ಕೊಪ್ಪಳ , ೨೪- ಮಕ್ಕಳಲ್ಲಿ ಜಾಗೃತಿ ಹಾಗೂ ವ್ಯವಹಾರಿಕ ಜ್ಞನ ಮೂಡಿಸಲು ಮತ್ತು ನಮ್ಮ ಮೂಲಕಸಬುಗಳನ್ನ ನೆನಪಿಸಲು ಮಕ್ಕಳಿಗಾಗಿ ಜರುಗುವ ಚಿಣ್ಣರ ಮೇಳಗಳು ಸಹಕಾರಿಯಾಗಲಿವೆ ಎಂದು ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ವೀರೇಶ ಅರಳಿಕಟ್ಟಿ ಹೇಳಿದರು.
ಅವರು ನಗರದ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಭಾ? ಕಲಿಕೊತ್ಸವ ಮತ್ತು ಮಕ್ಕಳ ಸಂತೆ – ೨೦೨೬ ಉದ್ಘಾಟಿಸಿ ಮಾತನಾಡಿದರು.ಮಕ್ಕಳಿಗೆ ವ್ಯವಹಾರಿಕ ಜ್ಞಾನ ಬೆಳೆಯುವುದು ಬಹಳ್ಳ ಮುಖ್ಯವಾಗಿದೆ , ಇಂದಿನ ಮಕ್ಕಳು ನಾಳಿಬ ಪ್ರಜೆಗಳಾಗಿ ದೇಶದ ಆಸ್ತಿಗಳಾಗುತ್ತಾರೆ ಆರಂಭದಿಂದಲೇ ವ್ಯವಾಹಾರಿಕ ಜ್ಞನ ಬೆಳೆಸಿದರೆ ಭವಿ?ದಲ್ಲಿ ಉತ್ತಮವಾಗಲಿದೆ. ಪಠ್ಯದ ಜೊತೆಗೆ ಪಠ್ಯತರ ಚಟುವಟಿಕೆಗಳು ಬಹಳ್ಳಮುಖ್ಯ ಭಾರತದಲ್ಲಿ ನಮ್ಮ ಪರಂಪರೆ ವಿವಿಧ ಕಸುಬು ಗಳಿಂದ ಕುಡಿದೆ ಅವುಗಲನ್ನ ಮಕ್ಕಳಿಗೆ ತಿಳಿಸುವ ಹಾಗೂ ಅದರ ಅರಿವು ಮೂಡಿಸುವ ಕೆಲಸ ಇದಾಗಿದೆ ಎಂದರು.
ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಲಕ್ಷಣ ಪಲ್ಲೇದ ಮಾತನಾಡಿ ಸರಕಾರಿ ಶಾಲೆಯಂತೆ ಇಲ್ಲಿಯು ಸಹ ವಿವಿಧ ಚಟುವಟಿಕೆಗಳನ್ನು ಮಾಡುತ್ತಿರುವುದು ಮಕ್ಕಳ ಕಲಿಕಾ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಮಧರು. ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಯಲ್ಲಪ್ಪ ಬೆನಟ್ಟಿ ಮಾತನಾಡಿ ಮಕ್ಕಳ ಬಾಲ್ಯದಲ್ಲಿ ಪಾಲಕರ ಮುತುವರ್ಜಿಯಿಂದ ವ್ಯಾವಹಿರಿ ಶೈಕ್ಷಣಿಕ ಬೆಳವಣಿಗೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.ಶಾಲಾ ಸಂಸ್ಥೆಯ ಅಧ್ಯಕ್ಷ ಶಿವಕುಮಾರ ಕುಕನೂರ ಪ್ರಾಸ್ಥವಿಕವಾಗಿ ಮಾತನಾಡಿದರು. ಮಕ್ಕಳ ಸಂತೆಯಲ್ಲಿ ಮಕ್ಕಳು ತರಕಾರಿ, ಪಾನಿ ಪುರಿ , ಬೆಳೆಕಾಳು, ಸಿಹಿತಿನಿಸು ಸೇರಿದಂತೆ ಎಲ್ಲಾ ಪದಾರ್ಥಗಳು ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಗಮನ ಸೇಳೆಯಿತು. ಈ ಸಂದರ್ಭದಲ್ಲಿ ನಿವೇದಿತಾ ಶಾಲೆಯ ನೀತೇಶ ಪುಲಸ್ಕರ,ಬೇಂದ್ರೆ ಶಾಲೆಯ ಸಂತೋ? ದೇಶಪಾಂಡೆ,ಮಾಸ್ತಿ ಶಾಲೆಯ ಹುಲಗಪ್ಪ ಕಟ್ಟಿಮನಿ,ಗ್ಲೋಬಲ್ ಶಾಲೆಯ ಬಸವರಾಜ SS,ಕಿಯೋನಿಕ್ಸ ಕಂಪೂಟರನ ಮಂಜುನಾಥ ಉಲ್ಲತ್ತಿ ,ಉದ್ಯಮಿಗಳಾದ ಮಂಜುನಾಥ ಅಂಗಡಿ,ಶರಣು ಡೊಳ್ಳಿನ ,ಅಶೋಕ ಕುಂಬಾರ,ಪಕ್ರುಸಾಬ ನಧಾಫ,ಸೋಮನಗೌಡ ಹೊಗರನಾಳ ಸುಕ್ರು ನಧಾಫ ಉಪಸ್ಥಿತರಿದ್ದರು.


