ರಾಮದುರ್ಗ: ಭಾರತೀಯ ಜೀವ ವಿಮಾ ಸಂಸ್ಥೆಯ ಬೆಳವಣೆಗೆಯಲ್ಲಿ ಹಾಗೂ ಸಾರ್ವಜನಿಕರಿಗೆ ಜೀವ ವಿಮೆ ನೀಡುವಲ್ಲಿ ಪ್ರತಿನಿಧಿಗಳ ಪಾತ್ರ ಅತ್ಯಂತ ಮಹತ್ವದಾಗಿದ್ದು, ಕಾರಣ ಎಲ್ಲ ಪ್ರತಿನಿಧಿಗಳು ಹೆಚ್ಚಾಗಿ ಸಾರ್ವಜನಿಕರನ್ನು ಭೇಟಿ ಮಾಡಿ ಅವರಿಗೆ ಜೀವ ವಿಮೆ ಕುರಿತು ತಿಳಿಸಿ ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಮುಂದಾಗಬೇಕು ಎಂದು ಎಲ್‌ಐಸಿ ರಾಮದುರ್ಗ ಶಾಖೆಯ ವ್ಯವಸ್ಥಾಪಕ ಸಂತೋಷ ರೆಡ್ಡಿ ಹೇಳಿದರು.
ಪಟ್ಟಣದ ಎಲ್‌ಐಸಿ ಶಾಖೆಯಲ್ಲಿ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ದಿ ಸಂಘ ರಾಮದುರ್ಗ ಘಟಕದ ನೇತೃತ್ವದಲ್ಲಿ ಶನಿವಾರ ಹಮ್ಮಿಕೊಂಡ ಪ್ರತಿನಿಧಿಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿನಿಧಿಗಳ ಸಂಘಟನೆಯಲ್ಲಿ ಬಲವಿದೆ. ಅದನ್ನು ಉತ್ತಮ ಕಾರ್ಯಕ್ಕೆ ಬಳಸಿಕೊಳ್ಳಬೇಕು. ಭಾರತೀಯ ಜೀವವಿಮಾ ನಿಗಮವು ಪ್ರತಿನಿಧಿಗಳ ಹಲವಾರು ಬೇಡಿಕೆಗಳನ್ನು ಈಡೆರಿಸುತ್ತಾ ಬಂದಿದೆ. ನಿತ್ಯ ಪ್ರತಿನಿಧಿಗಳು ತಮ್ಮ ಆರೋಗ್ಯ ರಕ್ಷಣೆಯ ಜೊತೆಗೆ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವಲ್ಲಿ ಮುಂದಾಗಬೇಕು ಎಂದರು.
ಈಗಾಗಲೇ ಎಲ್‌ಐಸಿ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ನಿಂತಿದೆ. ಹೊಸ ಹೊಸ ತಂತ್ರಜ್ಞಾನದೊಂದಿಗೆ ಜನರಿಗೆ ಹೆಚ್ಚಿನ ಸೇವೆ ನೀಡುತ್ತಿದೆ. ಅದನ್ನು ಗ್ರಾಮೀಣ ಮಟ್ಟದಲ್ಲಿ ತಿಳಿಸುವ ಕೆಲಸವನ್ನು ಪ್ರತಿನಿಧಿಗಳು ಮಾಡಬೇಕು. ಸಾಕಷ್ಟು ಜನರು ವಿಮೆಯಿಂದ ದೂರವಿದ್ದು, ಅಂತವರನ್ನು ಗುರ್ತಿಸುವ ಕೆಲಸವನ್ನು ಪ್ರತಿನಿಧಿಗಳು ಮಾಡಿ ಸಾಧ್ಯವಾದ ಮಟ್ಟಿಗೆ ಎಲ್ಲರನ್ನು ವಿಮೆ ವ್ಯಾಪ್ತಿಗೆ ತರುವಲ್ಲಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಕ್ಷೇಮಾಭಿವೃದ್ದಿ ಸಂಘ ರಾಮದುರ್ಗ ಘಟಕದ ಅಧ್ಯಕ್ಷ ರಮೇಶ ಕಡಕೋಳ ಮಾತನಾಡಿ, ಪ್ರತಿನಿಧಿಗಳ ಏನೇ ಕುಂದು ಕೊರತೆಗಳಿದ್ದರು ಅವುಗಳನ್ನು ಸಂಘಟನೆಯ ಗಮನಕ್ಕೆ ತಂದರೆ ಪರಿಹರಿಸಲು ಶ್ರಮಿಸಲಾಗುವದು. ಪ್ರತಿನಿಧಿಗಳ ಅನೇಕ ಬೇಡಿಕೆಗಳಿದ್ದು, ಅವುಗಳನ್ನು ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಂಘಟನೆಯ ಮೂಲಕ ಒತ್ತಾಯಿಸಿ ಅವುಗಳನ್ನು ಈಡೆರಿಸಿಕೊಳ್ಳುವಲ್ಲಿ ಶ್ರಮಿಸುವದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸವದತ್ತಿ ಶಾಖೆಯ ಖಜಾಂಚಿ ಕೃಷ್ಣಸ್ವಾಮಿ ದೇವಾಂಗಮಠ, ಎಲ್‌ಐಸಿ ಅಭಿವೃದ್ದಿ ಅಧಿಕಾರಿಗಳಾದ ವಿಶಾಲ ಬಕೆಡಿ, ಅಭಿಷೇಕ ಆಲಮಟ್ಟಿ, ಹಿರಿಯ ಪ್ರತಿನಿಧಿಗಳಾದ ಹನಮಂತ ಬದ್ನೂರ, ಜಿ.ಆರ್. ಮಡ್ಡಿ, ಎಲ್.ಎಚ್. ಬಿಲ್ಲಾರ, ಕೆ.ಎಲ್. ಬಾರಿಗಿಡದ, ಐ.ಬಿ. ಹಳ್ಳಿ, ಎಂ.ಜಿ. ಕುಲಕರ್ಣಿ, ಎಸ್.ಜಿ. ಸೈಯದ, ಡಿ.ಎಚ್. ಬಾವಾಖಾನ್, ತುಕಾರಾಮ ಸುಣದೋಳಿ, ಬಿ.ವೈ. ಕ್ಯಾತಾರಿ, ನಾಗಯ್ಯ ಹಿರೇಮಠ, ಜಿ.ಎಫ್. ಗುಡಿಯವರ, ಎ.ಜಿ. ಗುರುಬಸನ್ನವರ, ಐ.ಸಿ. ಹಡಪದ ಸೇರಿದಂತೆ ಅನೇಕ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಸಾರ್ವಜನಿಕರಿಗೆ ಜೀವ ವಿಮೆ ನೀಡುವಲ್ಲಿ ಪ್ರತಿನಿಧಿಗಳ ಪಾತ್ರ ಅತ್ಯಂತ ಮಹತ್ವದಾಗಿದೆ : ರೆಡ್ಡಿ


