ ಸದಸ್ಯರು ವಾರ್ಷಿಕ ೨೦ ರೂಪಾಯಿ ಪಾವತಿಸಿದರೆ ಅಪಘಾತ ವಿಮೆ ೨ ಲಕ್ಷ ರೂಪಾಯಿ ಸಹಾಯ ಧನ ಸಿಗುತ್ತದೆ ಮತ್ತು ಅಕಾಲಿಕ ಮರಣ ಹೊಂದಿದ ಸದಸ್ಯರಿಗೆ ಅಂತ್ಯ ಸಂಸ್ಕಾರಕ್ಕೆ ೩ ಸಾವಿರ ಸಹಾಯ ಧನ ನೀಡಲಾಗುತ್ತಿದ್ದೆ. ಯಶಸ್ವಿನಿ ಆರೋಗ್ಯ ವಿಮೆ ಜಾರಿಗೊಳಿಸಲಾಗಿದೆ. ಎಂದರು
ಪ್ರೋತ್ಸಾಹ ಧನ ವಿತರಣೆ : ಕಳೆದ ಸಾಲಿನಲ್ಲಿ ಎಸ್ ಎಸ್ ಎಲ್ ಸಿ, ಪಿಯುಸಿ ಮತ್ತು ಪದವಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ೩೮ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ತಲಾ ೨ ಸಾವಿರ ರೂಪಾಯಿ ಪ್ರೋತ್ಸಾಹ ಧನ ನೀಡಿ ಗೌರವಿಸಲಾಯಿತು.ಅತ್ಯುತ್ತಮ ಗ್ರಾಹಕಾರದ ಬಸವರಾಜ ಬಂಡಿವಡ್ಡರ ಮತ್ತು ಗಿರಮಲ್ಲಪ್ಪಾ ಬರಗಿ ಸೇರಿ ಹಲವು ಗಣ್ಯರನ್ನು ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ಸಂಘದ ಅಧ್ಯಕ್ಷರಾದ ಬಸವರಾಜ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಹಾಲಿಂಗಪ್ಪ ಪೂಜಾರಿ, ಮಲ್ಲಿಕಾರ್ಜುನ್ ಕುಳ್ಳೊಳ್ಳಿ, ವಿ?ಗೌಡ ಪಾಟೀಲ, ಶಿವಪ್ಪ ನಾಗನೂರ್, ಬಸವರಾಜ ಅರಳಿಕಟ್ಟಿ, ಈರಪ್ಪ ದಿನ್ನಮನಿ, ಶ್ರೀಮತಿ ಶೈಲಾ ಪವಾರ, ಸುರೇಖಾ ಸೈದಾಪುರ, ಶಿವಲಿಂಗಪ್ಪ ಘಂಟಿ, ಹಣಮಂತ ಬುರುಡ, ಸಂಗಪ್ಪ ಡೊಣಿ, ಅಶೋಕ ಪಾಟೀಲ, ಬಿ ಡಿ ಸಿ ಸಿ ಬ್ಯಾಂಕ್ ಪ್ರತಿನಿಧಿ ಮತ್ತು ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ಈರಣ್ಣಾ ಬೆಟಗೇರಿ ಸಂಘದ ಎಲ್ಲ ಸಿಬ್ಬಂದಿ ಸೇರಿ ಹಲವರು ಇದ್ದರು ಕಾರ್ಯಕ್ರಮವನ್ನು ಶಿಕ್ಷಕರಾದ ನರನಗೌಡ ಉತ್ತಂಗಿ ನಿರೂಪಿಸಿ ವಂದಿಸಿದರು.