ಶಿಕ್ಷಕ ವೃತ್ತಿ ಬಹಳ ಪವಿತ್ರವಾದದ್ದು ಮತ್ತು ಶ್ರೇಷ್ಟವಾದದ್ದು : ಬಸವಲಿಂಗ ಶರಣರು 

Hasiru Kranti
ಶಿಕ್ಷಕ ವೃತ್ತಿ ಬಹಳ ಪವಿತ್ರವಾದದ್ದು ಮತ್ತು ಶ್ರೇಷ್ಟವಾದದ್ದು : ಬಸವಲಿಂಗ ಶರಣರು 
WhatsApp Group Join Now
Telegram Group Join Now

ಇಂಡಿ: ಶಿಕ್ಷಕ ವೃತ್ತಿ ಬಹಳ ಪವಿತ್ರವಾದದ್ದು ಮತ್ತು ಶ್ರೇಷ್ಟವಾದದ್ದು ಅನ್ಯಕ್ಷೇತ್ರೆ ಕೃತಂ ಪಾಪಂ ಪುಣ್ಯ ಕ್ಷೇತ್ರ ವಿನಶ್ಯತಿ ಪುಣ್ಯ ಕ್ಷೇತ್ರ ಕೃತಂ ಪಾಪ ವಜ್ರ ಲೇಪಿ ಭವಿಷ್ಯತಿ ಎಂದು ಆಲಮೇಲ ಆರೂಢ ಮಠದಪೂಜ್ಯ ಬಸವಲಿಂಗ ಶರಣರು  ಹೇಳಿದರು.

ಅವರು ತಾಲೂಕಿನ ಅಜು೯ಣಗಿ ಕೆಡಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎ¥sï ಎಲ್ ಎನ್ ಕಲಿಕಾ ಹಬ್ಬ ಕಾರ್ಯಕ್ರಮzÀ ಸಾನಿದ್ಯ ವಹಿಸಿ ಆಶಿರ್ವಚನ ನೀಡಿದರು.

ಪ್ರತಿಯೊಬ ಶಿಕ್ಷರು ಮಕ್ಕಳಿಗೆ ಬೋಧನೆ ಜೋತೆಗೆ ಒಳ್ಳೆಯ ಆಚಾರ ವಿಚಾರ, ಸಂಸ್ಕೃತಿಯನ್ನು ರೊಡಿಸಿಕೊಳ್ಳುವಂತೆ ನೀತಿ ಪಾಠವನ್ನು ಹೇಳಿಕೊಡಬೇಕು. ಇದರಿಂದಾಗಿ ಶಿಕ್ಷಕರ ಜೊತೆಗೆ ಪಾಲಕ ಬಾಲಕ ಶಿಕ್ಷಕ ತ್ರೀವೇಣಿ ಸಂಗಮ ಇದ್ದಂತೆ ಅವರು ಒಳ್ಳೆಯವರಾಗಿದ್ದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದರು.

ಪಾವನ ಸಾನಿಧ್ಯ ಗೋಳಸಾರದ ಪೂಜ್ಯ ಅಭಿನವ ಪುಂಡಲಿಂಗ ಶಿವಯೋಗಿಗಳು ಸಸಿಗೆ ನೀರುಣಿಸುವ ಮೂಲಕ ಉದ್ಘಾಟಿಸಿದರೂ. ಡಾ|| ಸುರೇಶ ಪ್ಯಾಟಿ ಅಧ್ಯಕ್ಷತೆ ವಹಿಸಿದ್ದರೂ. ಮುಖ್ಯ ಅತಿಥಿಗಳಾಗಿ ಫರ್ವೇಜ್ ಪಟೇಲ, ಕುಲಕರ್ಣಿ ಸರ್, ಪ್ರೌಢ ಶಾಲೆಯ ಮುಖ್ಯಗುರುಗಳಾರ ವಿನೋದ ದೊಡ್ಡ ಗಾಣಿಗೇರೆ,  ಡಿ.ಬಿ ಕುಂಬಾರ ಇದ್ದರು. ಯುವ ಮುಖಂಡ ಮಂಜು ನಾಥ ಕಾಮಗೊಂಡ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ಬ್ಯಾಗ ವಿತರಿಸಿದರೂ.

ಸುಮಾರು 14 ಶಾಲೆಯ ಮಕ್ಕಳು ಭಾಗವಹಿಸಿದ್ದು ವಿಶೇಷವಾಗಿತ್ತು. ಸಮಾರೋಪ ಸಮಾರಂಭದಲ್ಲಿ ಮಕ್ಕಳಿಗೆ ಕಂಪಾಸು ಪೆನ್ನು ನೋಟ್ ಬುಕ್ಕು ಪ್ಯಾಡ್ ವಿತರಣೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಶಾಲೆಯಿಂದ ವರ್ಗಾವಣೆಗೊಂಡ ಕ್ಲಸ್ಟರಿಂದ 5 ಜನರಿಗೆ ಬಿಳ್ಕೋಡಲಾಯಿತು.  ಸಿ. ಎನ್ ಮಿಂಚನಾಳ ಶಿಕ್ಷಕರಿಗೆ 5ಗ್ರಾಂ ಬೆಳ್ಳಿ ಪದಕ ಉಡುಗೊರೆ ನೀಡಿ ಗೌರವಿಸಲಾಯಿತು. ಶಿಕ್ಷಕರತ್ನ ಪ್ರಶಸ್ತಿ ಪಡೇದ ಶಿಕ್ಷಕರಿಗೆ ಸನ್ಮಾನಿಸಲಾಯಿತು. ಈರಣ್ಣಾ ತಳವಾರ ರೇಷ್ಮಾ ಪವಾರ ಮುಂತಾದ 70 ಹೆಚ್ಚು ಜನ ಶಿಕ್ಷಕರು 400 ಹೆಚ್ಚು ಮಕ್ಕಳು ಭಾಗವಹಿಸಿದ್ದು ವಿಶೇಷವಾಗಿತ್ತು.

ಮೆರವಣಿಗೆ ಗ್ರಾಪಂ ಅಧ್ಯಕ್ಷ ಚಿಗರಿ ಅದ್ದೂರಿAiÀiÁV ಚಾಲನೆ ನೀಡಿದರು. ಗ್ರಾಮದ ಯು ಬಿ.ಎಸ್ ಶಾಲೆಯಿಂದ ಕನ್ನಡ ಗಂಡು ಮಕ್ಕಳ ಶಾಲೆ ಅರ್ಜುಣಿಗಿ ಕೆ. ಡಿ ಶಾಲೆಯವರೆಗೆ ಮೆರವಣಿಗೆ ಜರುಗಿತು.

ಮೇರವಣಿಗೆಯಲ್ಲಿ ರಾಣಿ ಚನ್ನಮ್ಮ, ಒನಿಕೆ ಓಬವ್ವ, ಸಂಗೊಳ್ಳಿ ರಾಯಣ್ಣ ವಿವಿಧ ವೇಶಧರಿಸಿದ ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡರು. ಮುಖ್ಯಗುರು ಪಂಡಿತ ಅವಜಿ ಸ್ವಾಗತಿಸಿ ನಿರೂಪಿಸಿದರು. ²PÀëQ ರೇಷ್ಮಾ ಪವಾರ ವಂದಿಸಿದರು.

WhatsApp Group Join Now
Telegram Group Join Now
Share This Article