ಇಂಡಿ: ಪ್ರತಿಯೋಬ್ಬ ಪಾಲಕರು ತಮ್ಮ ಮಕ್ಕಳ ಮೇಲೆ ಒತ್ತಡ ಹೇರದೆ ಕಲಿಕೆಗೆ ಅನುಗುಣವಾಗಿ ಅವರ ಅಭಿರುಚಿಗೆ ತಕ್ಕಂತೆ ಶಿಕ್ಷಣ ಕೊಡಿಸಿದಲ್ಲಿ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಹೇಳಿದರು.
ಅವರು ಶನಿವಾರರಂದು ನಗರದ ಸರಕಾರಿ ಪ್ರಥಮ ದರ್ಜೆ(ಡಿಗ್ರಿ) ಕಾಲೇಜಿನಲ್ಲಿ ಶ್ರೀ ಯಶವಂತರಾಯಗೌಡ.ವಿ.ಪಾಟೀಲ ಫೌಂಡೆಶನ್(ರಿ) ಪಡನೂರ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮತ್ತು ಸಮನ್ವಯಾಧಿಕಾರಿಗಳ ಕಾರ್ಯಾಲಯ ವತಿಯಿಂದ ೨೦೨೫-೨೬ನೇ ಸಾಲೀನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ ಒಂದು ದೀನದ ವಿಶೇಷ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ವಿದ್ಯಾರ್ಥಿಗಳು ಆತ್ಮಸ್ಥೈರ್ಯದಿಂದ ಪರಿಕ್ಷೇ ಎದುರಿಸಿ ಯಾವುದೆ ಅಂಜಿಕೆ ಆತಂಕಕ್ಕೆ ಒಳಗಾಗದೆ ಚಿಸರಳವಾಗಿ ಪರಿಕ್ಷೇ ಬರೆಯಲು ಮುಂದಾದಲ್ಲಿ ಆತ್ಮ ವಿಶ್ವಾಸ ಹೇಚ್ಚಾಗುತ್ತದೆ. ಯಾವುದೆ ಮೇಲ್ ಪ್ರ್ಯಾಕಟ್ಟಿಸ್ ಮಾಡಲು ಮುಂದಾಗಬೇಡಿ ಇದು ಒಳ್ಳೆಯ ಪ್ರವರ್ತಿಯಲ್ಲ ಇದರಿಂದ ನಿಮ್ಮ ಭಾವಿ ಜೀವನದ ಮೇಲೆ ದುಷ್ಪರಿಣಾಮ ಬಿರುತ್ತದೆ. ಮಹಾತ್ಮಾಗಾಂಧಿಜಿಯವರ ಹಾಗೂ ನೇಲ್ಸ್‌ನ ಮೇಂಡೆಲ ಅವರ ಆದರ್ಶಗಳನ್ನು ನಿಮ್ಮ ವಿದ್ಯಾರ್ಥಿ ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.
ಸ್ಟೂಡೆಂಟ್ ಲೈಫ್ ಇಸ್ ಗೊಲ್ಡನ್ ಲೈಫ್ ಎನ್ನುವ ಹಾಗೆ ಇಂತಹ ಕಾಲ ಮತ್ತೆ ಮರಳಿ ಸಿಗುವುದಿಲ್ಲ ಇದರ ಸದುಪಯೋಗಡಿಸಿಕೊಂಡು ಮುಂದಿನ ಭಾವಿ ಜೀವನ ರೂಪಿಕೊಳ್ಳಬೇಕು. ತಂದೆ ತಾಯಿಗಳ ಉಪಕಾರ ಸ್ಮರಣೆಯನ್ನು ತಮ್ಮ ಜೀವನುದ್ದಕ್ಕೂ ಮಾಡಿದರು ಸಾಲದು. ಅದರ ಜೊತೆಯಲ್ಲಿ ನಿವೂ ಕಲಿತ ಶಾಲೆ ನಿಮ್ಮನ್ನು ಕಲಿಸಿರತಕ್ಕಂತಹ ಗುರುಗಳನ್ನು ಸ್ಮರಿಸುವ ಕಾರ್ಯ ಮಾಡಬೇಕು ಎಂದರು.
ಲ ಫೌಂಡೆಶನ್‌ದ ಗೌರವ ಅಧ್ಯಕ್ಷೆ ಶ್ರೀಮತಿ ಶಿವಲೀಲಾ ಆಶೀಶ್ ವಿರಾಪೂರ, ವಿಜಯಪುರ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ವೀರಯ್ಯ ಸಾಲೀಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಮತಿ ಎಸ್.ಎ.ಮುಜಾವರ, ಕ್ಷೇತ್ರ ಸಮನ್ವಯಾಧಿಕಾರಿ ಎಸ್.ಆರ್.ನಡುಗಡ್ಡಿ, ಶಿಕ್ಷಕ ರಾಘವೇಂದ್ರ ಕುಲಕರ್ಣಿ ಮಾತನಾಡಿದರು.
ಈ ಸಂದರ್ಭದಲ್ಲಿ ೨೦೨೫-೨೬ನೇ ಸಾಲೀನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಎಲ್.ಬಿ. ಹಾಗೂ ನೀಲ ನಕ್ಷೇ ಆಧಾರಿತ ಉತಿರ್ಣತಾ ಕೈಪಿಡಿ ಯಶೋಗಾಥೆ ಪುಸ್ತಕವನ್ನು ಬಿಡುಗಡೆ ಮಾಡಿದರು.
ವೇದಿಕೆ ಮೇಲೆ ಲಿಂಬೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ, ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ, ತಹಸಿಲ್ದಾರ ಬಿ.ಎಸ್.ಕಡಕಬಾವಿ, ತಾಪಂ ಇಓ ಡಾ| ಭೀಮಾಶಂಕರ ಕನ್ನೂರ ಇದ್ದರು. ಫೌಂಡೇಶನ ಪಧಾಧಿಕಾರಿಗಳು ಹಾಗೂ ವಿವಿಧ ಶಾಲೆಗಳಿಂದ ಆಗಮಿಸಿದ ಮುಖ್ಯೋಪಾಧ್ಯಾಯರು, ಶಿಕ್ಷಕರು ವಿದ್ಯಾರ್ಥಿ/ನೀಯರು ಪಾಲ್ಗೊಂಡಿದ್ದರು.
“ಅಭಿರುಚಿಗೆ ತಕ್ಕಂತೆ ಶಿಕ್ಷಣ ಕೊಡಿಸಿದಲ್ಲಿ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗಲು ಸಾಧ್ಯ”


