ಕಾಗವಾಡ:ಮುಖ್ಯ ಮಂತ್ರಿಗಳ ೫೦ಕೋಟಿ ವಿಶೇಷ ಅನುದಾನ ಮಂಜೂರಾಗಿದು ಕ್ಷೇತ್ರದ ಮೂಲಭೂತ ಸಮಸ್ಯೆಗಳಿಗೆ ಹಾಗೂ ಸರ್ವಾಂಗೀಣ ಅಭಿವೃದ್ಧಿಗಾಗಿ ಒತ್ತುಕೊಡಲಾಗುವುದು ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು
ಅವರು ಬುಧವಾರ ದಿ.೨೧ ರಂದು ಶ್ರೀ ಕ್ಷೇತ್ರ ಮಂಗಸೂಳಿ ಶ್ರೀ ಮಲಯ್ಯ ದೇವಸ್ಥಾನದ ದೇವಿವನದ ಅಭಿವೃದ್ಧಿ ಗಾಗಿ ಅರಣ್ಯ ಇಲಾಖೆ ವತಿಯಿಂದ ೧ಕೋಟಿ ರೂ ಅನುದಾನದಲ್ಲಿ ೬೦ಲಕ್ಷ ಹಣ ಬಿಡುಗಡೆಯಾಗಿದ್ದು, ಉಳಿದ ೪೦ಲಕ್ಷ ರೂ ಅನುದಾನ ಶೀಘ್ರದಲ್ಲೇ ಬರಲಿದೆ ಎಂದ
ಅವರು ಕಾಗವಾಡ,ಶೇಡಬಾಳ,ಲೋಕುರ ಮಂಗಸೂಳಿ ಗ್ರಾಮಗಳು ಸೇರಿದಂತೆ ೬ಕೆರೆ ತುಂಬುವ ಯೋಜನೆಗೆ ೨೬ ಕೋಟಿ ಹಣ ಟೇಂಡರ್ ಪ್ರಕಿಯೆ ಮುಗಿದಿದ್ದು ಶೀಘ್ರದಲ್ಲೇ ಕಾಮಗಾರಿ ಕೈಗೊಳಲಾಗುವದು ಎಂದರು.
ಉಗಾರ ಖುರ್ದಗ್ರಾಮದಲ್ಲಿ ೪೦ ಲಕ್ಷ ಅನುದಾನದಲ್ಲಿ ಮಂಜೂರಾದ ಭಗತ ಸಿಂಗ ಸರ್ಕಲದಿಂದ ರೇಲ್ವೆ ಗೇಟ್ ವರಗೆ ರಸ್ತೆ ಸುಧಾರಣಾ ಕಾಮಗಾರಿ ಹಾಗೂ ಸೀಮಿ ಲಕ್ಷ್ಮಿ ದೇವಿ ಗುಡಿಯಿಂದ ೩೫ ಲಕ್ಷ ರಸ್ತೆ ಸುಧಾರಣೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಈ ವೇಳೆ ತಾಪಂ ಎ ಇ ವಿರಣ್ಣಾ ವಾಲಿ ಜಿಪಂ ಮಾಜಿ ಸದಸ್ಯ ರವಿಂದ್ರ ಪೂಜಾರಿ,ಮುಕುಂದ ಪೂಜಾರಿ , ಎ ಸಿ ಎಫ್ ಭೀಮಗೊಂಡ, ಆರ್ ಎಪ್ ಒ ರಾಕೇಶ ಅರ್ಜುನವಾಡ,ಮುಖ್ಯಾಧಿಕಾರಿ ಮಹಾಂತೇಶ ಕವಲಾಪುರ
ಅಭಿಯಂತರ ಮಡಿವಾಳಪ್ಪ ಪಾಟೀಲ ಇಂಜಿನಿಯರ ಸಂತೊಷ, ನಾಗರಾಜ ,ಗ್ರಾಪಂ ಅಧ್ಯಕ್ಷ ಬಾಳು ಭಜಂತ್ರಿ, ಸಂಜಯ ತಳವಲಕರ,ವಿನಾಯಕ ಕಾಂಬಳೆ,ವಿಜಯ ಅಸೋದೆ, ಪ್ರಕಾಶ್ದಿ ಕಾಂಬಳೆ, ಬಾಳಕೃಷ್ಣ ಭಜಂತ್ರಿ ಲಿಪ್ಪ ಹುಲೋಳಿ ಪಿಡಿಒ ಸೂರ್ಯವಂಶಿ ಸಮಿಉಲ್ಲಾ ಬಾರಗೀರ,ಶೇರಅಲಿ ಬಾರಗೀರ ಎಚ್ ಎನ್ ನದಾಫ, ಮಹಾದೇವ ಕಟಗೇರಿ, ಸುರೇಶ ಕಟಗೇರಿ ಸೇರಿದಂತೆ ಇತರರು ಇದ್ದರು.


