ಇಂಡಿ: ಮಹಾತ್ಮಾಗಾಂಧಿ ರೋಜಗಾರ ಯೋಜನೆಯಿಂದ ಗ್ರಾಮಿಣ ಭಾಗದ ಜನರ ಬದುಕಿಗೆ ವರದಾನವಾಗಲಿ ಎಂಬ ಸದಾಶಯದಿಂದ ಅಂದಿನ ಪ್ರಧಾನಿ ಮನಮೋಹನ ಸಿಂಗ ಅವರು ಜಾರಿಗೆ ತಂದ ಮಹತ್ವಾಕಾಂಕ್ಷಿ ಯೋಜನೆಯಾಗಿತ್ತು. ಆದರೆ ಇಂದು ಕೇಂದ್ರ ಸರ್ಕಾರ ಈ ಯೋಜನೆಯನ್ನು ರದ್ದುಗೊಳಿಸುವ ಮೂಲಕ ಬಡವರ ಹೊಟ್ಟೆ ಮೇಲೆ ಹೊಡೆಯುವ ಕೇಲಸ ಮಾಡುತ್ತಿದೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ದ ಗುಡುಗಿದರು.
ಅವರು ನಗರದ ಕಾಂಗ್ರೇಸ ಪಕ್ಷದ ಕಾರ್ಯಾಲಯದಲ್ಲಿ ಇಂಡಿ-ಬಳ್ಳೊಳಿ ಬ್ಲಾಕ್ ಕಾಂಗ್ರೇಸ್ ಸಮಿತಿ ಹಮ್ಮಿಕೊಂಡ ಮ-ನರೇಗಾ ಉಳಿಸಿ ಅಭಿಯಾನ ಕುರಿತು ನಡೇದ ಪಕ್ಷದ ಕಾರ್ಯಕರ್ತರ ಜೊತೆ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಾತ್ಮಗಾಂಧಿಜಿಯವರು ಈ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿ ಸ್ವಾತಂತ್ಯ್ರೆ ತಂದು ಕೊಟ್ಟು ದೇಶಕ್ಕಾಗಿ ತಮ್ಮ ಜೀವನವನ್ನೆ ತ್ಯಾಗ ಮಾಡಿದ್ದಾರೆ. ಇಂತಹ ಮಹಾತ್ಮನ ಹೇಸರನ್ನು ತೆಗೆದು ಹಾಕಿ ಜಿ ರಾಮ ಜಿ ಎಂದು ಹೇಸರು ಬದಲಾವಣೆ ಮಾಡಿರುವುದು ಯಾವ ನ್ಯಾಯ. ಕೇಂದ್ರದಲ್ಲಿ ನಿಮ್ಮದೆಯಾದ ಸರ್ಕಾರ ಇದ್ದು ಹೊಸ ಯೋಜನೆಗಳನ್ನು ರೂಪಿಸಿ ನಿಮಗೆ ಬೇಕಾದ ಹೇಸರನ್ನು ಇಡಿ ಅದನ್ನು ಬಿಟ್ಟು ಒಬ್ಬ ಮಹಾತ್ಮನ ಹೇಸರು ಬದಲಿಸಿ ಅವಮಾನ ಮಾಡಿದ್ದು ಖಂಡನಿಯ ಎಂದರು.
ಮ.ನರೇಗಾ ಉಳಿಸಿ ಅಭಿಯಾನದ ಹೋರಾಟಕ್ಕಾಗಿ ಸಾಲೋಟಗಿಯಿಂದ ಇಂಡಿ ವರೆಗೆ ಭೃಹತ ಪಾದಾ ಯಾತ್ರೆ ಕೈಗೊಳ್ಳಲಾಗುವುದು. ಮುಂಬರುವ ಸ್ಥಳಿಯ ಸಂಸ್ಥೆಗಳ ಚುನಾವಣೆಯ ಕುರಿತು ಮತ್ತೊಮ್ಮೆ ಕಾರ್ಯಕರ್ತ ಸಭೆ ಕರೆಯಲಾಗುವುದು. ಇಲ್ಲಿ ಯಾರು ದೊಡ್ಡವರು ಸಣ್ಣವರು ಎನ್ನು ಭೇಧ ಭಾವ ನಮ್ಮಲ್ಲಿ ಬರಬಾರದು ನಾವು ಎಲ್ಲರು ಕಾರ್ಯಕರ್ತರಾಗಿದ್ದು ನಾವು ಎಲ್ಲರು ಒಂದೇ ಎನ್ನುವ ಭಾವನೆ ನಮ್ಮಲಿರಬೇಕು. ಕಾರ್ಯಕರ್ತರು ಯಾವುದೆ ಕಾರಣಕ್ಕೂ ಅಸಮಾಧಾನ ಪಡಬಾರದು ಎಂದು ಕಿವಿ ಮಾತು ಹೇಳಿದರು.
ಜಿಲ್ಲಾ ಗ್ಯಾರೆಂಟಿ ಸಮಿತಿ ಅಧ್ಯಕ್ಷ ಇಲಿಯಾಸ ಬೋರಾಮಣಿ, ಬಳ್ಳೊಳಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬಿ.ಸಿ.ಸಾವಕಾರ ಮಾತನಾಡಿದರು.
ಈ ಸಂದರ್ಭದಲ್ಲಿ ಲಿಂಬೆ ಅಭಿವೃದ್ದಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ, ಜಟ್ಟೆಪ್ಪ ರವಳಿ, ಇಂಡಿ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶಿವಯೋಗೆಪ್ಪ ಚನ್ನಗೊಂಡ, ನಗರ ಘಟಕದ ಅಧ್ಯಕ್ಷ ಶ್ರೀಕಾಂತ ಕೂಡಿಗನೂರ, ಜಾವಿದ ಮೋಮಿನ, ಕೆಪಿಸಿಸಿ ಸದಸ್ಯ ಮಲ್ಲನಗೌಡ ಪಾಟೀಲ, ಕಲ್ಲನಗೌಡ ಬಿರಾದಾರ, ಪ್ರಶಾಂತ ಕಾಳೆ, ನೀಲಕಂಠಗೌಡ ಪಾಟೀಲ, ಸಣ್ಣಪ್ಪ ತಳವಾರ, ರಶೀದ ಅರಬ, ಸತ್ತಾರ ಬಾಗವಾನ, ಭೀಮಾಶಂಕರ ಮೂರಮನ, ಮುತ್ತಪ್ಪ ಪೋತೆ, ಧರ್ಮರಾಜ ವಾಲಿಕಾರ, ಮಹೇಶ ಹೊನ್ನಬಿಂದಗಿ, ನಿರ್ಮಲಾ ತಳಕೇರಿ, ಬೀರಾದಾರ, ಸತೀಶ ಕುಂಬಾರ ಸದಾಶೀವ ಪ್ಯಾಟಿ, ಭೀಮಸಾವಕಾರ ಮೇತ್ರಿ ಸೇರಿದಂತೆ ಅನೇಕರು ಇದ್ದರು.


